ಕೊರೊನಾ ಸಮಸ್ಯೆ ದೇಶದಲ್ಲಿ ಹೊಸ ಆತಂಕಗಳನ್ನು ಸೃಷ್ಟಿಸುತ್ತಲೇ ಇದ್ದು, ಈ ರೋಗದಿಂದಾಗಿ ಸಾಕಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದೀಗ ಇಂದೋರ್‌ನ ರಸ್ತೆ ಬದಿಯಲ್ಲಿ ತರಕಾರಿ ಮಾರುವ ಮಹಿಳೆಯೊಬ್ಬರು ಅಧಿಕಾರದ ಮತ್ತಿನಲ್ಲಿರುವವರ ವಿರುದ್ಧ ಇಂಗ್ಲೀಷ್‌ನಲ್ಲೇ ಛೀಮಾರಿ ಹಾಕಿ ದೇಶದ ಜನರ ಕುತೂಹಲಕ್ಕೆ ಕಾರಣರಾಗಿದ್ದಾರೆ.
In Indore a vegetable vendor Raisa Ansari protested against the municipal authorities when they came to remove the handcarts of vegetables.The woman later claimed that she has done Phd in Materials Science from DAVV Indore. @ndtvindia @ndtv @GargiRawat #lockdown #COVID19 pic.twitter.com/RieGffTMyP
— Anurag Dwary (@Anurag_Dwary) July 23, 2020
ವಿಡಿಯೋದಲ್ಲಿರುವ ಈ ಮಹಿಳೆ ಓದಿ ವಿಜ್ಞಾನಿ ಆಗ ಬೇಕೆಂಬ ಕನಸು ಕಂಡಿದ್ದ ರೈಸಾ ಅನ್ಸಾರಿ. 2011 ರಲ್ಲಿ ದೇವಿ ಅಹಿಲ್ಯ ವಿಶ್ವ ವಿದ್ಯಾಲಯದಿಂದ ಮೆಟಿರಿಯೆಲ್ ಸೈನ್ಸ್‌ನಲ್ಲಿ ಪಿ.ಎಚ್.ಡಿ ಪದವಿ ಪಡೆದುಕೊಂಡಿದ್ದರು. ಆದರೆ ಇವರಿಗೆ ಯಾವುದೇ ಉದ್ಯೋಗ ಸಿಗದಿದ್ದಕ್ಕೆ ರಸ್ತೆ ಬದಿ ತರಕಾರಿ ವ್ಯಾಪಾರ ಮಾಡಿ ಜೀವನ ನಿರ್ವಹಣೆಗೆ ಮುಂದಾಗಿದ್ದಾರೆ. ಇದೀಗ ನಗರ ಪಾಲಿಕೆ ಅಧಿಕಾರಿಗಳು ಇವರ ತರಕಾರಿ ಬಂಡಿಯನ್ನು ಬೇರೆ ಕಡೆ ಸಾಗಿಸುವುದಾಗಿ ಆದೇಶ ನೀಡಿದ್ದು ರೈಸಾ ಇದಕ್ಕೆ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಾಧ್ಯಮದವರಿಗೆ ಇಂಗ್ಲಿಷ್‌ನಲ್ಲೇ ಪ್ರತ್ಯುತ್ತರ ನೀಡಿದ್ದಾರೆ. ಸಧ್ಯ ಈ ವಿಡೀಯೋ ವೈರಲ್ ಆಗಿದೆ.
ರೈಸಾರ ಒಡ ಹುಟ್ಟಿದವರು ಕೂಡ ವಿದ್ಯಾವಂತರಾಗಿದ್ದು ಯಾರೊಬ್ಬರಿಗೂ ಉದ್ಯೋಗ ಸಿಗದ್ದಿದ್ದಕ್ಕೆ ಇವರು ತರಕಾರಿ ವ್ಯಾಪಾರ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಮುನಿಸಿಪಾಲಿಟಿಯವರು ಇವರ ತರಕಾರಿ ವ್ಯಾಪರವನ್ನು ಸ್ಥಳಾಂತರಿಸಬೇಕೆಂದು ಎಂದು ಒತ್ತಾಯ ಮಾಡುತ್ತಿದ್ದಾರೆ. ಈಗಾಗಲೇ ಕೊರೋನಾದಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದು ಈಗ ಇದನ್ನು ಮಾರಲು ಅವಕಾಶ ಸಿಗದಿದ್ದರೆ ನಮ್ಮ ಕುಟುಂಬ ಬೀದಿಗೆ ಬೀಳುತ್ತದೆ ಎಂದು ರೈಸಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
She is a Raisa Ansari (phd holder) and she is selling vegetable in Indore pic.twitter.com/sGNQ7GmGNx
— vikram Singh jat (@vikramsinghjat7) July 23, 2020
ಕಳೆದ 55-60 ವರ್ಷದಿಂದ ರೈಸಾರ ಕುಟುಂಬದವರು ತರಕಾರಿ ಮತ್ತು ಹಣ್ಣು ವ್ಯಾಪರ ಮಾಡುತ್ತಿದ್ದು, ಇವರು ಕೂಡ ಇದನ್ನು ಮುಂದುವರೆಸುತ್ತಿದ್ದಾರೆ. ಬೇರೆ ಕಡೆ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವೆ, ನಮ್ಮ ಜಾತಿಯ ಕಾರಣಕ್ಕೆ ಯಾರು ನನಗೆ ಉದ್ಯೋಗ ನೀಡುತ್ತಿಲ್ಲ ಆದರೆ ಭಾರತದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಇದೆ ಎಂದು ರೈಸಾ ಹೇಳಿದ್ದಾರೆ.