Bengaluru: ನಿಜವಾಗ್ಲೂ ಕಾಂಗ್ರೆಸ್ (Congress) ಗ್ಯಾರಂಟಿ ಜಾರಿಯಾಗುತ್ತಾ? ಗ್ಯಾರಂಟಿ ಜಾರಿ ಮಾಡಲು ಸರ್ಕಾರದ ಬೊಕ್ಕಸದಲ್ಲಿ ಕಾಸಿದೆಯಾ? ಗ್ಯಾರಂಟಿ (will Congress implement guarantee) ಜಾರಿಯಾದ್ರೆ ಸರ್ಕಾರ ಪಾಪರ್ ಆಗಲ್ವಾ?
ಇದುಎಲ್ಲರೂ ಕೇಳೋ ಪ್ರಶ್ನೆಯಾಗಿದೆ.ಅದ್ರಲ್ಲೂ ಕಾಂಗ್ರೆಸ್ ಕೊಟ್ಟ ಕೆಲ ಗ್ಯಾರಂಟಿಗಳಂತೂ ಹೊರನೋಟಕ್ಕೆ ಜಾರಿಗೊಳಿಸಲು ಸಾಧ್ಯವೇ ಇಲ್ಲ ಅಂತ ಅನ್ನಿಸುತ್ತೆ.
ಅದ್ರಲ್ಲಿ ಮುಖ್ಯವಾಗಿ ಕಾಂಗ್ರೆಸ್ನ ಮೊದಲ ಗ್ಯಾರಂಟಿ (will Congress implement guarantee) ಈ ಅನುಮಾನವನ್ನು ಹೆಚ್ಚಿಸಿದೆ.
ಗ್ಯಾರಂಟಿ ನಂ 1: ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ
ಪ್ರತಿ ಮನೆಗೆ 200 ಯೂನಿಟ್ (Unit) ವಿದ್ಯುತ್ ಉಚಿತ. ಇದು ಕಾಂಗ್ರೆಸ್ ಮೊದಲ ಗ್ಯಾರಂಟಿಯಾಗಿದೆ. ಈ ಗ್ಯಾರಂಟಿ ಕೊಟ್ರೆ ಮೊದಲೇ ಸಂಕಷ್ಟದಲ್ಲಿರುವ ರಾಜ್ಯದ ಎಸ್ಕಾಂ ಕಂಪೆನಿಗಳು ಲಾಸ್ ಆಗಲ್ವಾ? ಅಂತ ಕೇಳ್ತಿದ್ದಾರೆ ಜನ.
ನಮ್ಮ ರಾಜ್ಯದ ಎಸ್ಕಾಂ ಕಂಪೆನಿಗಳು ಭ್ರಷ್ಟಾಚಾರದ ಕೂಪವಾಗಿವೆ. ಹೆಜ್ಜೆ ಹೆಜ್ಜೆಗೆ ಇಲ್ಲಿ ಭ್ರಷ್ಟಾಚಾರ ತುಂಬಿ ಹೋಗಿದೆ. ಭ್ರಷ್ಟಾಚಾರದಿಂದಾಗಿಯೇ ಎಸ್ಕಾಂ ಕಂಪೆನಿಗಳು ಜನರನ್ನು ದರೋಡೆ ಮಾಡುತ್ತಿವೆ.
ಅಧಿಕಾರಿಗಳ ಕಮಿಷನ್ (Commission) ದಂಧೆಯಿಂದಾಗಿ ಎಸ್ಕಾಂ ಕಂಪೆನಿಗಳು ನಷ್ಟ ಅನುಭವಿಸುತ್ತಿವೆ,. ಇಂಥಾ ವಿಷಮ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅದ್ಹೇಗೆ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಕೊಡ್ತಾರೆ?
ಗ್ಯಾರಂಟಿ ನಂಬರ್ 2: ಗೃಹ ಲಕ್ಷ್ಮಿ ಯೋಜನೆ
ರಾಜ್ಯದ ಎಲ್ಲ ಮಹಿಳೆಯರಿಗೆ ಪ್ರತಿ ತಿಂಗಳು ತಲಾ 2000 ರೂಪಾಯಿ ಉಚಿತವಾಗಿ ನೀಡುವುದು ಕಾಂಗ್ರೆಸ್ ಎರಡನೇ ಗ್ಯಾರಂಟಿಯಾಗಿದೆ. ಪ್ರತಿ ಮಹಿಳೆಯರಿಗೆ ಅಂದ್ರೆ ಶ್ರೀಮಂತರಿಗೂ 2000 ರೂಪಾಯಿ ಸಿಗಲಿದೆಯಾ?
ಅಥವಾ ಷರತ್ತುಗಳು ಏನಾದ್ರೂ ಅನ್ವಯ ಆಗುತ್ತಾ? ಐದು ವರ್ಷ ಇಡೀ ಈ ಯೋಜನೆ ಜಾರಿಯಲ್ಲಿ ಇರಲಿದೆಯಾ? ಇಂಥಾ ಹತ್ತು ಹಲವು ಪ್ರಶ್ನೆಗಳು ಜನರನ್ನು ಕಾಡುತ್ತಿವೆ.
ಇದನ್ನು ಓದಿ: ಇನ್ನೂ ಸಿಗಲಿಲ್ಲ ನೂತನ ರೇಶನ್ ಕಾರ್ಡ್ ; 3 ವರ್ಷದಿಂದ ಅರ್ಜಿ ಸಲ್ಲಿಸಿ ಕಾದು ಕುಳಿತಿರುವ ಲಕ್ಷಾಂತರ ಜನ!
ಗ್ಯಾರಂಟಿ ನಂಬರ್ 3: ಪ್ರತಿಯೊಬ್ಬರಿಗೆ 10ಕೆ.ಜಿ ಉಚಿತ ಅಕ್ಕಿ
ಯಸ್, ಇದು ಕಾಂಗ್ರೆಸ್ನ ಮೂರನೇ ಗ್ಯಾರಂಟಿ ಆಗಿದೆ. ಸಿದ್ದರಾಮಯ್ಯ (Siddaramaiah) ಮೊದಲ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿ, ಅನ್ನರಾಮಯ್ಯ ಎನಿಸಿಕೊಂಡರು.
ಇದೇ ಅನ್ನಭಾಗ್ಯದ ಋಣ ಈ ಬಾರಿ ಕಾಂಗ್ರೆಸ್ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದೆ. ಆದ್ರೆ ಈ ಬಾರಿ ಮಾತ್ರ ಈ ಯೋಜನೆಯ ಜಾರಿಯಲ್ಲಿ ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲು ಅಂದ್ರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ.
ರಾಜ್ಯದಲ್ಲಿ ಉಚಿತ ಅಕ್ಕಿಕೊಡುವ ಯೋಜನೆಗೆ ಕೇಂದ್ರ ಸಹಕಾರ ನೀಡುತ್ತಾ? ನೀಡದಿದ್ದರೆ ಕಾಂಗ್ರೆಸ್ ಗ್ಯಾರಂಟಿ (Guarantee) ಗತಿ ಏನು ಅನ್ನೋ ಪ್ರಶ್ನೆಯೂ ಉದ್ಭವಿಸಿದೆ.
ಗ್ಯಾರಂಟಿ ನಂ. 4: ನಿರುದ್ಯೋಗಿ ಪದವೀಧರರಿಗೆ 3000 ಆರ್ಥಿಕ ನೆರವು
ಕೈ ಪಕ್ಷ ಅಧಿಕಾರಕ್ಕೆ ಬಂದರೆ ಯುವನಿಧಿ ಎಂಬ ಯೋಜನೆಯಲ್ಲಿ ನಿರುದ್ಯೋಗಿ ಪದವೀಧರರಿಗೆ 2 ವರ್ಷಗಳವರೆಗೆ ಪ್ರತಿ ತಿಂಗಳು 3000 ಆರ್ಥಿಕ ನೆರವು ಹಾಗೂ ನಿರುದ್ಯೋಗಿ ಡಿಪ್ಲೊಮಾ (Diploma) ಪಧವೀಧರರಿಗೆ 1500
ನಿರುದ್ಯೋಗ ಭತ್ಯೆ ನೀಡುವ ಗ್ಯಾರಂಟಿ ಕೊಟ್ಟಿದೆ. ಆದ್ರೆ ಈ ನಿರುದ್ಯೋಗಿಗಳನ್ನು ಭತ್ಯೆಗಾಗಿ ಪತ್ತೆ ಮಾಡೋದು ಹೇಗೆ? ಇಷ್ಟೊಂದು ಪ್ರಮಾಣದ ಹಣ ಎಲ್ಲಿಂದ ಬರುತ್ತೆ. ಮೊದಲೇ ಕೇಂದ್ರ ಸರ್ಕಾರ ರಾಜ್ಯ ಜಿಎಸ್ಟಿ ಪಾಲು
ಕೊಟ್ಟಿಲ್ಲ. ಅಲ್ಲದೆ ರಾಜ್ಯದ ಬಜೆಟ್ ಮೈನಸಲ್ಲಿದೆ. ಸಿದ್ದರಾಮಯ್ಯ ಹೇಗೆ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಒಟ್ಟು ಮಾಡ್ತಾರೆ ಅನ್ನೋ ಅನುಮಾನ ಜನರನ್ನು ಕಾಡುತ್ತಿದೆ.
ಗ್ಯಾರಂಟಿ 5: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ರಾಜ್ಯದ ಮಹಿಳೆಯರಿಗೆ (Woman) ಸರ್ಕಾರಿ ಬಸ್ ಉಚಿತ ಪ್ರಯಾಣದ ವ್ಯವಸ್ಥೆ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿದೆ. ಈ ಭರವಸೆಯಂತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಆಗ್ತಿದೆ. ಈ ಗ್ಯಾರಂಟಿ ಜಾರಿ
ಮಾಡಿದ್ರೆ ಮೊದಲೇ ಸಂಕಷ್ಟದಲ್ಲಿರುವ ರಾಜ್ಯ ಸಾರಿಗೆ ಸಂಸ್ಥೆಗಳ ಮೇಲೆ ಹೊರೆ ಬೀಳಲ್ವಾ? ನಷ್ಟದಲ್ಲಿರುವ ಕೆಎಸ್ಆರ್ಟಿಸಿ (KSRTC) ಹಾಗೂ ಬಿಎಂಟಿಸಿ (BMTC) ಸಂಸ್ಥೆಗಳಿಗೆ ಬೀಗ ಬೀಳಲ್ವಾ ಅನ್ನೋ ಆತಂಕ ಜನರದ್ದು.
ಈ ಗ್ಯಾರಂಟಿಗಳು ಜಾರಿಗೆ ಬಂದ್ರೆ ಜನ ಖುಷಿಯಾಗಿ ಜೀವನ ಸಾಗಿಸಬಹುದು. ಈ ಗ್ಯಾರಂಟಿಗಳು ಜಾರಿಗೆ ಬರಬೇಕಾದ್ರೆ ರಾಜ್ಯದಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೇ ಬೇಕು. ಆ ತಾಕತ್ತು, ಬದ್ಧತೆ, ಪ್ರಾಮಾಣಿಕತೆ ಕಾಂಗ್ರೆಸ್ ನಾಯಕರಲ್ಲಿ ಇದೆಯಾ?