ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಪ್ರಕರಣಗಳನ್ನು ಗಮನಿಸಿದರೆ ಸಂಬಂಧಗಳು ಮೌಲ್ಯವನ್ನೇ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.
ಇಂತಹ ಪ್ರಕರಣದಲ್ಲಿ ಇದು ಒಂದು ಎಂಬಂತೆ, ತಾಯಿಯೊಬ್ಬಳು ತನ್ನ ಮಗನನ್ನೇ ಮದುವೆಯಾದ(Marriage) ಘಟನೆ! ಹೌದು, ವಿಚಿತ್ರ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಗನನ್ನೇ ಮದುವೆಯಾದ ಘಟನೆ ಉತ್ತರಾಖಂಡ್(Uttarkhand) ರಾಜ್ಯದ ಬಜ್ಪುರ್‌ನಲ್ಲಿ(Bhajpur) ನಡೆದಿದೆ. ತಾನು ಹೊತ್ತು, ಹೆತ್ತು ಬೆಳೆಸಿದ ಮಗನನ್ನು ಮದುವೆಯಾಗಬೇಕಾದರೆ ಆಕೆ ಇನ್ನೆಷ್ಟು ವಿಲಕ್ಷಣ ಮನಸ್ಥಿತಿ ಹೊಂದಿರಬಹುದು ಎನ್ನುವುದನ್ನು ಯೋಚಿಸಲೂ ಸಾಧ್ಯವಿಲ್ಲ.
ಈ ಘಟನೆಯಿಂದ ಆಘಾತಗೊಂಡ ಆಕೆಯ ಪತಿ ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಮಧ್ಯ ವಯಸ್ಸಿನ ಇಂದ್ರಾರಾಜ್ ಎಂಬವರು ತಮ್ಮ ಪತ್ನಿ ವಿರುದ್ಧ ದೂರು ದಾಖಲಿಸಿದ್ದು, ಪತ್ನಿ ಮಗನನ್ನೇ ಮದುವೆಯಾಗಿದ್ದಲ್ಲದೇ ಮನೆಯಲ್ಲಿದ್ದ 20 ಸಾವಿರ ರೂಪಾಯಿಯನ್ನು ಹೊತ್ತೊಯ್ದಿದ್ದಾಳೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅಂದಹಾಗೆ ಈಕೆ ಮದುವೆಯಾದ ಪುತ್ರ ಆಕೆಯ ಮೊದಲ ಪತಿಯ ಮಗ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ವಿವರವಾಗಿ ನೋಡುವುದಾದರೆ, ಇಂತಹ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿರುವುದು ಉತ್ತರಾಖಂಡ್‌ನ ಉಧಮ್ ಸಿಂಗ್ ನಗರದ ಬಜ್ಪುರ್.
ಇಂದ್ರರಾಮ್ ಅವರು ಹನ್ನೊಂದು ವರ್ಷಗಳ ಹಿಂದೆ ಬಬ್ಲಿ ಎಂಬಾಕೆಯನ್ನು ವಿವಾಹವಾಗಿದ್ದರು. ಆಕೆ ಇಂದ್ರರಾಮ್‌ನನ್ನು ಮದುವೆಯಾಗಲು ಮೊದಲ ಪತಿಯನ್ನು ತೊರೆದಿದ್ದಳು. ಮೊದಲ ಪತಿಯೊಂದಿಗಿನ ದಾಂಪತ್ಯದಲ್ಲಿ ಬಬ್ಲಿಗೆ ಇಬ್ಬರು ಮಕ್ಕಳಿದ್ದರು. ನಂತರ ಇಂದ್ರರಾಮ್ ಜೊತೆಗಿನ ದಾಂಪತ್ಯದಲ್ಲಿ ಇವರಿಗೆ ಮೂವರು ಮಕ್ಕಳಿದ್ದಾರೆ. ಇಂದ್ರಾರಾಮ್ ನೀಡಿರುವ ದೂರಿನ ಪ್ರಕಾರ, ಬಬ್ಲಿಯ ಮೊದಲ ಪತಿಯ ಮಗ ಇತ್ತೀಚೆಗೆ ಆಗಾಗ ಮನೆಗೆ ಬರಲು ಆರಂಭಿಸಿದ್ದ.
ಆದರೆ ಈಗ ಆತ ಮತ್ತು ನನ್ನ ಪತ್ನಿಯನ್ನು ಮದುವೆಯಾಗಿದ್ದು, ಮನೆಯಲ್ಲಿದ್ದ 20,000 ನಗದನ್ನು ತೆಗೆದುಕೊಂಡು ನನ್ನ ಪತ್ನಿ ಆತನೊಂದಿಗೆ ಪರಾರಿಯಾಗಿದ್ದಾಳೆ ಎಂದು ಇಂದ್ರಾರಾಮ್ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ವಿವಾಹೇತರ ಸಂಬಂಧಗಳು ಯಾವಾಗಲೂ ಅಪಾಯವೇ. ಅಕ್ರಮ ಸಂಬಂಧ ದೀರ್ಘಕಾಲ ಸುಖ ಶಾಂತಿ ನೀಡಲು ಸಾಧ್ಯವಿಲ್ಲ.
ಹಾಗೆ ವಿವಾಹೇತರ ಸಂಬಂಧಗಳ ಅಂತ್ಯ ಅತ್ಯಂತ ಕೆಟ್ಟದಾಗಿರುತ್ತದೆ. ಇದಕ್ಕೆ ಹಲವಾರು ಜೀವಂತ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಈ ಮೇಲಿನ ಘಟನೆಯನ್ನು ನೋಡಿದರೆ ಮಾನವ ಸಂಬಂಧಗಳು, ನಮ್ಮ ಸಮಾಜ ಎತ್ತ ಸಾಗುತ್ತಿದೆ ಎನ್ನುವುದು ಕಳವಳಕಾರಿಯಾದ ವಿಚಾರವಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.