vijaya times advertisements
Visit Channel

ತಾಯಿಯ ಶವವನ್ನು 10 ವರ್ಷಗಳ ಕಾಲ ಫ್ರೀಜರ್ ನಲ್ಲಿಟ್ಟಿದ್ದ ಮಹಿಳೆ!

deadbody

Japan : ಕುಟುಂಬ ಸದಸ್ಯರಲ್ಲಿ ಯಾರಾದರೂ ಮೃತಪಟ್ಟರೆ ಹೆಚ್ಚೆಂದರೆ ಮೂರು ದಿನಗಳ ಕಾಲ ಮೃತದೇಹವನ್ನ(Women Kept deadbody In Freezer) ಅಂತ್ಯ ಸಂಸ್ಕಾರ ಮಾಡದೇ ಹಾಗೆ ಇಡುತ್ತಾರೆ. ವಿದೇಶದಿಂದ ಮಕ್ಕಳು ಬರಬೇಕಾದ ಸಂದರ್ಭ ಅಥವಾ ಇನ್ನಿತರ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಮೂರು ದಿನಗಳ ಕಾಲ ಅಂತ್ಯ ಸಂಸ್ಕಾರವನ್ನು ಮುಂದೂಡಲಾಗುತ್ತದೆ.

Dead Body

ಅದನ್ನೂ ಮೀರಿ ಮೃತದೇಹವನ್ನು ದಹನ ಅಥವ ಮಣ್ಣು ಮಾಡಲೇಬೇಕಾಗುತ್ತೆ. ಆದರೆ, ವರ್ಷಾನುಗಟ್ಟಲೇ ಯಾರಾದರೂ ಮೃತದೇಹವನ್ನ ಸಂಸ್ಕಾರ ಮಾಡದೇ ಹಾಗೆಯೇ ಬಿಡಲು ಸಾಧ್ಯವೇ? ಮೃತ ವ್ಯಕ್ತಿ ಎಷ್ಟೇ ಆಪ್ತರಿದ್ದರೂ, ಮನಸ್ಸಿಗೆ ಸಂಕಟವಾದರೂ ಅವರ ಅಂತ್ಯ ಸಂಸ್ಕಾರ ಮಾಡುವುದು ಅನಿವಾರ್ಯ.

ಶಾಸ್ತ್ರ, ವಿಧಿ ವಿಧಾನಗಳನ್ನು ಪಾಲಿಸಿದಾಗ ಮಾತ್ರ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ ತಲತಲಾಂತರಗಳಿಂದ ನಡೆದುಕೊಂಡು ಬಂದಿದೆ.

ಆದರೆ, ಜಪಾನ್ ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು, ಅಕ್ಷರಶಃ ಎಲ್ಲರನ್ನೂ ಬೆರಗಾಗಿಸಿದೆ.

ಇದನ್ನೂ ಓದಿ : https://vijayatimes.com/karnataka-maharashtra-border/


ಹೌದು, ಜಪಾನ್ ನಲ್ಲಿ(Women Kept deadbody In Freezer) ಮಹಿಳೆಯೊಬ್ಬಳು ತನ್ನ ತಾಯಿಯ ಶವವನ್ನು ಸುಮಾರು ಹತ್ತು ವರ್ಷಗಳ ಕಾಲ ಫ್ರೀಜರ್ ನಲ್ಲಿ ಅಡಗಿಸಿಟ್ಟಿದ್ದ ವಿಚಿತ್ರ ಸಂಗತಿ ಬೆಳಕಿಗೆ ಬಂದು ಜಪಾನ್ ನಾಗರೀಕರನ್ನು ನಿಬ್ಬೆರಗಾಗಿಸಿದೆ!

ಜಪಾನ್ನ ಟೋಕಿಯೋದ ‘ಯೂಮಿ ಯೋಶಿನೋ’ ಎನ್ನುವ 48 ವರ್ಷದ ಮಹಿಳೆ ಈ ಕೆಲಸ ಮಾಡಿದ್ದಾಳೆ.

ಇದನ್ನೂ ಓದಿ : https://vijayatimes.com/japanese-cleaned-qatar-stadium/

ಮೃತದೇಹವೊಂದನ್ನು ಅಪಾರ್ಟ್ಮೆಂಟ್ ನಲ್ಲಿ ಅಡಗಿಸಿಟ್ಟ ಆರೋಪದ ಮೇಲೆ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ತಾಯಿ ಸತ್ತ ಸಂಗತಿ ಬೇರೆಯವರಿಗೆ ತಿಳಿದರೆ ತಾನು ಆ ಮನೆಯಿಂದ ಹೊರ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕೆ,

ತನ್ನ ಮನೆಯಲ್ಲಿಯೇ ತಾಯಿಯ ಶವವನ್ನು ಫ್ರೀಜರ್ ನಲ್ಲಿಟ್ಟಿದ್ದಾಗಿ ಮಹಿಳೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾಳೆ.

Japan Women

“ನನ್ನ ತಾಯಿಯೊಂದಿಗಿನ ನೆನಪು ಹಂಚಿಕೊಂಡ ಈ ಮನೆಯಿಂದ ಹೊರ ಹೋಗುವುದು ನನಗೆ ಇಷ್ಟವಿರಲಿಲ್ಲ.

ಈ ಕಾರಣದಿಂದಾಗಿ, ತಾಯಿ ಸತ್ತ ನಂತರವೂ ಆಕೆಯ ಶವವನ್ನು ಹತ್ತು ವರ್ಷಗಳ ಕಾಲ ನಾನೇ ಫ್ರೀಜರ್ ನಲ್ಲಿಟ್ಟು ಕಾಪಾಡಿಕೊಂಡೆ.

ನನ್ನ ತಾಯಿ ಸಾಯುವಾಗ ಸುಮಾರು 60 ವರ್ಷ ವಯಸ್ಸಾಗಿತ್ತು” ಎಂದು ಮಹಿಳೆ ತಿಳಿಸಿದ್ದಾರೆ.


ಜಪಾನ್ ನ ಟೋಕಿಯೋದ ಮುನಿಸಿಪಾಲ್ ಹೌಸಿಂಗ್ ಕಾಂಪ್ಲೆಕ್ಸ್ ನ ಅಪಾರ್ಟ್ಮೆಂಟ್ ನಲ್ಲಿ ತಾಯಿ, ಮಗಳು ವಾಸವಿದ್ದರು.

ತಾಯಿ ಸತ್ತ 10 ವರ್ಷಗಳ ನಂತರ, ಈಕೆ ಬಾಡಿಗೆ ಕಟ್ಟುತ್ತಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ಅಪಾರ್ಟ್ಮೆಂಟ್ ನಿಂದ ಒತ್ತಾಯವಾಗಿ ಕಳುಹಿಸಲಾಗಿತ್ತು.

https://youtu.be/lQMiDP-GDV4 ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಜನ ಜಾತ್ರೆ!

ನಂತರ ಮನೆ ಕ್ಲೀನ್ ಮಾಡಲು ಬಂದ ವ್ಯಕ್ತಿ ಬಚ್ಚಲ ಮನೆಯಲ್ಲಿಟ್ಟಿದ್ದ ಫ್ರೀಜರ್ ನಲ್ಲಿದ್ದ ಶವವನ್ನು ನೋಡಿ ಬೆಚ್ಚಿಬಿದ್ದಿದ್ದ.

ನಂತರ ಪೊಲೀಸರು ತನಿಖೆ ಕೈಗೊಂಡು ಆ ಮಹಿಳೆಯನ್ನು ಬಂಧಿಸಿದ್ದಾರೆ. ಅಟಾಪ್ಸಿ ವರದಿಯಲ್ಲಿ ಈ ಶವದ ಸತ್ತ ಅವಧಿ ಹಾಗೂ ಕಾರಣ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

  • ಪವಿತ್ರ

Latest News

ರಾಜಕೀಯ

ಬೆಳಗಾವಿಯಲ್ಲಿ ಭಾರೀ ಬಿಗಿ ಭದ್ರತೆ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ನಿಷೇಧ

ಸರ್ಕಾರದ ಇಬ್ಬರು ಸಚಿವರು ಇಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿರುವ ಕಾರಣ, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಒರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ದೇಶ-ವಿದೇಶ

ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

“ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ

ರಾಜಕೀಯ

“ಸಿದ್ರಾಮುಲ್ಲಾಖಾನ್” ಸಿಟಿ ರವಿ ಟೀಕೆಯಿಂದ ಮುಸ್ಲಿಂ ಮುಲ್ಲಾಗಳಿಗೆ ಅವಮಾನವಾಗಿದೆ ಎಂದು ಆರೋಪ

ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್  ಎಂಬುದು ಜನರೇ ನೀಡಿರುವ ಬಿರುದು,