• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭ:ವಿಪಕ್ಷ–ಆಡಳಿತ ಪಕ್ಷ ಮುಖಾಮುಖಿಯಾಗಲು ಸಜ್ಜು

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭ:ವಿಪಕ್ಷ–ಆಡಳಿತ ಪಕ್ಷ ಮುಖಾಮುಖಿಯಾಗಲು ಸಜ್ಜು
0
SHARES
76
VIEWS
Share on FacebookShare on Twitter
  • ಚಳಿಗಾಲದ ಅಧಿವೇಶನಕ್ಕೆ (Winter session begins) ವೇದಿಕೆ ಸಿದ್ದ: ರೈತ ಸಮಸ್ಯೆಗಳೇ ರಾಜಕೀಯ ಕೇಂದ್ರಬಿಂದು
  • ಕಬ್ಬು–ಮೆಕ್ಕೆಜೋಳ ದರ, ತುಂಗಭದ್ರಾ ಗೇಟ್, ಕುರಿತಾಗಿ ಸರ್ಕಾರ–ವಿಪಕ್ಷ ತೀವ್ರ ಪೈಪೋಟಿ.
  • ಬೆಂಬಲ ದರ, ಅನುದಾನ ಹಾಗೂ ಮೂಲಸೌಕರ್ಯ ಸಮಸ್ಯೆಗಳನ್ನು ಮುಂದಿಟ್ಟು ಸರ್ಕಾರಕ್ಕೆ ಸವಾಲು ಹಾಕಲಿರುವ ಬಿಜೆಪಿ

Belgavi: ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನಕ್ಕೆ ಇಂದು ಅಧಿಕೃತವಾಗಿ (Winter session begins) ಚಾಲನೆ ದೊರೆಯುತ್ತಿದ್ದು, ಉತ್ತರ ಕರ್ನಾಟಕ ರಾಜಕೀಯ ವಾತಾವರಣ ಮತ್ತೊಮ್ಮೆ ಕಾವೇರಲಿರುವುದು ನಿಶ್ಚಿತವಾಗಿದೆ.

ಅಧಿವೇಶನ ಆರಂಭದ ಮೊದಲ ದಿನವೇ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ಸಭೆಯೊಂದಿಗೆ ಕಾರ್ಯಾರಂಭವಾಗಲಿದೆ.

ಆದರೆ ಇದಾದ ಬಳಿಕ ನಡೆಯಲಿರುವ ರಾಜಕೀಯ ಚಟುವಟಿಕೆಗಳು ಸುವರ್ಣಸೌಧದ ಒಳಗಷ್ಟೇ ಅಲ್ಲದೆ ಹೊರಗೂ ಉದ್ವಿಗ್ನತೆಯ ವಾತಾವರಣವನ್ನು ನಿರ್ಮಿಸಲಿವೆ.

Winter session begins

ರೈತ ಸಮಸ್ಯೆಗಳು, ಅನುದಾನ ಬಿಡುಗಡೆ ವಿಳಂಬ, ಮತ್ತು ಉತ್ತರಕನ್ನಡ ನಿರ್ಲಕ್ಷ್ಯದ ಆರೋಪಗಳನ್ನೇ (Winter session begins) ಆಧಾರವಾಗಿ ಮಾಡಿಕೊಂಡು ವಿಪಕ್ಷಗಳು ಸರ್ಕಾರವನ್ನು ಗುರಿಯಾಗಿಸಲು ಸ್ಟ್ರಾಟಜಿ ರೂಪಿಸಿದ್ದು, ಈ ಅಧಿವೇಶನ ರಾಜ್ಯರಾಜಕೀಯಕ್ಕೆ ತೀವ್ರ ಚರ್ಚೆಗೆ ವೇದಿಕೆ ಆಗಲಿದೆ.

ವಿಪಕ್ಷ ಬಿಜೆಪಿ ಈ ಬಾರಿ ಅಧಿವೇಶನದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡಿದೆ.

ಅದರಲ್ಲೂ ವಿಶೇಷವಾಗಿ ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಾರರ ಬೆಂಬಲ ದರದ ವಿಚಾರ, ಖರೀದಿ ಕೇಂದ್ರಗಳ ಕೊರತೆ ಹಾಗೂ ತುಂಗಭದ್ರಾ ಅಣೆಕಟ್ಟು ಕ್ರೆಸ್ಟ್ ಗೇಟ್ ಸಮಸ್ಯೆಗಳಂತಹ ಉತ್ತರ ಕರ್ನಾಟಕಕ್ಕೆ ಮುಖ್ಯವಾದ ವಿಷಯಗಳನ್ನು ಪ್ರಸ್ತಾಪಿಸುವುದಕ್ಕೆ ಸಜ್ಜಾಗಿದೆ.

ರೈತರ ಪರವಾಗಿ ಹೋರಾಟ ತೀವ್ರಗೊಳಿಸಲು ಸುವರ್ಣಸೌಧಕ್ಕೆ 20,000 ರೈತರನ್ನು ಜಮಾವಣೆ ಮಾಡುವ ನಿರ್ಧಾರ ಬಿಜೆಪಿ (BJP) ಕೈಗೊಂಡಿದ್ದು, ಇದು ಅಧಿವೇಶನ ಆರಂಭವಾಗುವ ಮೊದಲೇ ರಾಜಕೀಯ ಒತ್ತಡವನ್ನು ಹೆಚ್ಚಿಸಿದೆ.

ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸಿದೆ ಎಂಬ ಆರೋಪವನ್ನು ಭಾರಿ ಪ್ರಮಾಣದಲ್ಲಿ ಬಳಸಿಕೊಳ್ಳುವ ಮೂಲಕ ಜನಮನ ಗೆಲ್ಲಲು ಬಿಜೆಪಿ ತಂತ್ರ ರೂಪಿಸಿದೆ.ಇನ್ನೊಂದೆಡೆ ಕಾಂಗ್ರೆಸ್ ಸರ್ಕಾರವೂ ಪ್ರತ್ಯಾಕ್ರಮಣಕ್ಕೆ ತಯಾರಿ ನಡೆಸಿದೆ.

ಕಬ್ಬು ಮತ್ತು ಮೆಕ್ಕೆಜೋಳದ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಬಿಜೆಪಿ ವಿರುದ್ಧ ಪ್ರತಿಯಾರೋಪ ಮಾಡಲು ಕಾಂಗ್ರೆಸ್ (Congress) ಸಜ್ಜಾಗಿದೆ.

ಜೊತೆಗೆ, 1 ಲಕ್ಷ ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿ ಜನಪರ ಕಾರ್ಯಕ್ರಮಗಳನ್ನು ಆರಂಭಿಸಿರುವುದರ ಬಗ್ಗೆ ಸಮರ್ಥನೆ ನೀಡಲು ಕಾಂಗ್ರೆಸ್ ನಾಯಕರು ತಾವು ಸಿದ್ಧರಿದ್ದಾರೆ.

ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಮಾಡಿರುವ ಅನೇಕ ಕ್ರಮಗಳನ್ನು ದಾಖಲಿಸಿ, ಸರ್ಕಾರ ತನ್ನ ಉತ್ತಮ ಕಾರ್ಯಕ್ಷಮತೆಯನ್ನು ತೋರಿಸಲು ಬಯಸುತ್ತಿದೆ.

ಇದರಿಂದ ಅಧಿವೇಶನದ ರಾಜಕೀಯ ಚರ್ಚೆಗಳು ಒಂದೇ ವಿಷಯದಲ್ಲಿ ಸೀಮಿತವಾಗದೆ, ರಾಜ್ಯ-ಕೇಂದ್ರ ಸಂಬಂಧಗಳನ್ನೂ ಹೊಕ್ಕುವ ಸಾಧ್ಯತೆ ಇದೆ.

ಅಧಿವೇಶನವನ್ನು ಗಮನಿಸಿ ಹಲವು ರೈತ ಸಂಘಟನೆಗಳು, ಉದ್ಯೋಗ ಸಂಘಟನೆಗಳು ಮತ್ತು ಪ್ರಾದೇಶಿಕ ಹೋರಾಟಗಾರರು ಬೆಳಗಾವಿಯಲ್ಲಿ ಭಾರಿ ಪ್ರತಿಭಟನೆಗಳನ್ನು ಏರ್ಪಡಿಸಲು ಮುಂದಾಗಿರುವುದರಿಂದ, ನಗರದಲ್ಲಿ ಭದ್ರತೆ ಕಠಿಣಗೊಳಿಸಲಾಗಿದೆ.

ಸುಮಾರು 6,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಸುವರ್ಣಸೌಧದ ಸುತ್ತಮುತ್ತ ವಿಶೇಷ ನಿಗಾವಹಣೆ, ಡ್ರೋನ್ ಪಟ್ರೋಲಿಂಗ್‌ (Drone Patrolling) ಹಾಗೂ ಟ್ರಾಫಿಕ್ (Traffic) ನಿಯಂತ್ರಣ ಕ್ರಮಗಳು ಜಾರಿಗೆ ಬಂದಿವೆ.

ಅಧಿಕೃತ ಅಧಿವೇಶನ ನಡೆಯುವ ಸ್ಥಳ ಮಾತ್ರವಲ್ಲ; ನಗರದ ಪ್ರಮುಖ ವೃತ್ತಗಳಿಂದ ಹಿಡಿದು ರೈತ ಸಮಾವೇಶ ಸ್ಥಳಗಳವರೆಗೆ ಭದ್ರತಾ ಸನ್ನಾಹ ಗಟ್ಟಿಯಾಗಿಸಿರುವುದು ಸ್ಪಷ್ಟವಾಗುತ್ತಿದೆ.

ಒಟ್ಟಾರೆ, ಡಿಸೆಂಬರ್ 19ರವರೆಗೆ ನಡೆಯಲಿರುವ ಈ ಚಳಿಗಾಲದ ಅಧಿವೇಶನ ರಾಜ್ಯದ ರಾಜಕೀಯದಲ್ಲಿ ಮಹತ್ವದ ತಿರುವು ತರಬಹುದಾದ ಅಧಿವೇಶನವೆಂದು ಪರಿಣಿತರು ಹೇಳುತ್ತಿದ್ದಾರೆ.

ಉತ್ತರ ಕರ್ನಾಟಕದ ಅಭಿವೃದ್ಧಿ, ರೈತರ ಸಮಸ್ಯೆ, ಅನುದಾನ ವಿತರಣೆ, ಮತ್ತು ಕೇಂದ್ರ-ರಾಜ್ಯ ಘರ್ಷಣೆಗಳಂತಹ ಅನೇಕ ಗಂಭೀರ ವಿಚಾರಗಳು ಈ ಅಧಿವೇಶನದಲ್ಲಿ ಚರ್ಚೆಗೆ ಬರಲಿದ್ದು, ಪ್ರತಿಪಕ್ಷ–ಆಡಳಿತ ಪಕ್ಷಗಳ ನಡುವೆ ರಾಜಕೀಯ ಜ್ವಾಲಾಮುಖಿ ಸ್ಫೋಟಗೊಳ್ಳುವ ಲಕ್ಷಣಗಳು ಈಗಾಗಲೇ ಕಾಣಿಸುತ್ತಿವೆ.

ಬೆಳಗಾವಿಯ ಸುವರ್ಣಸೌಧ ಮತ್ತೊಮ್ಮೆ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿ ಮಾರ್ಪಟ್ಟಿದ್ದು, ಮುಂದಿನ 10 ದಿನಗಳು ಕರ್ನಾಟಕದ ರಾಜಕೀಯಕ್ಕೆ ನಿರ್ಣಾಯಕ ಹಂತವಾಗಲಿವೆ.

ಇದನ್ನು ಓದಿ : ಇಂಡಿಗೋ ಬಿಕ್ಕಟ್ಟಿನ ನಡುವೆ ಪ್ರಯಾಣಿಕರಿಗೆ ಸಹಾಯಹಸ್ತ ಚಾಚಿದ ಭಾರತೀಯ ರೈಲ್ವೆ ಇಲಾಖೆ: ಹಲವು ಮಾರ್ಗಗಳಲ್ಲಿ ಹೆಚ್ಚುವರಿ ಬೋಗಿಗಳ ಅಳವಡಿಕೆ
Tags: belgavibjpCongressKarnatakamonsoon sessionpolitics

Related News

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ
ದೇಶ-ವಿದೇಶ

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ

January 24, 2026
ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ
ಪ್ರಮುಖ ಸುದ್ದಿ

ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ

January 24, 2026
ಬಳ್ಳಾರಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ: ಎಂಟು ಮಂದಿಯ ವಶ, ತನಿಖೆ ತೀವ್ರ
ಪ್ರಮುಖ ಸುದ್ದಿ

ಬಳ್ಳಾರಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ: ಎಂಟು ಮಂದಿಯ ವಶ, ತನಿಖೆ ತೀವ್ರ

January 24, 2026
ಜ.24ರಿಂದ ನಾಲ್ಕು ದಿನ ಬ್ಯಾಂಕ್ ಶಾಖೆಗಳು ಬಂದ್: ಡಿಜಿಟಲ್ ಸೇವೆಗಳು ಮಾತ್ರ ಲಭ್ಯ
ದೇಶ-ವಿದೇಶ

ಜ.24ರಿಂದ ನಾಲ್ಕು ದಿನ ಬ್ಯಾಂಕ್ ಶಾಖೆಗಳು ಬಂದ್: ಡಿಜಿಟಲ್ ಸೇವೆಗಳು ಮಾತ್ರ ಲಭ್ಯ

January 23, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.