Chattisgarh : ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ 30 ವರ್ಷದ ಮಹಿಳೆಯೊಬ್ಬಳು(Wife kills her husband brutally) ತನ್ನ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾಳೆ ಎಂದು ಆರೋಪಿಸಲಾಗಿದೆ.
ಮಹಿಳೆಯೂ ತನ್ನ ಪತಿಯ ಅಪಹಾಸ್ಯಕ್ಕೆ ಬೇಸತ್ತು ಆತನನ್ನು ಕೊಡಲಿಯಿಂದ ಹತ್ಯೆಗೈದಿರುವ ವಿಚಿತ್ರ(Wife kills her husband brutally) ಘಟನೆ ಛತ್ತೀಸ್‍ಘಡ್ ನಲ್ಲಿ ನಡೆದಿದೆ.
ಮಹಿಳೆಯ ಪತಿ ಆಕೆಯ ದೇಹದ ಬಣ್ಣದ ಬಗ್ಗೆ ಪ್ರತಿನಿತ್ಯ ಅಪಹಾಸ್ಯ ಮಾಡುತ್ತಿದ್ದ ಎನ್ನಲಾಗಿದೆ.
ಕಪ್ಪು ಮೈಬಣ್ಣದ ಬಗ್ಗೆ ಆತ ಪದೇ ಪದೇ ಗೇಲಿ ಮಾಡುತ್ತಿದ್ದದ್ದನ್ನು ಖಂಡಿಸಿ, ಆಕೆ ಪತಿಯನ್ನು ಹತ್ಯೆಗೈದಿದ್ದಾಳೆ ಎಂದು ಪೊಲೀಸರು ಮಂಗಳವಾರ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಅಮಲೇಶ್ವರ ಗ್ರಾಮದಲ್ಲಿ ಪತಿ ಅನಂತ್ ಸೋನ್ವಾನಿ (40) ಅವರನ್ನು ಕೊಂದ ಆರೋಪದಲ್ಲಿ ಸಂಗೀತಾ ಸೋನ್ವಾನಿ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ (ಪಟಾನ್ ಪ್ರದೇಶ) ದೇವಾಂಶ್ ರಾಥೋಡ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ : https://vijayatimes.com/ashok-gehlot-meets-sonia-gandhi/
ಪ್ರಾಥಮಿಕ ತನಿಖೆಯ ವರದಿಯ ಪ್ರಕಾರ, ಹತ್ಯೆಯಾದ ಪತಿ ತನ್ನ ಹೆಂಡತಿಯನ್ನು ನೀನು ಕಪ್ಪು, ಕೊಳಕು ಎಂದು ಪ್ರತಿನಿತ್ಯ ಅಪಹಾಸ್ಯ ಮಾಡುತ್ತಿದ್ದನ್ನು ಮತ್ತು ಅವಳ ಕಪ್ಪು ಚರ್ಮದ ಬಗ್ಗೆ ಆಗಾಗ್ಗೆ ಅವಳನ್ನು ನಿಂದಿಸುತ್ತಿದ್ದನು ಎನ್ನಲಾಗಿದೆ.
ಈ ವಿಚಾರವಾಗಿ ದಂಪತಿ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳವಾಗಿತ್ತು, ಭಾನುವಾರ ರಾತ್ರಿ ದಂಪತಿ ನಡುವೆ ಇದೇ ರೀತಿ ಜಗಳ ನಡೆದಿದ್ದು, ಮಾತಿನ ಭರಾಟೆ ವಿಕೋಪಕ್ಕೆ ತಲುಪಿದೆ.
ಕೋಪವನ್ನು ಸಹಿಸಲಾಗದ ಪತ್ನಿ ಸಂಗೀತಾ, ಪತಿಯ ಗುಪ್ತಾಂಗವನ್ನು ಕತ್ತರಿಸಿ, ಮನೆಯಲ್ಲಿಟ್ಟಿದ್ದ ಕೊಡಲಿಯಿಂದ ಕೊಚ್ಚಿ ಪತಿಯನ್ನು ಹತ್ಯೆಗೈದಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ಮರುದಿನ ಬೆಳಗ್ಗೆ ತನ್ನ ಪತಿಯನ್ನು ಯಾರೋ ಕೊಂದಿದ್ದಾರೆ ಎಂದು ಹೇಳುವ ಮೂಲಕ ಗ್ರಾಮಸ್ಥರನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸಿದ್ದಾಳೆ.
ಆದರೆ ನಂತರ ಪೊಲೀಸ್ ವಿಚಾರಣೆಯಲ್ಲಿ ಅಪರಾಧ ಮಾಡಿರುವುದಾಗಿ ಹೇಳಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ : https://vijayatimes.com/dadasaheb-phalke-award-for-asha-parekh/
ಹತ್ಯೆಯಾದ ಪತಿ ತನ್ನ ಮೊದಲ ಪತ್ನಿಯ ಸಾವಿನ ನಂತರ ಆರೋಪಿಯನ್ನು ಮದುವೆಯಾಗಿದ್ದ ಎಂದು ವರದಿಯಲ್ಲಿ ಹೇಳಲಾಗಿದೆ.
ಮಹಿಳೆಯ ವಿರುದ್ಧ ಐಪಿಸಿಯ ಸೆಕ್ಷನ್ 302 (ಕೊಲೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ರಾಥೋಡ್ ಮಾಹಿತಿ ನೀಡಿದ್ದಾರೆ.