• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ದೇಶದಾದ್ಯಂತ ಮಹಿಳಾ ಸಬಲೀಕರಣಕ್ಕೆ ನಗದು ಸಹಾಯ : 12 ರಾಜ್ಯದಿಂದ ಒಟ್ಟು ₹1.7 ಲಕ್ಷ ಕೋಟಿ ವೆಚ್ಚ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ರಾಜಕೀಯ, ವಿಜಯ ಟೈಮ್ಸ್‌
ದೇಶದಾದ್ಯಂತ ಮಹಿಳಾ ಸಬಲೀಕರಣಕ್ಕೆ ನಗದು ಸಹಾಯ : 12 ರಾಜ್ಯದಿಂದ ಒಟ್ಟು ₹1.7 ಲಕ್ಷ ಕೋಟಿ ವೆಚ್ಚ
0
SHARES
45
VIEWS
Share on FacebookShare on Twitter
  • 12 ರಾಜ್ಯಗಳಲ್ಲಿ ಗೃಹಲಕ್ಷ್ಮಿ ಮಾದರಿ ಯೋಜನೆಗಳಿಂದ ವರ್ಷಂತ್ಯ ವೆಚ್ಚ ₹1.7 ಲಕ್ಷ ಕೋಟಿ
  • 2022ರಲ್ಲಿ ಕೇವಲ 2 ರಾಜ್ಯ ಆದರೆ 2025ಕ್ಕೆ 12 ರಾಜ್ಯಗಳಿಂದ ಮಹಿಳೆಯರಿಗೆ ನಗದು ಸಹಾಯ
  • ರಾಜ್ಯದ ಜಿಡಿಪಿಯ ಮೇಲೂ ಭಾರೀ ಪರಿಣಾಮ

New delhi: ಮಹಿಳೆಯರನ್ನು ಆರ್ಥಿಕವಾಗಿ ಬಲಪಡಿಸುವ ಗುರಿಯೊಂದಿಗೆ, ಕರ್ನಾಟಕ ಸೇರಿ ಒಟ್ಟು 12 ರಾಜ್ಯಗಳು ನೇರ ನಗದು ವರ್ಗಾವಣೆಯ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿವೆ. (women empowerment by gruhalakshmi scheme)

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಸೇರಿದಂತೆ ಇದೇ ರೀತಿಯ ಯೋಜನೆಗಳು 2025-26ನೇ ಸಾಲಿನಲ್ಲಿ ಒಟ್ಟು ಸುಮಾರು ₹1.7 ಲಕ್ಷ ಕೋಟಿ ವೆಚ್ಚ ತರುವುದಾಗಿ ತಜ್ಞರು ತಿಳಿಸಿದ್ದಾರೆ.

ಮಹಿಳೆಯರನ್ನು ಆರ್ಥಿಕವಾಗಿ ಬಲಪಡಿಸುವ ಗುರಿಯೊಂದಿಗೆ ರಾಜ್ಯಗಳಲ್ಲಿ ಗೃಹಲಕ್ಷ್ಮಿ ಮಾದರಿ ಯೋಜನೆಗಳು  ಜಾರಿ ಮಾಡಿವೆ

ಕೇವಲ ಮೂರು ವರ್ಷಗಳ ಹಿಂದೆ ಇಂತಹ ಯೋಜನೆಗಳು ಎರಡು ರಾಜ್ಯಗಳಿಗಷ್ಟೇ ಸೀಮಿತವಾಗಿದ್ದರೆ, ಈಗ ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಹೆಚ್ಚಿನ ರಾಜ್ಯಗಳು ಈ ಮಾದರಿಯತ್ತ ಗಮನ ಹರಿಸಿವೆ.

ಮುಖ್ಯವಾಗಿ ಈ ಯೋಜನೆಗಳಡಿ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರ ಖಾತೆಗೆ ತಿಂಗಳಿಗೆ ₹1,000 ರಿಂದ ₹2,000ರವರೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ. (women empowerment by gruhalakshmi scheme)

ಇದರಿಂದ ಮನೆ ಖರ್ಚು, ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ದೈನಂದಿನ ಅಗತ್ಯಗಳಿಗೆ ಮಹಿಳೆಯರಿಗೆ ಸ್ವತಂತ್ರ ಆರ್ಥಿಕಬಲ ಸಿಗುತ್ತದೆ ಎಂಬುದು ಈ ಯೋಜನೆಗಳ ಮುಖ್ಯ ಉದ್ದೇಶವಾಗಿತ್ತು.

ಆದರೆ ಆರ್ಥಿಕ ವಿಶ್ಲೇಷಕರ ಪ್ರಕಾರ, ಇಂತಹ ದೊಡ್ಡ ಮಟ್ಟದ ಸಬ್ಸಿಡಿಗಳಿಂದ ರಾಜ್ಯಗಳ ಹಣಕಾಸು ಮೇಲಿನ ಒತ್ತಡ ಹೆಚ್ಚುತ್ತಿದೆ.

ಇನ್ನು ಪಿಆರ್‌ಎಸ್‌ ಲೆಜಿಸ್ಲೇಟಿವ್ ರಿಸರ್ಚ್ (PRS Legislative Research) ನೀಡಿರುವ ವರದಿ ಪ್ರಕಾರ, ಈ ಯೋಜನೆಗಳಿಗೆ ಮಾಡಲಾಗುವ ವೆಚ್ಚ ಕಳೆದ ಎರಡು ವರ್ಷಗಳಲ್ಲಿ ದ್ವಿಗುಣವಾಗಿದೆ.

2022-23ರಲ್ಲಿ ರಾಷ್ಟ್ರದ ಜಿಡಿಪಿಯ (GDP) ಕೇವಲ ಶೇಕಡಾ 0.2ರಷ್ಟು ಹಣವನ್ನು ಈ ಯೋಜನೆಗಳಿಗೆ ಬಳಸಲಾಗುತ್ತಿತ್ತು.

ಈಗ ಅದು ಸುಮಾರು 0.5%ಕ್ಕೆ ಏರಿದೆ. ಮುಂದಿನ ಚುನಾವಣೆಯನ್ನು ಎದುರಿಸುತ್ತಿರುವ ಕೆಲವು ರಾಜ್ಯಗಳು ಮಹಿಳಾ ಮತದಾರರನ್ನು ಆಕರ್ಷಿಸಲು ಯೋಜನೆಗಳ ಬಜೆಟ್‌ನ್ನು ಹೆಚ್ಚಿಸಿರುವುದು ಗಮನಾರ್ಹ.

ಉದಾಹರಣೆಗೆ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮಹಿಳೆಯರಿಗೆ ನೀಡಲಾಗುವ ಮೊತ್ತವನ್ನು ಕ್ರಮವಾಗಿ ಶೇಕಡಾ 31% ಮತ್ತು 15% ಹೆಚ್ಚಿಸಲಾಗಿದೆ.

ಈ ಏರಿಕೆಗಳು ಮತ ರಾಜಕಾರಣಕ್ಕೆ ಬಳಸಲಾಗುತ್ತಿವೆ ಎಂಬ ಟೀಕೆಗಳೂ ಕೇಳಿಬರುತ್ತಿವೆ.

ಯೋಜನೆಗಳು ಜನಪರವಾಗಿದ್ದರೂ, ಹಣಕಾಸಿನ ಸಮತೋಲನೆ ದೊಡ್ಡ ಪ್ರಶ್ನೆಯಾಗಿದೆ.

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಯಾದ ನಂತರ ರಾಜ್ಯದ ಬಜೆಟ್‌ನಲ್ಲಿ ಆದಾಯ ಕೊರತೆಯ ಅಂದಾಜು ಮಾಡಲಾಗಿದೆ.

ವರದಿ ಹೇಳುವಂತೆ, ಗೃಹಲಕ್ಷ್ಮಿ ಯೋಜನೆಯನ್ನು ರದ್ದು ಮಾಡಿದರೆ ರಾಜ್ಯವು ಶೇಕಡಾ 0.3 ರಷ್ಟು ಕೊರತೆ ಬಜೆಟ್‌ನಿಂದ ಶೇಕಡಾ 0.6 ರಷ್ಟು ಮಿಗತೆ ಬಜೆಟ್ ಹೊಂದಿದ ರಾಜ್ಯವಾಗಿ ಬದಲಾಗುತ್ತದೆ.

ಇದೇ ರೀತಿ ಮಧ್ಯಪ್ರದೇಶವೂ ‘ಲಾಡ್ಲಿ ಬೆಹನ್’ (Ladli Behan) ಯೋಜನೆಯನ್ನು ಕೈಬಿಟ್ಟರೆ surplus‌ ಬಜೆಟ್‌ ಹೊಂದುವ ಸಾಧ್ಯತೆ ಇದೆ.

ಹೀಗಾಗಿ, ಯೋಜನೆಗಳು ಸಾಮಾಜಿಕ ದೃಷ್ಟಿಯಿಂದ ಪ್ರಯೋಜನಕಾರಿ ಆದರೂ ರಾಜ್ಯದ ಹಣಕಾಸು ನಿರ್ವಹಣೆಯಲ್ಲಿ ದೊಡ್ಡ ಸವಾಲನ್ನು ಎದುರಿಸಬೇಕಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಇತ್ತೀಚೆಗಷ್ಟೇ ಸಮಾನ ಎಚ್ಚರಿಕೆ ನೀಡಿದ್ದು, ನಿರಂತರ ಸಬ್ಸಿಡಿ ಮತ್ತು ನೇರ ನಗದು ವರ್ಗಾವಣೆಗಳಿಂದ ರಾಷ್ಟ್ರದ ಉತ್ಪಾದನಾ ಸಾಮರ್ಥ್ಯ ಕುಂದಬಹುದು ಎಂದು ಸೂಚಿಸಿದೆ.

ಹಣಕಾಸಿನ ಒತ್ತಡದಿಂದ ಮೂಲಸೌಕರ್ಯ, ಕೈಗಾರಿಕೆ ಮತ್ತು ಉದ್ಯೋಗ ನಿರ್ಮಾಣಕ್ಕೆ ಹೂಡಿಕೆ ತಗ್ಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನು ಓದಿ : ಛತ್ತೀಸ್​ಗಢದ ಬಿಲಾಸ್ಪುರದಲ್ಲಿ ರೈಲು ಅಪಘಾತ: ಸರಕು ರೈಲು–ಪ್ರಯಾಣಿಕರ ರೈಲು ಡಿಕ್ಕಿ, 6 ಮಂದಿ ಸಾವು
Tags: GDPgruha lakshmiNewdelhipolitics

Related News

ಕರ್ನಾಟಕಕ್ಕೆ ಚಂಡಮಾರುತದ ಭೀತಿ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ!
ಪ್ರಮುಖ ಸುದ್ದಿ

ಕರ್ನಾಟಕಕ್ಕೆ ಚಂಡಮಾರುತದ ಭೀತಿ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ!

November 10, 2026
ದೀಪಾವಳಿ ಎಫೆಕ್ಟ್‌ಗೆ ದೆಹಲಿ ತತ್ತರ, ದಟ್ಟ ಹೊಗೆ, ಮಂಜಿನ ವಾತಾವರಣ
ದೇಶ-ವಿದೇಶ

ದೀಪಾವಳಿ ಎಫೆಕ್ಟ್‌ಗೆ ದೆಹಲಿ ತತ್ತರ, ದಟ್ಟ ಹೊಗೆ, ಮಂಜಿನ ವಾತಾವರಣ

November 10, 2026
KSRTC ನೇಮಕಾತಿ; ಯಾರಿಗೆಲ್ಲಾ ಅವಕಾಶ?
ಪ್ರಮುಖ ಸುದ್ದಿ

KSRTC ನೇಮಕಾತಿ; ಯಾರಿಗೆಲ್ಲಾ ಅವಕಾಶ?

November 10, 2026
ದೀಪಾವಳಿ ಹಬ್ಬಕ್ಕೆ KSRTC ವಿಶೇಷ ಕೊಡುಗೆ: ಬೆಂಗಳೂರಿನಿಂದ 123 ಸ್ಥಳಗಳಿಗೆ 908 ವಿಶೇಷ ಬಸ್‌ಗಳ ವ್ಯವಸ್ಥೆ
ಪ್ರಮುಖ ಸುದ್ದಿ

ದೀಪಾವಳಿ ಹಬ್ಬಕ್ಕೆ KSRTC ವಿಶೇಷ ಕೊಡುಗೆ: ಬೆಂಗಳೂರಿನಿಂದ 123 ಸ್ಥಳಗಳಿಗೆ 908 ವಿಶೇಷ ಬಸ್‌ಗಳ ವ್ಯವಸ್ಥೆ

November 7, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.