Skin Care : ಪ್ರತಿಯೊಬ್ಬ ಮಹಿಳೆಯು ತನ್ನ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕು, ಸುಂದರವಾಗಿ ಕಾಣಬೇಕು (winter skin care tips) ಎಂದು ಬಯಸುತ್ತಾಳೆ.
ಆದರೆ ತುಂಬಾ ಕಲ್ಮಶ ಹೊಂದಿರುವ ವಾತಾವರಣದಲ್ಲಿ ಸುಂದರವಾಗಿರುವ ತ್ವಚೆಯನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ.
ವಾತಾವರಣದ ಧೂಳು ಮತ್ತು ಕಲ್ಮಶಗಳು ಚರ್ಮದಲ್ಲಿ ಬಂದು ನಿಲ್ಲುವುದು. ಇಂದರಿಂದ ಮುಖದ ಮೇಲೆ ಮೊಡವೆಗಳು(Acne) ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಮುಖದ ಕಾಂತಿಯನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಔಷದಿಗಳು ಲಭ್ಯವಿದೆ.
ಆದರೆ ಇದಕ್ಕಿಂತ ಪರಿಣಾಮಕಾರಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೇ ಇರುವ ವಿಧಾನವೆಂದರೆ ಅದು ನ್ಯೆಸರ್ಗಿಕವಾಗಿ ಸಿಗುವ ಮನೆಮದ್ದುಗಳು.
ಇವುಗಳಿಂದ ನಿದಾನಗತಿಯಲ್ಲಿ ಫಲಿತಾಂಶ ಬಂದರೂ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಮುಖವನ್ನು ಕಾಂತೀಯುತವಾಗಿ ಇಡುತ್ತದೆ.

ಮನೆಮದ್ದಿನ ಒಂದಿಷ್ಟ್ಟು ಟಿಪ್ಸ್‌ಗಳು:
- ಅರಿಶಿನ(Turmeric) ಮತ್ತು ಹಾಲಿನ ಕೆನೆಯನ್ನು(Whipped Cream) ಕಲಿಸಿ ಈ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಮುಖಕ್ಕೆ ಹಚ್ಚಿ. ಉಗುರು ಬೆಚ್ಚಿನ ನೀರಿನಲ್ಲಿ ಮುಖ ತೊಳೆದರೆ ಮುಖವು ಕಾಂತಿಯುತವಾಗಿ ಕಾಣುತ್ತದೆ. ಈ ರೀತಿ ಮಾಡುವುದರಿಂದ ಸುಕ್ಕು ಗಟ್ಟುವುದಿಲ್ಲ.
- ಬಾಳೆಹಣ್ಣನ್ನು(Banana) ಪೇಸ್ಟ್ ಮಾಡಿ ಅದಕ್ಕೆ ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ಕಲಿಸಿ ಮುಖಕ್ಕೆ ಲೇಪಿಸಿ ಹತ್ತು ನಿಮಿಷಗಳ ಕಾಲ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆದರೆ ಮುಖದ ಹೊಳಪು ಹೆಚ್ಚುತ್ತೆ.
- ನಿಂಬೆಹಣ್ಣು(lemon) ಮತ್ತು ಜೇನುತುಪ್ಪ (Honey) ಚರ್ಮಕ್ಕೆ ತುಂಬಾ ಒಳ್ಳೆಯದು. ಇವು ನೈಸರ್ಗಿಕವಾಗಿ(winter skin care tips) ಸಿಗುವಂತಹ ಪದಾರ್ಥಗಳು. ಆದ್ದರಿಂದ ಇವುಗಳನ್ನು ನಾವು ಮುಖಕ್ಕೆ
ಹಚ್ಚುವುದರಿಂದ ಚರ್ಮವನ್ನು ಕಾಂತಿಯುತವಾಗಿ ಮಾಡುತ್ತದೆ. ಮುಖದ ಮೇಲಿರುವ ಕಲೆಗಳು, ಬ್ಯಾಕ್ಟೀರಿಯಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತವೆ.
ಇದನ್ನು ಪ್ರತಿ ನಿತ್ಯ ಮಾಡಬೇಕು. ನಿಂಬೆ ಹಣ್ಣು ಆಂಟಿ ಬ್ಯಾಕ್ಟೀರಿಯ ಆಗಿ ಕೆಲಸ ಮಾಡುತ್ತೆ. ಅದಕ್ಕಾಗಿ ನಾವು ನಿಂಬೆ ಹಣ್ಣನ್ನು ಎಲ್ಲದಕ್ಕೂ ಬಳಕೆ ಮಾಡಲಾಗುತ್ತದೆ.

- ಬೇವಿನ ಎಲೆಯ(Neem Leaf) ಪುಡಿ ಹಾಕಿ ಒಂದು ಚಮಚ ಅಲೋವೆರಾ ಜೆಲ್(Alovera Gel) ಹಾಗೂ ಕಾಲು ಚಮಚದಷ್ಟು ಅರಿಶಿನ ಪುಡಿ, ಎರಡು ಚಮಚ ರೋಸ್ ವಾಟರನ್ನು(Rose Water) ಹಾಕಿ ಚೆನ್ನಾಗಿ
ಎಲ್ಲವನ್ನು ಮಿಕ್ಸ್ ಮಾಡಿ ರಾತ್ರಿ 5 ನಿಮಿಷ ಬಿಟ್ಟು ಮುಖ ತೊಳೆಯಿರಿ. ಮುಖದ ಅಂದ ಇಮ್ಮಡಿಗೊಳ್ಳುತ್ತೆ. ಜೊತೆಗೆ ಮೊಡವೆಗಳು ಸಹ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. - ಚಳಿಗಾಲದ ಸಂದರ್ಭದಲ್ಲಿ ಮುಖಕ್ಕೆ ಯಾವುದೇ ಸೋಪನ್ನು ಬಳಕೆ ಮಾಡದೆ ಕಡಲೆ ಹಿಟ್ಟನ್ನು ಬಳಕೆ ಮಾಡುವುದು ಸೂಕ್ತ. ಇದರಿಂದ ಮುಖವು ಆರೋಗ್ಯಪೂರ್ಣವಾಗಿರುತ್ತದೆ. ಸೋಪಿನಲ್ಲಿ ಹೆಚ್ಚು ನೊರೆ ಬರುವುದರಿಂದ ಮುಖ ಬೇಗ ಸುಕ್ಕು ಗಟ್ಟುತ್ತಾ ಹೋಗುತ್ತದೆ.
ನೋಡಿದ್ರಾ ಹೇಗಿದೆ ನೈಸರ್ಗಿಕ ಮದ್ದಿನ ಕಮಾಲ್. ಈ ಮೇಲಿನ ಎಲ್ಲ ವಿಧಾನಗಳನ್ನು ಪಾಲಿಸುವುದರಿಂದ ಚಳಿಗಾಲದಲ್ಲಿ ಖರ್ಚಿಲ್ಲದೇ ಕಾಂತಿಯುತ ತ್ವಚೇಯನ್ನು ನಿಮ್ಮದಗಿಸಿಕೊಳ್ಳಬಹುದು.
- Chandrika v