Ramnagar: ಕರ್ನಾಟಕ ರಾಜ್ಯಕ್ಕೆ (Karnataka State) ಕಗ್ಗಂಟಾಗಿ ಉಳಿದಿರುವ ಮೇಕೆದಾಟು ಯೋಜನೆಯನ್ನು (Goat herding scheme) ನಾನು ಕೊನೆಯುಸಿರೆಳೆಯುವ ಮುನ್ನ ಪರಿಹರಿಸುತ್ತೇನೆ . ಕನ್ನಡಿಗರ ಬಹುನಿರೀಕ್ಷಿತ ಮೇಕೆದಾಟು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಒಪ್ಪಿಗೆ ಕೊಡಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ (Ch. D. Devegowda) ಅವರು ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಹೊಡಿಕೆ ಹೂಸಹಳ್ಳಿ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪರ ಮತಯಾಚಿಸಿ ಮಾತನಾಡಿದ್ದಾರೆ.
ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಂದ ಮಾತ್ರ ಸಾಧ್ಯ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ತಮಿಳುನಾಡು (Tamil Nadu) ನಮ್ಮ ದಾರಿಗೆ ಅಡ್ಡಿಪಡಿಸಿದೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿ, ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ. ಈಗಾಗಲೇ ಹಲವು ಬಾರಿ ನನ್ನ ಮನವಿಯನ್ನು ಅವರು ಆಲಿಸಿದ್ದಾರೆ ಮುಂದಿನ ದಿನಗಳಲ್ಲಿ ಮೇಕೆದಾಟು ಯೋಜನೆಯ ವಿವಾದವನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ (HD Kumaraswamy) ಮತ್ತು ಡಿಕೆ ಶಿವ ಕುಮಾರ್ (DK Shiva Kumar) ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಇದು ಹಿಮಾಲಯ ಪರ್ವತ ಮತ್ತು ಇಲ್ಲಿನ ಸಣ್ಣ ಬೆಟ್ಟದ ನಡುವಿನ ಹೋಲಿಕೆಯಂತಾಗುತ್ತದೆ.ನಿಖಿಲ್ ಕುಮಾರಸ್ವಾಮಿ ಅವರನ್ನು ನಾನೇ ರಾಜ್ಯ ನಾಯಕನನ್ನಾಗಿ (state leader) ಮಾಡುತ್ತೇನೆ. ನನ್ನ ಗರಡಿಯಲ್ಲಿ ಅವರನ್ನು ಉತ್ತಮ ನಾಯಕನನ್ನಾಗಿ ಮಾಡುವ ಸಮಯ ಬಂದಿದೆ.ಇತರ ಪಕ್ಷದ ಅಧ್ಯಕ್ಷರು ಆರು ತಿಂಗಳಿಂದ ನಾನೇ ಅಭ್ಯರ್ಥಿ ಅಂದ್ರು. 55 ವರ್ಷಗಳಿಂದ ಚನ್ನಪಟ್ಟಣದ ಜನರ (People of Channapatnam) ಸೇವೆ ಮಾಡುತ್ತಿದ್ದೇನೆ. ನಾನು ಕಡಿಮೆ ದರದಲ್ಲಿ ಪಡಿತರ ನೀಡಿದ್ದೇನೆ. ಅದನ್ನು ಸಿದ್ದರಾಮಯ್ಯ ಬಳಿ ನೀವು ಕೇಳಿ ಎಂದು ಜನರಿಗೆ ಹೇಳಿದ ದೇವೇಗೌಡರು, ಚನ್ನಪಟ್ಟಣದ ಇಗ್ಗಲೂರು ಮಾತ್ರವಲ್ಲ, ಆಲಮಟ್ಟಿ, ಹಾರಂಗಿ, ಹೇಮಾವತಿ, ಯಗಚಿ ಅಣೆಕಟ್ಟು (Yagachi Dam) ಕಟ್ಟಿದವರು ಯಾರು? ಎಂದು ಪ್ರಶ್ನಿಸಿದ್ದಾರೆ .ನಿಮ್ಮನ್ನು ನೋಡುತ್ತಿದ್ದರೆ 92 ವರ್ಷದ ನನಗೆ 18ರ ಶಕ್ತಿ ಬರುತ್ತದೆ. ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.