South Korea : ಫಾಲ್ಗುಣ ಮಾಸ ಪ್ರಾರಂಭವಾದ ತಕ್ಷಣವೇ, ಜನರು ಹೋಳಿ ಹಬ್ಬದ(Wine Fight Festival) ತಯಾರಿಯಲ್ಲಿ ತೊಡಗುತ್ತಾರೆ. ಬಣ್ಣಗಳ ಈ ಹಬ್ಬದಲ್ಲಿ, ಒಬ್ಬರಿಗೊಬ್ಬರು ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಮೊದಲು ಭಾರತದಲ್ಲಿ ಈ ಹಬ್ಬವನ್ನು ಸಹೋದರತ್ವದ ಸಂಕೇತವಾಗಿ ನೋಡಲಾಗುತ್ತಿತ್ತು.

ಆದರೆ ವಿದೇಶಿಯರು ಭಾರತಕ್ಕೆ ಬಂದ ಸಂದರ್ಭದಲ್ಲಿ ಈ ಹಬ್ಬಕ್ಕೆ ವೈವಿಧ್ಯಮಯ ಬಣ್ಣಗಳನ್ನು ಸೇರಿಸಿದರು.
ಆಗಿನಿಂದ ಈಗಿನವರೆಗೂ ಭಾರತದಲ್ಲಿ ಬಣ್ಣಗಳೊಂದಿಗೆ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ, ಕೆಲವೆಡೆ ಬಣ್ಣಗಳ ಜೊತೆಗೆ ಟೊಮೆಟೊ, ಕಿತ್ತಳೆ ಮತ್ತು ದ್ರಾಕ್ಷಿಯೊಂದಿಗೆ ಕೂಡ ಹೋಳಿ ಆಡುವ ವಿಶಿಷ್ಟ ಪದ್ಧತಿಗಳಿವೆ.
ಬೋರಿಯಾಂಗ್ ಮಣ್ಣಿನ ಉತ್ಸವ : ದಕ್ಷಿಣ ಕೊರಿಯಾದ(South Korea) ಬೋರಿಯಾಂಗ್‌ನಲ್ಲಿ ಆಚರಿಸಲ್ಪಡುವ ಈ ಉತ್ಸವದಲ್ಲಿ ಜನರು ಪರಸ್ಪರರನ್ನು ಮಣ್ಣಿನಲ್ಲಿ ಮುಳುಗಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.
ಇದನ್ನೂ ಓದಿ : https://vijayatimes.com/intel-won-it-ratna-awards/
ಸುಮಾರು ಎರಡು ವಾರಗಳವರೆಗೆ ನಡೆಯುವ ಈ ಉತ್ಸವವನ್ನು ಪ್ರತಿ ವರ್ಷ ರಾಷ್ಟ್ರ ರಾಜಧಾನಿ ದಕ್ಷಿಣ ಸಿಯೋಲ್‌ನ ಬೋರಿಯಾಂಗ್ ನಗರದಲ್ಲಿ ಆಚರಿಸಲಾಗುತ್ತದೆ.
ಪ್ರತಿವರ್ಷ ವಿಶ್ವದಾದ್ಯಂತ ಸುಮಾರು 20 ರಿಂದ 30 ಮಿಲಿಯನ್(Million) ಪ್ರವಾಸಿಗರು ಇದನ್ನು ಆನಂದಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ.
ಜುಲೈ ತಿಂಗಳಿನಲ್ಲಿ ಆಚರಿಸಲಾಗುವ ಈ ಹಬ್ಬದಲ್ಲಿ, ಜನರು ಪರಸ್ಪರರತ್ತ ಮಣ್ಣನ್ನು ಎಸೆಯುತ್ತಾರೆ.
ಇದಕ್ಕೆ ಕಾರಣವೂ ಇದೆ, ಮಣ್ಣಿನಲ್ಲಿ ಅನೇಕ ಔಷಧೀಯ ಗುಣಗಳಿವೆ ಮತ್ತು ಇದು ಅನೇಕ ಚರ್ಮ ರೋಗಗಳನ್ನು ಗುಣಪಡಿಸುತ್ತದೆ ಎನ್ನುವ ನಂಬಿಕೆಯೇ ಇದಕ್ಕೆ ಕಾರಣ.

ಸ್ಪೇನ್‌ನ ಲಾ ಟೊಮಾಟೀನಾ ಉತ್ಸವ : ಪ್ರತಿ ವರ್ಷ ಆಗಸ್ಟ್ ನಲ್ಲಿ ಸ್ಪೇನ್‌ನಲ್ಲಿ(Spain) ಆಚರಿಸಲಾಗುವ ಈ ಹಬ್ಬದಲ್ಲಿ ಜನ ಟೊಮೆಟೋ ಹಣ್ಣಿನಿಂದ ಹೋಳಿ ಆಡುತ್ತಾರೆ.
ಆಗಸ್ಟ್‌ನ ಕೊನೆಯ ಬುಧವಾರದ ದಿನ ಸ್ಪೇನ್‌ನ ಬುನಾಲ್ ಎಂಬ ಸಣ್ಣ ಪಟ್ಟಣದಲ್ಲಿ ಜನರು ಟೊಮೆಟೊ(Tomato) ಹಣ್ಣಿನಿಂದ ಪರಸ್ಪರ ಹೊಡೆದುಕೊಳ್ಳುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.
ಪ್ರಪಂಚದಾದ್ಯಂತದ ಪ್ರವಾಸಿಗರು ಈ ವಿಚಿತ್ರ ಹಬ್ಬವನ್ನು ನೋಡಲೆಂದೇ ಭೇಟಿ ನೀಡುತ್ತಾರೆ.
ಕಿತ್ತಳೆ ಹಣ್ಣಿನ ಹೋಳಿ : ನಮ್ಮ ದೇಶದಲ್ಲಿ ದುಷ್ಟರ ವಿರುದ್ಧ ವಿಜಯ ಗಳಿಸಿದ ಸಂಕೇತವಾಗಿ ಹೋಳಿ ಆಚರಿಸಲ್ಪಡುವ ರೀತಿಯೇ, ಇಟಲಿಯ ನಗರವಾದ ಈವ್ರೇಯಾದಲ್ಲಿ 3 ದಿನಗಳವರೆಗೆ ಕಿತ್ತಳೆ ಹಬ್ಬ ನಡೆಯುತ್ತದೆ.
ಇಲ್ಲಿ ಹಬ್ಬವನ್ನು ಇಟಾಲಿಯನ್ ಬತ್ತಾಗ್ಲಿಯಾ ಡೆಲ್ಲೆ ಅರಾಂಸ ಅಥವಾ ಇಟಾಲಿಯನ್ ಕಿತ್ತಳೆ ಕದನ ಎಂದು ಕರೆಯುತ್ತಾರೆ.
ಈ ಹಬ್ಬದ ಹಿಂದೆ ಒಂದು ಕಥೆಯೂ ಇದೆ, 13ನೇ ಶತಮಾನದಲ್ಲಿ ಈವ್ರೇಯಾ ದೊರೆ ತನ್ನ ಮದುವೆಗೆ ಮುಂಚೆ ಹುಡುಗಿಯೊಬ್ಬಳನ್ನು ಅಪಹರಿಸಲು ಪ್ರಯತ್ನಿಸಿದ್ದನು.
ಆಗ ಆ ಹುಡುಗಿ ಕೋಪಗೊಂಡು ದೊರೆಯ ಶಿರಚ್ಛೇದ ಮಾಡುತ್ತಾಳೆ. ನಂತರ ಇಡೀ ನಗರವು ಈ ಘಟನೆಯನ್ನು ಸಂತೋಷದಿಂದ ಆಚರಿಸಿತು.
ಅಂದಿನಿಂದ, ಕೆಟ್ಟದ್ದರ ವಿರುದ್ಧ ಒಳ್ಳೆಯದು ಗೆಲ್ಲುವ ಸಂಕೇತವಾಗಿ ಕಿತ್ತಳೆ ಯುದ್ಧ ನಡೆಯುತ್ತದೆ. ಸಾಮಾನ್ಯವಾಗಿ, ಮಾರ್ಚ್ ಮೊದಲ ಭಾನುವಾರ ಇಲ್ಲಿ ನೆರೆಹೊರೆಯವರು ಕಿತ್ತಳೆ ಎಸೆಯುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

ವೈನ್ ನ ಹೋಳಿ : ಬಣ್ಣಗಳ ಹೋಳಿ ಮಾತ್ರವಲ್ಲ, ಇಲ್ಲಿ ವೈನ್ ಅಥವಾ ಮದ್ಯದಿಂದಲೂ ಹೋಳಿಯನ್ನು ಆಚರಿಸಲಾಗುತ್ತದೆ.
ಸ್ಪೇನ್‌ನ ಲಾ ರಿಯೋಜಾ ಪ್ರಾಂತ್ಯದ ಹಾರೋ ನಗರದಲ್ಲಿ ಈ ವೈನ್ ಹೋಳಿಯನ್ನು ಆಚರಿಸಲಾಗುತ್ತದೆ. ಇಲ್ಲಿ ಮದ್ಯ(Alcohol) ಕುಡಿಯಲು ಸ್ಪರ್ಧೆ ಇರುತ್ತದೆ ಮತ್ತು ಜನರು ಪರಸ್ಪರರ ಮೇಲೆ ಮದ್ಯ ಸುರಿಯುತ್ತಾರೆ.
ಈ ಮದ್ಯದ ಪಾರ್ಟಿ ಬೆಳಗ್ಗೆಯಿಂದಲೇ ಪ್ರಾರಂಭವಾಗಿ ರಾತ್ರಿಯವರೆಗೂ ಮುಂದುವರೆಯುತ್ತದೆ.
ಇಲ್ಲಿ ಒಂದೇ ದಿನದಲ್ಲಿ ಲಕ್ಷಾಂತರ ಲೀಟರ್ ವೈನ್ ವ್ಯರ್ಥ ಮಾಡುತ್ತಾರೆ. ಕೆಲವೊಮ್ಮೆ ಈ ಪಾರ್ಟಿ ಮರುದಿನ ಬೆಳಗ್ಗೆ 5 ಗಂಟೆಯವರೆಗೂ ನಡೆಯುತ್ತದೆ.
ಇದನ್ನೂ ಓದಿ : https://vijayatimes.com/chetan-statement-on-tipu/
ಸೋಂಗರ್ಕನ ಉತ್ಸವ : ಬೌದ್ಧ ಕ್ಯಾಲೆಂಡರ್ ನ ಪ್ರಕಾರ ಸೋಂಗರ್ಕನ ಉತ್ಸವವನ್ನು ಥೈಲ್ಯಾಂಡ್‌ನಲ್ಲಿ(Thailand) ಹೊಸ ವರ್ಷದ ಸಂದರ್ಭದಲ್ಲಿ ಆಚರಿಸಲಾಗುತ್ತದೆ.
ಪ್ರತಿ ವರ್ಷ ಏಪ್ರಿಲ್ 13 ರಿಂದ 15 ರವರೆಗೆ ಆಚರಿಸಲಾಗುವ ಈ ಉತ್ಸವದಲ್ಲಿ, ಜನರು ನೀರನ್ನು ಒಬ್ಬರಿಗೊಬ್ಬರ ಮೇಲೆ ತೀವ್ರವಾಗಿ ಎಸೆಯುತ್ತಾರೆ.

ಇದನ್ನು ವಿಶ್ವದ ಅತಿದೊಡ್ಡ ನೀರಿನ ಆಟ ಎಂದು ಕೂಡ ಕರೆಯುತ್ತಾರೆ. ಇದರ ಹಿಂದೆ ಒಂದು ನಂಬಿಕೆಯೂ ಇದೆ,
ಜನ ಒಬ್ಬರ ಮೇಲೊಬ್ಬರು ನೀರನ್ನು ಎಸೆಯುವ ಮೂಲಕ ಪಾಪಗಳನ್ನು ತೊಳೆಯಬಹುದು ಎಂಬುದು ಇಲ್ಲಿನ ನಂಬಿಕೆ. ಈ ಹಬ್ಬವು ಹೋಳಿಯನ್ನೇ ಹೋಲುತ್ತದೆ.
ಆದರೆ ಇಲ್ಲಿ ಬಣ್ಣಗಳಿಗೆ ಬದಲಾಗಿ ನೀರನ್ನು ಬಳಸಲಾಗುತ್ತದೆ. ಈ ಹಬ್ಬದಲ್ಲಿ ಜನ ಬುದ್ಧನ ಪ್ರತಿಮೆ, ಬೌದ್ಧ ಭಿಕ್ಷುಗಳು ಹಾಗೂ ತಮ್ಮ ಮನೆಯ ಹಿರಿಯರ ಮೇಲೆ ನೀರು ಚಿಮುಕಿಸಿ ಅವರ ಆಶೀರ್ವಾದವನ್ನು ಪಡೆಯುತ್ತಾರೆ.