ಗಂಧದ ಮರದಲ್ಲಿ ಹಾವುಗಳು ಹೆಚ್ಚಾಗಿ ಕಂಡುಬರುವುದಕ್ಕೆ ಕಾರಣವೇನು? ; ಇಲ್ಲಿದೆ ಓದಿ ಅಚ್ಚರಿ ಮಾಹಿತಿ

ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಯ ಜೀವನವೂ ಕೂಡ ವಿಶಿಷ್ಟ. ಅದೇ ರೀತಿ ಸರೀಸೃಪಗಳೆಂದು ಕರೆಯಲ್ಪಡುವ ಹಾವುಗಳ(Snakes) ಜೀವನ ಕೂಡ ಎಲ್ಲರ ನಿರೀಕ್ಷೆಗೂ ಮೀರಿದ್ದು, ‘ಹಾವು’ ಎನ್ನುವುದು ಹೆಚ್ಚಿನವರಿಗೆ ಒಂದು ಕುತೂಹಲಕಾರಿ ವಿಷಯ. ಈ ಹಾವುಗಳು ಹೆಚ್ಚಾಗಿ ಪೊದೆಗಳ ಒಳಗೆ, ಕೆಲವು ಮರಗಳ ಮೇಲೆ ಕಾಣಸಿಗುತ್ತದೆ. ಆದರೆ ಹೆಚ್ಚಾಗಿ ಹಾವುಗಳು ಕಾಣಸಿಗುವುದು ಗಂಧದ ಮರದಲ್ಲಿ, ಇದಕ್ಕೆ ಕಾರಣ ಏನು ಅನ್ನುವುದು ಕುತೂಹಲದ ವಿಷಯ. ಇನ್ನು ಹಿರಿಯರ ಪ್ರಕಾರ ಹಾವುಗಳು ಗಂಧದ ಮರದ ಸುವಾಸನೆಯಿಂದ ಆಕರ್ಷಿತವಾಗಿ ಅಲ್ಲಿ ವಾಸಿಸುತ್ತವೆ ಎಂದು ಹೇಳುತ್ತಾರೆ.


ಆದರೆ ನಿಜವಾದ ಸಂಗತಿ ಬೇರೆಯೇ ಇದೆ. ಅಸಲಿಗೆ ಹಾವುಗಳಿಗೆ ವಾಸನೆ ಗ್ರಹಿಸುವ ಗ್ರಂಥಿಯೇ ಇಲ್ಲ, ಇವಕ್ಕೆ ಮೂಗಿನ ಹೊಳ್ಳೆಗಳಿದ್ದರೂ ಅದರಲ್ಲಿ ವಾಸನೆ ಗ್ರಹಿಸುವ ಶಕ್ತಿ ಇರುವುದಿಲ್ಲ. ಅದು ತನ್ನ ನಾಲಗೆಯ ಮುಖಾಂತರ ಕೇವಲ ರುಚಿ ಮತ್ತು ಹೊರಗಿನ ಉಷ್ಣಾಂಶವನ್ನು ಗ್ರಹಿಸುತ್ತದೆ. ಹಾವಿನ ಎರಡು ನಾಲಿಗೆಯಲ್ಲಿ ಒಂದು ರುಚಿ ಗ್ರಹಿಸಿದರೆ, ಇನ್ನೊಂದರಲ್ಲಿ ಶಾಖ ಗ್ರಹಿಸುತ್ತದೆ. ಮೂಗಿನ ಹೊಳ್ಳೆ ಕೇವಲ ಉಸಿರಾಡಲು ಮಾತ್ರ. ಹಾವುಗಳು ತಮ್ಮ ಹುರುಪೆಗಳಿಂದಲೂ ಹೊರಗಿನ ಉಷ್ಣಾಂಶವನ್ನು ಗ್ರಹಿಸುತ್ತವೆ. ನಮಗೆಲ್ಲಾ ತಿಳಿದಿರುವಂತೆ ಹಾವುಗಳು ಶೀತ ರಕ್ತದ ಜೀವಿಗಳು, ಹೆಚ್ಚಿನ ಉಷ್ಣಾಂಶವನ್ನು ಇವು ತುಂಬಾ ಹೊತ್ತು ಸಹಿಸುವುದಿಲ್ಲ.

ಗಂಧದ ಮರಗಳು(Sandalwood Trees) ಯಾವಾಗಲು ತಂಪನೆಯ ಗಾಳಿಯನ್ನು ಹೊರಸೂಸುತ್ತದೆ, ಗಂಧದ ಮರ ಇರುವ ಸುತ್ತಮುತ್ತ ತಂಪಾದ ವಾತಾವರಣ ಇರುತ್ತದೆ. ಈ ಕಾರಣದಿಂದಾಗಿ ಹಾವುಗಳು ತಮ್ಮ ನಾಲಿಗೆ ಹಾಗೂ ಹುರುಪೆಗಳ ಸಹಾಯದಿಂದ ಹೊರಗಿನ ಉಷ್ಣಾಂಶವನ್ನು ಅರಿತು ಗಂಧದ ಮರದ ಬಳಿ ಬಂದು ವಾಸಿಸುತ್ತವೆ.
ಅದೇ ರೀತಿ, ಬೇವಿನ ಮರದಲ್ಲಿಯೂ ಹಾವುಗಳು ಹೆಚ್ಚಾಗಿ ಬರಲು ಕೂಡ ಇದೇ ಕಾರಣ. ಹಾವುಗಳ ಕಣ್ಣು ಕೂಡ ಮಂದ, ಅವು ತಮ್ಮ ನಾಲಗೆಯ ಸಹಾಯದಿಂದಲೇ ತನ್ನ ಆಹಾರವನ್ನು ಹುಡುಕುತ್ತದೆ.

ಎದುರಿಗಿರುವ ಜೀವಿಯ ದೇಹದ ಉಷ್ಣಾಂಶವನ್ನು ಗ್ರಹಿಸುವ ಮೂಲಕ ತನ್ನ ಎದುರಾಳಿ ಎಷ್ಟು ದೂರ ಇದೆ, ಹಾಗೂ ಇದು ತನಗಿಂತ ಶಕ್ತಿಶಾಲಿಯೇ ಎನ್ನುವುದನ್ನು ಕಂಡು ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.

  • ಪವಿತ್ರ

Latest News

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.