Visit Channel

ಕಾಮನಬಿಲ್ಲಿನ ಬಣ್ಣಗಳಿಂದ ಕೂಡಿರುವ ಈ ಪರ್ವತ ಎಲ್ಲಿದೆ ಗೊತ್ತಾ? ; ಇಲ್ಲಿದೆ ನೋಡಿ ಉತ್ತರ!

Rainbow hill

ಪರ್ವತಗಳು ಬಣ್ಣಗಳಿಂದ ಆವೃತವಾಗಿರುವುದನ್ನು ಎಂದಾದರೂ ಕಂಡಿದ್ದೀರಾ? ಬಹುಶಃ ತುಂಬಾ ಜನ ಇಂತಹ ಬೆಟ್ಟಗಳನ್ನು ನೋಡಿರಲು ಸಾಧ್ಯವೇ ಇಲ್ಲ. ಕಂಡ ತಕ್ಷಣ ಎಂತಹವರನ್ನೂ ಸೆಳೆಯುವಂತಹ ಪರ್ವತಗಳ ಸಾಲಿದು.

colured hill

ಪೆರುವಿನ ಅತ್ಯುತ್ತಮ ಮತ್ತು ಹೊಸ ಆಕರ್ಷಣೆಗಳಲ್ಲಿ ಒಂದಾಗಿದೆ ಈ ವಿನಿಕುಂಕಾ ಪರ್ವತ ಶ್ರೇಣಿ. ಕುಸ್ಕೊ ನಗರದಿಂದ 100 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿರುವ ಇದು ಸಮುದ್ರ ಮಟ್ಟದಿಂದ 5,200 ಮೀಟರ್ ಎತ್ತರದಲ್ಲಿದೆ. ಏಳು-ಬಣ್ಣದ ಮಳೆಬಿಲ್ಲು ಪರ್ವತ ಅಂತ ಕರೆಯಲ್ಪಡೋ ವಿನಿಕುಂಕಾವನ್ನ ಸ್ಥಳೀಯರು ಸರಳವಾಗಿ ಕಲರ್ಡ್ ಹಿಲ್ ಅಂತ ಕರೆಯುತ್ತಾರೆ. ಇದರ ಅಸ್ತಿತ್ವದ ಬಗ್ಗೆ ಇತ್ತೀಚೆಗಷ್ಟೇ ತಿಳಿದುಬಂದಿದೆ. ಹಿಂದಿನಿಂದಲೂ (ಸ್ಥಳೀಯ ನಿವಾಸಿಗಳ ಪ್ರಕಾರ) ಇದರ ಮೇಲ್ಭಾಗ ಹಿಮದಿಂದ ಆವ್ರತವಾಗಿತ್ತು,

ಜಾಗತಿಕ ತಾಪಮಾನ ಏರಿಕೆಯ ಪ್ರಭಾವದಿಂದ ಕರಗಲು ಪ್ರಾರಂಭಿಸಿತು, ಇದರಿಂದಾಗಿ ಪರ್ವತಗಳು ಈಗ ಹೊಂದಿರುವ ರೂಪವನ್ನು ಪಡೆದುಕೊಂಡವು. ವಿನಿಕುಂಕಾ ಅನ್ನೋ ಹೆಸರು ಕ್ವೆಚುವಾ ಭಾಷೆಯ ಎರಡು ಪದಗಳಿಂದ ಬಂದಿದೆ: ವೈನಿ – ಕಲ್ಲು (ಈ ಸ್ಥಳದ ವಿಶಿಷ್ಟವಾದ ಅನೇಕ ಕಲ್ಲುಗಳು) ಮತ್ತು ಕುಂಕ – ಕುತ್ತಿಗೆ (ಪಾಸ್‌ನ ಅಡಚಣೆ). ಇದನ್ನು ಸೆವೆನ್-ಕಲರ್ಡ್ ಅಥವಾ ರೈನ್ಬೋ ಮೌಂಟೇನ್ ಎಂದೂ ಕರೆಯುತ್ತಾರೆ. ಗಾಢ ಬಣ್ಣಗಳು ಇದರ ವಿಶೇಷ. ಈ ಬಣ್ಣದ ಪರ್ವತದ ಹಿಂದೆ ನಿಖರ ಕಾರಣಗಳಿವೆ. ಈ ಬಣ್ಣಗಳಿಗೆ ಬೌಗೋಳಿಕವಾಗಿ ಸಂಭವಿಸುವ ಕೆಲವೊಂದು ಘಟನೆಗಳು ಕಾರಣವಾಗಿರುತ್ತವೆ.

mountain

ಅದೆಷ್ಟೋ ವರ್ಷಗಳ ಹಿಂದೆ ಸಂಭವಿಸಿದ ಜ್ವಾಲಾಮುಖಿಯಿಂದ ಹೊರಹೊಮ್ಮುವ ಲಾವಾರಸ ವರ್ಷಗಳುರುಳಿದಂತೆ ಈ ರೀತಿ ಬಣ್ಣದಂತೆ ಕಾಣುತ್ತವೆ ಎಂದು ತಜ್ಞರು ಹೇಳುತ್ತಾರೆ. ಈ ಅಪರೂಪದ ಬಂಡೆಗಳು ರೂಪುಗೊಳ್ಳಲು ಲಕ್ಷಾಂತರ ವರ್ಷಗಳೇ ಹಿಡಿದಿವೆಯಂತೆ. ಈ ಮರಳು ಮತ್ತು ಹೂಳಿನಿಂದ ರೂಪುಗೊಂಡ ಬಂಡೆಗಳು ಕಾಲ ಕ್ರಮೇಣ ಕಬ್ಬಿಣ ಹಾಗೂ ಇತರ ಖನಿಜಗಳ ಜೊತೆ ಸಂಯೋಜನೆಗೊಂಡು ಶೇಖರಣೆಯಾಗುವುದರಿಂದ ಈ ಬಣ್ಣ ಬಣ್ಣದ ತಾಣ ರೂಪುಗೊಂಡಿದೆ ಎನ್ನುತ್ತಾರೆ ತಜ್ಞರು.

ಸಾಮಾನ್ಯವಾಗಿ ವಿವಿಧ ಖನಿಜಗಳು ವಿವಿಧ ಬಣ್ಣದಲ್ಲಿ ಇರುತ್ತವೆ. ಈ ಬೆಟ್ಟದಲ್ಲಿ ಈ ಎಲ್ಲಾ ಖನಿಜಗಳು ಒಂದೆಡೆ ಕಾಣಸಿಗುತ್ತದೆ. ಹೀಗಾಗಿ, ಬೇರೆ ಬೇರೆ ಖನಿಜಗಳ ಬಣ್ಣ ಇಲ್ಲಿ ಪ್ರತಿಫಲಿಸುತ್ತದೆ. ಹೀಗಾಗಿ, ಈ ಬೆಟ್ಟಗಳು ಬೆರಗು ಮೂಡಿಸುತ್ತವೆ ಜೊತೆಗೆ ಕೌತುಕದ ಕಣಜವಾಗಿಯೂ ಮಾರ್ಪಟ್ಟಿದೆ. ವೈಜ್ಞಾನಿಕ ಕಾರಣಗಳೇನೇ ಇದ್ದರೂ ನಿಜಕ್ಕೂ ಈ ತಾಣಗಳು ಅಚ್ಚರಿ ಮೂಡಿಸುತ್ತವೆ.

  • ಪಚಿತ್ರ ಸಚಿನ್

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.