ಮಹಿಳೆಯ ಸೋದರಳಿಯ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿನ ಮಾಹಿತಿ ಅನುಸಾರ, ಏರ್ ಇಂಡಿಯಾ ಸಿಬ್ಬಂದಿಗಳು ವಿಮಾನದ ಬೋರ್ಡಿಂಗ್ ಗೇಟ್ನಲ್ಲಿ ಮಹಿಳೆಯ ಪ್ರವೇಶವನ್ನು ನಿರಾಕರಿಸಿದ ನಂತರ ಮಹಿಳೆಯೊಬ್ಬರು ಪ್ಯಾನಿಕ್ ಆಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಇದಲ್ಲದೆ, ಆಕೆಯ ಸೋದರಳಿಯ ಸಿಬ್ಬಂದಿ ಸೆಕ್ಯುರಿಟಿಯನ್ನು ಕರೆದರು ಸಿಬ್ಬಂದಿಗಳು ಯಾವುದೇ ರೀತಿ ಸ್ಪಂದಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಮಹಿಳೆಯನ್ನು ಹೃದಯ ಮತ್ತು ಮಧುಮೇಹ ರೋಗಿ ಎಂಬ ಕಾರಣಕ್ಕೆ ವಿಮಾನ ನಿಲ್ದಾಣದಿಂದ ಬಲವಂತವಾಗಿ ಹೊರಹಾಕಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ(Air India) ಇದು ದಿಕ್ಕು ತಪ್ಪಿಸುವ ಸುದ್ದಿ ಎಂದು ಹೇಳಿದೆ.
ಇನ್ನು ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಹಿಳೆಯ ಸೋದರಳಿಯ, ದಯವಿಟ್ಟು ಈ ವೀಡಿಯೊವನ್ನು ಆ ಆಡಳಿತಕ್ಕೆ ತಲುಪುವವರೆಗೆ ಮತ್ತು ಇಂಥಹ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಹೆಚ್ಚೆಚ್ಚು ಶೇರ್ ಮಾಡಿ ಎಂದು ಮನವಿ ಮಾಡಿದ್ದಾರೆ. ಸಾಮಾನ್ಯ ಜನರ ಶಕ್ತಿಯನ್ನು ಅವರಿಗೆ ತೋರಿಸೋಣ. ಹೃದಯ ಮತ್ತು ಮಧುಮೇಹ ರೋಗಿಯು ವೈದ್ಯಕೀಯ ಸೇವೆಯನ್ನು ಬಯಸುತ್ತಿದ್ದರೂ ಅವರಿಗೆ ಭದ್ರತೆಗೆ ನೀಡದೆ, ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಹೋಗುವಂತೆ ಒತ್ತಾಯಿಸಿದ್ದಾರೆ.
ಇಂಥ ನಾಚಿಕೆಯಿಲ್ಲದ ಸಿಬ್ಬಂದಿಗಳನ್ನು ನಿರುದ್ಯೋಗಿಗಳನ್ನಾಗಿ ಮಾಡೋಣ ಮತ್ತು ನೀವು ಏರ್-ಇಂಡಿಯಾ ಫ್ಲೈಟ್‌ಗಳನ್ನು ಬುಕ್ ಮಾಡುವ ಮೊದಲು ಯೋಚಿಸಿ ಎಂದು ಬರೆದು ಏರ್ ಇಂಡಿಯಾ ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.