ದರ್ಶನ್ ಮೇಲೆ ಮಾಧ್ಯಮಗಳಿಗೇಕೆ (Media) ಕೋಪ? ಚಾಲೆಂಜಿಂಗ್ ಸ್ಟಾರ್ (Challenging Star) ದರ್ಶನ್ ಅವರನ್ನು ಮಾಧ್ಯಮಗಳು ದೂರವಿಟ್ಟಿದ್ದೇಕೆ(Why media banned Actor Darshan?)? ದರ್ಶನ್ ಕಂಡ್ರೆ ಸುದ್ದಿ ಮಾಧ್ಯಮಗಳಿಗೆ ಸಿಟ್ಟೇಕೆ? ಮಾಧ್ಯಮಗಳು ದರ್ಶನ್ ಚಿತ್ರದ ಪ್ರಚಾರವನ್ನೇ ಮಾಡಲ್ಲ ಕಾರಣ ಏನು?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯೋ ಮುನ್ನ ದರ್ಶನ್ ಅವರ ಹೊಸ ಕ್ರಾಂತಿಯ ಬಗ್ಗೆ ತಿಳಿಯೋಣ.
ದರ್ಶನ್ ತಮ್ಮ `ಕ್ರಾಂತಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ (Kannada Film Industry) ಹೊಸತೊಂದು ಕ್ರಾಂತಿ ಮಾಡಲು ಹೊರಟಿದ್ದಾರೆ.
ಅದೇನಂದ್ರೆ ತಮ್ಮ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲೇ(Social Media) ಪ್ರಚಾರ ಮಾಡಲು ಮುಂದಾಗಿದ್ದಾರೆ. ಆ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ ಚಾಲೆಂಜಿಂಗ್ ಸ್ಟಾರ್ ! ಇವರ ಸಾಹಸಕ್ಕೆ ಅಭಿಮಾನಿಗಳೆಲ್ಲಾ ಕೈಜೋಡಿಸುತ್ತಿದ್ದಾರೆ.
https://vijayatimes.com/history-vintage-ambasador-car/
ಕನ್ನಡ ಚಿತ್ರರಂಗದ ಮಾಸ್ ಬ್ರ್ಯಾಂಡ್ (Mass Brand) ಎಂದೇ ಕರೆಯಲ್ಪಡುವ ಅಭಿಮಾನಿಗಳ ನೆಚ್ಚಿನ ‘ದಾಸ’.‘ಮೆಜೆಸ್ಟಿಕ್’ (Mejestik) ನ 6 ಅಡಿ ಎತ್ತರದ ಕಟೌಟ್, ಕನ್ನಡಿಗರ ಅಚ್ಚುಮೆಚ್ಚಿನ `ಡಿ ಬಾಸ್‘, ಅಭಿಮಾನಿಗಳ
ಅಭಿಮಾನಿ ನಾ ಎಂದು ಕರೆದ ಏಕೈಕ ಸ್ಟಾರ್, ಮತ್ತೊಂದು `ಕ್ರಾಂತಿ’ ಯನ್ನು ಸೃಷ್ಟಿಸಲು ಸಜ್ಜಾಗಿರುವ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ನಟ ತೂಗುದೀಪ ದರ್ಶನ್ (Thoogudeepa Darshan).
ದರ್ಶನ್ ಹೆಸರು ಕೇಳಿದ್ರೆ ಕನ್ನಡ ಸಿನಿಪ್ರೇಕ್ಷಕರು ಮಾತ್ರವಲ್ಲದೇ ಪಡ್ಡೆ ಹೈಕ್ಳು, ಹಳ್ಳಿ ಹೈದರು, ಶಿಳ್ಳೆ-ಚಪ್ಪಾಳೆ ಹೊಡಿಯುವ ಮಾಸ್ ಅಭಿಮಾನಿಗಳು,
ಹಿರಿಯರು ಸೇರಿದಂತೆ ಎಲ್ಲರೂ ಒಟ್ಟುಗೂಡಿ ಬಾಸ್ ಬಾಸ್ ಡಿ ಬಾಸ್ ಎಂದು ಕೂಗುವ ಮೂಲಕ ತಮ್ಮ ನೆಚ್ಚಿನ ನಾಯಕ ದರ್ಶನ್ ಅವರನ್ನು ಯಾವುದೇ ವೇದಿಕೆಯಾದರೂ ಇದೇ ಕೂಗಿನೊಂದಿಗೆ ಬರ ಮಾಡಿಕೊಳ್ಳುತ್ತಾರೆ.
ಅದು ದರ್ಶನ್ ಅವರ ಮೇಲೆ ಕನ್ನಡಿಗರಿಟ್ಟಿರುವ ಪ್ರೀತಿ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಹೆಸರನ್ನು ಹಂತ ಹಂತವಾಗಿ ಕನ್ನಡಿಗರ ಮನಸ್ಸಲ್ಲಿ ಬೇರೂರುವಂತೆ ಮಾಡಿದ ನಟ ಅಂದ್ರೆ ಅದು ದರ್ಶನ್.
ಮೆಜೆಸ್ಟಿಕ್(Mejestic) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದರ್ಶನ್, ಜೀವನದ ಚಾಲೆಂಜ್‍ಗಳನ್ನು ಎದುರಿಸಿಯೇ ಇಂದು ಅಭಿಮಾನಿಗಳ ನೆಚ್ಚಿನ `ಚಾಲೆಂಜಿಂಗ್ ಸ್ಟಾರ್’ ಆಗಿರುವುದು.
ಕನ್ನಡಿಗರ ಮನೆ ಮಗ ನಟ ದರ್ಶನ್ ಅಭಿಮಾನಿಗಳನ್ನು ಪ್ರೀತಿಯಿಂದಲೇ ಅಪ್ಪಿಕೊಂಡು, ಒಳ್ಳೆ ಸಲಹೆಗಳನ್ನು ನೀಡುವ ಅವರು, ಕೋಪದಿಂದ ಬೈದು ಬುದ್ದಿ ಹೇಳಿ ತಿದ್ದಿರುವ ಹಲವು ನಿದರ್ಶನಗಳು ಕೂಡ ಉಂಟು.
ಕಠಿಣ ಪರಿಶ್ರಮದಿಂದಲೇ ತಾವು ಬೆಳೆದು, ತಮ್ಮವರನ್ನು ಬೆಳೆಸುತ್ತಿರುವ ನಟ ದರ್ಶನ್ ಅವರನ್ನು ತುಳಿಯುತ್ತಿರುವವರ ಸಂಖ್ಯೆಗೇನೂ ಕೊರತೆ ಇಲ್ಲ.
ದರ್ಶನ್ ಅವರ ಮುಂಗೋಪ, ಒರಟು ವರ್ತನೆಯಿಂದ ಅವರು ಸಾಕಷ್ಟು ವಿವಾದಕ್ಕೀಡಾಗಿರೋದು ಸತ್ಯ. ದರ್ಶನ್ ಅವರ ಕೆಟ್ಟ ಕಾಲದಲ್ಲಿ ಮಾಧ್ಯಮಗಳು ನಕಾರಾತ್ಮಕ ವರದಿಗಳನ್ನು ಮಾಡಿದ್ದವು.
ಇದನ್ನು ಅಷ್ಟೇ ಕಟು ಶಬ್ದಗಳಲ್ಲಿ ದರ್ಶನ್ ಅವರೂ ವಿರೋಧಿಸಿದ್ರು(Why media banned Actor Darshan?). ಇದು ಮಾಧ್ಯಮ ಮತ್ತು ದರ್ಶನ್ ಅವರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದೆ.
ದರ್ಶನ್ ಅವರನ್ನು ಸುದ್ದಿ ಮಾಧ್ಯಮಗಳು ನಿರ್ಲಕ್ಷ್ಯ ಮಾಡುತ್ತಿರುವುದರ ವಿರುದ್ಧ ಕಳೆದ ಹಲವು ದಿನಗಳಿಂದ ಅವರ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
ಈ ಕುರಿತು ದರ್ಶನ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಇನ್ಸ್ಟಾಗ್ರಾಂ, ಫೇಸ್‍ಬುಕ್ ಒಳಗೊಂಡಂತೆ ಮತ್ತಿತ್ತರ ಖಾತೆಗಳಲ್ಲಿ ದರ್ಶನ್ ಅವರ ಪರ ಬ್ಯಾಟ್ ಬೀಸುತ್ತಿದ್ದಾರೆ.
ಈ ಕುರಿತು ಅಭಿಮಾನಿಯೊಬ್ಬರು ಮಾತನಾಡಿ, ಚಾಲೆಂಜಿಂಗ್ ಸ್ಟಾರ್ ಅವರ ಹೊಸ ಚಿತ್ರ ಕ್ರಾಂತಿ ಸಿನಿಮಾಗೆ ಯಾವ ಮಾಧ್ಯಮವೂ ಸುದ್ದಿ ನೀಡಿಲ್ಲ! ಪರವಾಗಿಲ್ಲ, ನಮ್ಮ ದರ್ಶನ್ ಅವರ ಕ್ರಾಂತಿ ಚಿತ್ರಕ್ಕೆ ಯಾವ ಮಾಧ್ಯಮದ ಪುಕ್ಕಟೆ ಪ್ರಚಾರವೂ ಬೇಕಾಗಿಲ್ಲ, ದರ್ಶನ್ ಅವರ ಹೆಸರು ಬಳಸುವ ಅವಶ್ಯಕತೆಯಿಲ್ಲ.
ದರ್ಶನ್ ಅವರ ಹೆಸರು ಕನ್ನಡಿಗರ ಮನದಲ್ಲಿದೆ, ಅವರ ಕ್ರಾಂತಿ ಸಿನಿಮಾವನ್ನು ಯಾವುದೇ ಮಾಧ್ಯಮದ ಪ್ರಚಾರ ಬಳಸದೇ ಅಭಿಮಾನಿಗಳ ಪ್ರಚಾರದಿಂದಲೇ ಹೊಸ `ಕ್ರಾಂತಿ’ ಸೃಷ್ಟಿ ಮಾಡುತ್ತೇವೆ,
ಎಂದು ಹೇಳುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕುರಿತು ಸ್ವತಃ ನಟ ದರ್ಶನ್ ಅವರೇ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅಭಿಮಾನಿಗಳು ತಮ್ಮ ಪರ ನಿಂತು, ಕೊಟ್ಟ ಪ್ರೀತಿಯ ಬಗ್ಗೆ ಉಲ್ಲೇಖಿಸಿ,
“ನಾ ನಡೆಯೋ ಹಾದಿಯಲ್ಲಿ ನನ್ನೊಂದಿಗೆ ಸದಾ ನಿಲ್ಲುವ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಾನು ಸದಾ ಚಿರಋಣಿ. ನೀವು ನನಗೆ ನೀಡುತ್ತಿರುವ ಸಾಥ್‍ಗೆ ನಾನು ಆಭಾರಿಯಾಗಿದ್ದೇನೆ,
ನಿಮ್ಮ ಈ ಪ್ರೀತಿಯನ್ನು ವರ್ಣಿಸಲು ಬಹುಕೋಟಿ ಪದಗಳೇ ಸಾಲದು – ನಿಮ್ಮ ದಾಸ ದರ್ಶನ್” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ದರ್ಶನ್ ಅವರ ಈ ಪೋಸ್ಟ್(Post) ನೋಡಿದ ಅಭಿಮಾನಿಗಳು, ಅವರ ಪರ ತಮ್ಮ ಅನಿಸಿಕೆ ವ್ಯಕ್ತಪಡಿಸುವ ಮೂಲಕ ಮತ್ತಷ್ಟು ಬೆಂಬಲ ಸೂಚಿಸಿದರು.
ಸುದ್ದಿ ಮಾಧ್ಯಮಗಳು ಪೂರ್ಣವಾಗಿ ಹೊರಹೊಮ್ಮುವ ಸಮಯಕ್ಕೂ ಮೊದಲಿನಿಂದಲೂ ದರ್ಶನ್ ಅವರ ಸಿನಿಮಾಗಳನ್ನು ಸಂಭ್ರಮಿಸಿದ್ದೇವೆ, ಈಗಲೂ ಮಾಧ್ಯಮಗಳ ಪ್ರಚಾರವಿಲ್ಲದೇ ಸಂಭ್ರಮಿಸುತ್ತೇವೆ.
ಇಂದು ಮಾಧ್ಯಮ ದರ್ಶನ್ ಅವರನ್ನು ಗುರಿಯಾಗಿಸಿಕೊಂಡು ನಿರಾಕರಿಸಿರಬಹುದು. ದರ್ಶನ್ ಅವರಿಗೆ ಯಾವುದೇ ಮಾಧ್ಯಮ ಪ್ರಚಾರ ಅವಶ್ಯಕತೆಯಿಲ್ಲ, ಆದ್ರೆ, ಮಾಧ್ಯಮಕ್ಕೆ ದರ್ಶನ್ ಅವರಿಂದ ಟಿಆರ್ಪಿ(TRP) ಬೇಕು ಅಷ್ಟೇ!
ನಾವೆಲ್ಲರೂ(ಅಭಿಮಾನಿಗಳು) ಒಟ್ಟುಗೂಡಿ ಸಿನಿಮಾ ಸಂಭ್ರಮ ಅಂದ್ರೆ ಏನು? ಮಾಧ್ಯಮಗಳ ಬೆಂಬಲವಿಲ್ಲದೇ ಕ್ರಾಂತಿ ಸಿನಿಮಾವನ್ನು ಹೇಗೆ ಗೆಲ್ಲಿಸುತ್ತೇವೆ ಎಂಬುದನ್ನು ಕಾದು ನೋಡಿ ಎಂದು ಹೇಳಿಕೊಂಡಿದ್ದಾರೆ.
“ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಅವರು ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡುತ್ತಲ್ಲೇ ಬಂದಿದ್ದಾರೆ. ಕನ್ನಡಿಗರನ್ನು ಮನರಂಜಿಸುವುದಲ್ಲದೇ, ವನ್ಯಜೀವಿ ಸಂಕುಲಗಳಿಗೆ ಅನೇಕ ಕೊಡುಗೆ ನೀಡಿದ್ದಾರೆ.
ಮಾಧ್ಯಮದವರು ಅವರನ್ನು ಬಹಿಷ್ಕರಿಸಿದ್ದೇವೆ ಅಂದುಕೊಂಡ್ರೆ ಅದು ಅವರ ಕನಸು ಅಷ್ಟೇ! ಯಾವ ಮಾಧ್ಯಮದ ಪ್ರಚಾರವೂ ದರ್ಶನ್ ಸರ್ ಅವರಿಗೆ ಅವಶ್ಯಕತೆಯಿಲ್ಲ.
ಕ್ರಾಂತಿ ಚಿತ್ರವನ್ನು ಅಭಿಮಾನಿಗಳೇ `ಕ್ರಾಂತಿ’ಗೊಳಿಸುತ್ತೇವೆ ಕಾದು ನೋಡಿ” ಎಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದ ದರ್ಶನ್ ಅಭಿಮಾನಿ ತೇಜಸ್ ಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ದಾಸ ದರ್ಶನ್ ಅವರ ಅಭಿಮಾನಿಗಳೆಲ್ಲರೂ ಒಟ್ಟುಗೂಡಿ `ಕ್ರಾಂತಿ’ಗೊಳಿಸಲು ಸಜ್ಜಾಗಿರುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ನಟ ದರ್ಶನ್ ಅವರ ಅಭಿಮಾನಿಗಳ ಈ ನಡೆ ಯಾವ ಹಂತವನ್ನು ತಲುಪಲಿದೆ ಎಂಬುದನ್ನು ಅವರೇ (ಅಭಿಮಾನಿಗಳೇ) ಹೇಳುವಂತೆ ಕಾದು ನೋಡಬೇಕಿದೆ.
- ಮೋಹನ್ ಶೆಟ್ಟಿ