ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್(Guiness Book Of Records) ಪ್ರವೇಶಿಸೋದು ಸಾಮಾನ್ಯ ವಿಷಯವಲ್ಲ.
ಅದು ಬಹಳ ಪ್ರತಿಷ್ಟೆಯ ವಿಷಯ, ನಿಮ್ಮಲ್ಲಿ ಯಾವುದಾದ್ರೂ ವಿಶಿಷ್ಟ ಸಾಮರ್ಥ್ಯಗಳು ಅಥವಾ ಪ್ರತಿಭೆಗಳಿದ್ದರೆ ಮಾತ್ರ ಈ ಬುಕ್ ಸೇರುವ ಸಾಧ್ಯತೆ ಹೆಚ್ಚಿರುತ್ತೆ.

ತನ್ನ ವಿಭಿನ್ನ ಲುಕ್ ನಿಂದ ಗಿನ್ನಿಸ್ ರೆಕಾರ್ಡ್ ಮಾಡಿದ ವಿಚಿತ್ರ ಹುಡುಗಿಯೊಬ್ಬಳ ಮಾಹಿತಿ ಇಲ್ಲಿದೆ ಮುಂದೆ ಓದಿ. 2010 ರಲ್ಲಿ, ಥೈಲ್ಯಾಂಡ್ ನ 10 ವರ್ಷದ ಸುಪತ್ರಾ ಸಸುಫನ್(Supatra Sasuphan) ಪ್ರಸಿದ್ಧ ಗಿನ್ನಿಸ್ ರೆಕಾರ್ಡ್ ಮಾಡುತ್ತಾಳೆ. ಕಾರಣವೇನೆಂದರೆ ಈಕೆ ಸಾಮಾನ್ಯ ಹುಡುಗಿಯರಂತಿಲ್ಲ. ಬಹಳ ಅಸಾಮಾನ್ಯ ಹುಡುಗಿ. ಸುಪಾತ್ರಾ ಸಸುಫಾನ್, ಹೈಪರ್ಟ್ರಿಕೋಸಿಸ್ನಿಂದ ಬಳಲುತ್ತಿದ್ದಾಳೆ, ಇದೊಂದು ಅಪರೂಪದ ಸ್ಥಿತಿಯಾಗಿದ್ದು, ಆಕೆಯ ದೇಹ ಮತ್ತು ಮುಖ ಪೂರ್ತಿ ಕೂದಲುಗಳಿಂದ ತುಂಬಿ ಹೋಗಿದೆ.
ಆಕೆ ಬೆಳೆದಂತೆ, ಅವಳ ಕೂದಲು ದಪ್ಪವಾಗುತ್ತಲೇ ಹೋಗುತ್ತದೆ. ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಮತ್ತು ಲೇಸರ್ ತಂತ್ರಜ್ಞಾನ ಬಳಸುವ ಪ್ರಯತ್ನಗಳು ಕೂಡ ವಿಫಲವಾದವು. ಲೇಸರ್ ಪರಿಣಾಮ ಈಕೆಯ ಮುಖದ ಮೇಲೆ ಕೂದಲು ಇನ್ನೂ ದಟ್ಟವಾಗಿ ಬೆಳೆಯಲು ಪ್ರಾರಂಭಿಸಿತು. ಈಕೆ “ಅತ್ಯಧಿಕ ಕೂದಲುಳ್ಳ ಹುಡುಗಿ” ಎಂದು ಅಧಿಕೃತವಾಗಿ ಗುರುತಿಸಲ್ಪಟ್ಟಿದ್ದಾಳೆ. ಈಕೆಯ ಜನನವಾದಾಗ ಸುಪತ್ರಾ ಅವರ ಪೋಷಕರಿಗೆ, ಈಕೆಯ ಈ ಅಪರೂಪದ ಸ್ಥಿತಿಯ ಬಗ್ಗೆ ತಿಳಿದಿರಲಿಲ್ಲ. ಮಗುವಿಗೆ ಅಸಹಜವಾಗಿ ಸಣ್ಣ ಮೂಗಿನ ಹೊಳ್ಳೆಯಿರುವ ಕಾರಣ ಉಸಿರಾಡಲು ಕಷ್ಟವಾಗ್ತಿದೆ ಅಂತ ಅಷ್ಟೇ ವೈದ್ಯರು ಹೇಳಿದ್ದರು.

ಆದರೆ ಈ ನೋವನ್ನು ಸುಪತ್ರಾಳನ್ನು ಬಿಟ್ಟು ಹೋಗಲಿಲ್ಲ. ಅಸಾಮಾನ್ಯ ರೋಗಲಕ್ಷಣಗಳು ಹೆಚ್ಚು ಹೆಚ್ಚು ಕಾಣಿಸಿಕೊಳ್ಳತೊಡಗಿದವು. ಹುಡುಗಿಯ ಹಲ್ಲುಗಳು ಬಹಳ ನಿಧಾನವಾಗಿ ಬೆಳೆದವು ಅವಳು ಸಾಮಾನ್ಯ ಹುಡುಗಿಯರಂತೆ ಮುದ್ದಾಗಿರಲಿಲ್ಲ, ಅವಳ ಮುಖದ ಮೇಲೆ ದಟ್ಟವಾದ ಕೂದಲನ್ನು ಹೊಂದಿದ್ದಳು, ಅದು ಆಕೆಯ ಹಣೆ, ಕಣ್ಣುರೆಪ್ಪೆಗಳು ಮತ್ತು ಮೂಗನ್ನು ಆವರಿಸತೊಡಗಿತ್ತು ! ಸುಪತ್ರಾ ಸಸುಫನ್ನನ್ನು ಅಂತಿಮವಾಗಿ "ವೆರ್ವಾಲ್ಫ್ ಸಿಂಡ್ರೋಮ್" ಎಂದು ಹೆಚ್ಚು ಜನಪ್ರಿಯವಾಗಿ ಕರೆಯಲ್ಪಡುವ ಅಪರೂಪದ ಜೆನೆಟಿಕ್ ಸಿಂಡ್ರೋಮ್, ಅಂಬ್ರಾದಿಂದ ಗುರುತಿಸಲಾಯಿತು.
ಪುಟ್ಟ ಹುಡುಗಿ ತನ್ನ ಮೊದಲ ಸಾಮಾಜಿಕ ಜೀವನವನ್ನು ಪ್ರಾರಂಭಿಸಿದ ನಂತರ ಅನುಭವಿಸಿದ ಕಷ್ಟ ಆಕೆಗೇ ಗೊತ್ತು. ಶಾಲೆಯಲ್ಲಿ ಆಕೆಯ ಅಧ್ಯಯನ ಬಗ್ಗೆ ಯಾರೂ ಆಸಕ್ತಿ ತೋರಿಸ್ತಿರಲಿಲ್ಲ. “ವೂಲ್ಫ್ ಗರ್ಲ್” ಮತ್ತು “ಬ್ಲ್ಯಾಕ್ ಕ್ಯಾಪ್” ಎಂಬ ಹೆಸರಿನಿಂದ ತಮಾಷೆ ಮಾಡುತ್ತಿದ್ದರು. ಇಂದು ಈ 17 ವರ್ಷ ವಯಸ್ಸಿನ ವಿಶಿಷ್ಟ ಕೂದಲಿನ ಹುಡುಗಿ ತನ್ನ ವಿಶಿಷ್ಟ ಲಕ್ಷಣದೊಂದಿಗೆ ಬದುಕಲು ಕಲಿತಿದ್ದು ಮಾತ್ರವಲ್ಲ, “ತನ್ನ ಜೀವನದ ಪ್ರೀತಿ”ಯನ್ನು ಕೂಡಾ ಭೇಟಿಯಾಗಿ ಮದುವೆಯಾದಳು!

ವಿವಾಹಿತ ಜೀವನದಲ್ಲಿ ಸಂಪೂರ್ಣ ಸಂತೋಷಕ್ಕಾಗಿ ಸುಪತ್ರಾ ಸಸುಫನ್ ತನ್ನ ಮುಖ ಮತ್ತು ದೇಹವನ್ನು ನಿಯಮಿತವಾಗಿ ಕ್ಷೌರ ಮಾಡಲು ನಿರ್ಧರಿಸಿದರು! ಈಗ ಈಕೆ ತನ್ನ ವಿಭಿನ್ನ ಲುಕ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ ಎಂಬುದೇ ಅಚ್ಚರಿ ಸಂಗತಿ ಎಂದು ಹೇಳಬಹುದು.
- ಪವಿತ್ರ ಸಚಿನ್