Hyderabad: ಮಹಿಳೆಯನ್ನು ಕೊಂದು, ದೇಹವನ್ನು ಆರು ಪ್ರತ್ಯೇಕ ಭಾಗ ಮಾಡಿ ಫ್ರಿಡ್ಜ್ನಲ್ಲಿ (women killed by men) ಸಂಗ್ರಹಿಸಿದ ಭೀಕರ ಅಪರಾಧಕ್ಕೆ ಕಾರಣವಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆಯೊಂದಿಗೆ ವ್ಯಕ್ತಿ ವಿವಾಹೇತರ ಸಂಬಂಧ ಹೊಂದಿದ್ದ ಎಂಬುದು ಬೆಳಕಿಗೆ (women killed by men) ಬಂದಿದೆ. 55 ವರ್ಷದ ಮಹಿಳೆಯ ಕತ್ತರಿಸಿದ ತಲೆ ಕಸದ ತೊಟ್ಟಿಯಲ್ಲಿ ಪತ್ತೆಯಾದ ನಂತರ ಒಂದು ವಾರದ ತನಿಖೆಯ ಬಳಿಕ 48 ವರ್ಷದ ಶಂಕಿತನನ್ನು ಕಸ್ಟಡಿಗೆ (Custody) ತೆಗೆದುಕೊಳ್ಳಲಾಗಿದೆ.

ಆರೋಪಿ ಚಂದ್ರಮೋಹನ್ , ಸಂತ್ರಸ್ತೆ ಅನುರಾಧಾ ರೆಡ್ಡಿಗೆ (Anuradha Reddy) 7 ಲಕ್ಷ ರೂಪಾಯಿ ಸಾಲ ಕೊಡಬೇಕಾಗಿತ್ತು. ಆದ್ರೆ ಆರೋಪಿ ಚಂದ್ರಮೋಹನ್ ಹಣ ವಾಪಾಸ್ ನೀಡಲಿಲ್ಲ.
ಈ ಸಾಲದ ವಿಚಾರವಾಗಿ ಜಗಳ ನಡೆದು ಕೊಲೆ ನಡೆದಿದೆ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಚಂದ್ರಮೋಹನ್ (Chandramohan) ಮದುವೆಯಾಗಿರಲಿಲ್ಲ, ಆದರೆ ಅನುರಾಧ ವಿಧವೆಯಾಗಿದ್ದು,
ಹಲವು ವರ್ಷಗಳ ಹಿಂದೆ ತನ್ನ ಸಂಗಾತಿಯು ನಿಧನರಾದಾಗಿನಿಂದ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಹದಿನೈದು ವರ್ಷಗಳಿಂದ ಇಬ್ಬರೂ ಪ್ರಣಯದಲ್ಲಿ ತೊಡಗಿದ್ದರು.
ಇದನ್ನು ಓದಿ: ಗ್ಯಾರಂಟಿಗಳ ಜಾರಿಗೆ ಪ್ರತಿ ವರ್ಷ ಬೇಕು 50 ಸಾವಿರ ಕೋಟಿ. ರೂ. ! ಸಾಲ ಮಾಡದೆ ‘ಗ್ಯಾರಂಟಿ’ ಜಾರಿ ಸಾಧ್ಯವೇ?
2018 ರಲ್ಲಿ, ಅನುರಾಧ ಚಂದ್ರಮೋಹನ್‌ಗೆ 7 ಲಕ್ಷ ರೂಪಾಯಿ ಸಾಲ ನೀಡಿದ್ದರು, ನಂತರ ಹಲವು ಬಾರಿ ಸಾಲ ವಾಪಾಸ್ ಕೇಳಿದ್ರೂ ಹಣ ಮರುಪಾವತಿ ಮಾಡಲಿಲ್ಲ. ಸಾಲ ಮರುಪಾವತಿಗಾಗಿ ಮಹಿಳೆಯ ನಿರಂತರ
ಬೇಡಿಕೆಯಿಂದ ಮೋಹನ್ ಹೆಚ್ಚು ಹತಾಶೆಗೊಂಡ ನಂತರ ಮೇ (May) 12 ರಂದು ಪರಿಸ್ಥಿತಿ ಉಲ್ಬಣಗೊಂಡಿತು. ಸ್ವಲ್ಪ ಸಮಯದ ಜಗಳದ ನಂತರ ಅನುರಾಧರ್ ನನ್ನು ಚಾಕುವಿನಿಂದ ಇರಿದು ಕೊಂದ ಚಂದ್ರ ಮೋಹನ್,
ದೇಹವನ್ನು ವಿಲೇವಾರಿ ಮಾಡಲು, ಸಣ್ಣ ಕಲ್ಲು ಕತ್ತರಿಸುವ ಎರಡು ಯಂತ್ರಗಳನ್ನು ಖರೀದಿಸಿ ಅದರಿಂದ ಆ ಮಹಿಳೆಯ ತಲೆಯನ್ನು ಕತ್ತರಿಸಿ, ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿದ್ದಾನೆ.

ನಂತರ ಅವರ ನಿವಾಸದ ಫ್ರೀಜರ್‌ನಲ್ಲಿ (Freezer) ಕಾಲುಗಳು ಮತ್ತು ತೋಳುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ್ದಾನೆ. ಆದರೆ ದೇಹದ ಉಳಿದ ಭಾಗವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ,
ಆಕೆಯ ತಲೆಯನ್ನು ಮೇ 15 ರಂದು ಮೂಸ್ ನದಿಯ ಬಳಿ ಎಸೆದಿದ್ದಾನೆ. ದೇಹದ ದುರ್ನಾತವನ್ನು ತಡೆಯಲು, ಧೂಪದ್ರವ್ಯ, ಫೀನಾಯಿಲ್ (Phenol) ಮತ್ತು ಸುಗಂಧ ದ್ರವ್ಯಗಳನ್ನು ಹಾಕಲಾಗಿತ್ತು.
ಮೇ 17 ರಂದು ನಗರದ ಮೂಸ್ ನದಿಯ ಬಳಿ ಸ್ಥಳೀಯ ಕಾರ್ಮಿಕರಿಗೆ ಮಹಿಳೆಯ ತಲೆ ಪತ್ತೆಯಾಗಿದೆ. ಮಲಕ್‌ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಲು ಅಧಿಕಾರಿಗಳು ಸ್ಥಳಕ್ಕೆ
ಧಾವಿಸಿದ್ದಾರೆ.ಪೊಲೀಸರು ಎಂಟು ವಿಶೇಷ ತಂಡಗಳನ್ನು ರಚಿಸಿ ಹತ್ಯೆ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಶ್ಮಿತಾ ಅನೀಶ್