ವಿಶ್ವ ತಂಬಾಕು ರಹಿತ ದಿನ: ಆರೋಗ್ಯ ಬೇಕಿದ್ದರೆ, ತಂಬಾಕು ಸೇವನೆ ಬಿಡಿ..

  • ಪ್ರತಿನಿಧಿ

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿದೆ. ಒಮ್ಮೆ ಈ ಕೆಟ್ಟ ಚಟಕ್ಕೆ ಬಿದ್ದರೆ, ನೀವು ಬಿಡಬೇಕೆಂದರೂ ಅದು ನಿಮ್ಮನ್ನು ಬಿಡಲಾರದು. ಇದರಿಂದ ಆರೋಗ್ಯದ ಜೊತೆಗೆ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿ.

ಆರೋಗ್ಯಕ್ಕೆ ದುಷ್ಪರಿಣಾಮ ಬೀರುವ ತಂಬಾಕು ಮತ್ತು ಸಿಗರೇಟ್ ಸೇವನೆಯ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಪ್ರತೀ ವರ್ಷ ಆಚರಿಸಲಾಗುತ್ತದೆ. ಈ ದಿನವನ್ನು ಯಾವಾಗ ಆಚರಿಸುತ್ತಾರೆ? ಈ ವರ್ಷದ ಥೀಮ್ ಹಾಗೂ ಪ್ರಾಮುಖ್ಯತೆ ಏನು ಎಂಬುದನ್ನು ನೋಡೋಣ.

ವಿಶ್ವ ತಂಬಾಕು ರಹಿತ ದಿನದ ಸಂಪೂರ್ಣ ಮಾಹಿತಿ ಈ ಕೆಳಗಿದೆ:

ಇಂದು ವಿಶ್ವತಂಬಾಕು ರಹಿತ ದಿನ:

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ತಂಬಾಕು ಬಳಕೆಯು ವಿಶ್ವದಾದ್ಯಂತ 8 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಧೂಮಪಾನ ತ್ಯಜಿಸಿದರೆ ಆದಷ್ಟು ಬೇಗ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಆದ್ದರಿಂದ ತಂಬಾಕು ಮತ್ತು ಧೂಮಪಾನ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮೇ 31 ರಂದು ವಿಶ್ವದಾದ್ಯಂತ ತಂಬಾಕು ರಹಿತ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಮೂಲಕ ಆರೋಗ್ಯದ ಮೇಲೆ ತಂಬಾಕಿನ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲು ಹಲವಾರು ಅಭಿಯಾನಗಳು, ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.

ವಿಶ್ವ ತಂಬಾಕು ರಹಿತ ದಿನದ ಈ ವರ್ಷದ ಥೀಮ್:

ಪ್ರತಿವರ್ಷ ವಿಭಿನ್ನ ಆಲೋಚನೆಯೊಂದಿಗೆ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಥೀಮ್ ಏನೆಂದರೆ “ಕಮಿಟ್ಸ್ ಟು ಕ್ವಿಟ್” ಅಂದರೆ ತ್ಯಜಿಸಲು ಬದ್ಧರಾಗಿರಿ ಎಂಬ ಅರ್ಥವನ್ನು ನೀಡುತ್ತದೆ. ಕೊರೊನಾ ಸೋಂಕು ಹರಡುವಿಕೆಯಿಂದಾಗಿ ಲಕ್ಷಾಂತರ ಜನರು ಧೂಮಪಾನ ಮತ್ತು ತಂಬಾಕು ಸೇವನೆಯನ್ನು ತ್ಯಜಿಸಲು ಬದ್ಧರಾಗಿದ್ದಾರೆ ಎಂಬ ಅರ್ಥವನ್ನು ನೀಡುತ್ತದೆ.

ವಿಶ್ವ ತಂಬಾಕು ರಹಿತ ದಿನದ ಇತಿಹಾಸ:

ಕನಿಷ್ಟ 24 ಗಂಟೆಗಳ ಕಾಲವಾದರೂ ತಂಬಾಕು ಸೇವನೆಯನ್ನು ತಡೆಯಲು ವಿಶ್ವ ಸಂಸ್ಥೆ ಮೇ 1988 ರಂದು ವಿಶ್ವ ತಂಬಾಕು ರಹಿತ ದಿನವನ್ನು ಜಾರಿಗೆ ತರುವ ಮೂಲಕ ಪ್ರತಿವರ್ಷ ಆಚರಣೆಗೆ ಕರೆ ನೀಡಿತು. ಇದೇ ಬೆನ್ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ 2008ರಲ್ಲಿ ತಂಬಾಕಿನ ಕುರಿತಾದ ಜಾಹಿರಾತುಗಳನ್ನು ನಿಷೇಧಿಸಿತು.‌

ತಂಬಾಕು ರಹಿತ ದಿನದ ಪ್ರಾಮುಖ್ಯತೆ:
ಈ ವಾರ್ಷಿಕ ಆಚರಣೆಯು ನಾಗರಿಕರು ತಂಬಾಕು ಬಳಕೆ ಮಾಡುವುದರಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸದ್ಯ ಇರುವ ಕೊರೋನಾ ಪರಿಸ್ಥಿತಿಯಲ್ಲೂ ಇದು ತಂಬಾಕು ಸೇವನೆಯ ತ್ಯಜಿಸುವಿಕೆ ತುಂಬಾ ಅಗತ್ಯವಾಗಿದೆ. ಏಕೆಂದರೆ ಧೂಮಪಾನ ಅಥವಾ ತಂಬಾಕು ಬಳಕೆದಾರರಿಗೆ ಕೊರೊನಾ ಹೆಚ್ಚು ಅಪಾಯವನ್ನುಂಟು ಮಾಡುತ್ತದೆ. ಆರೋಗ್ಯಕರ ಜೀವನ ಮತ್ತು ಭವಿಷ್ಯದ ಪೀಳಿಗೆಗಳನ್ನು ರಕ್ಷಿಸಲು ಈ ದಿನ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.

ಸಿಗರೇಟ್ ಬಿಡಬೇಕೆಂದು ಯೋಚಿಸುವವರು ಹೀಗೆ ಮಾಡಿ:

೧. ಸಿಗರೇಟ್ ಸೇದಬೇಕು ಎಂದು ಅನಿಸಿದಾಗಲೆಲ್ಲಾ ಅದರಿಂದಾಗುವ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ನೆನಪಿಸಿಕೊಳ್ಳಿ. ಸಿಗರೇಟ್ ಸೇದುವುದನ್ನು ತ್ಯಜಿಸುವುದರಿಂದ ಆಗುವ ಲಾಭಗಳನ್ನು ಪರಿಗಣಿಸಿ. ಸಿಗರೇಟ್ ಸೇದುವ ಅಭ್ಯಾಸ ಬಿಡುವುದರಿಂದ ವಾಸನೆ ಹಾಗೂ ರುಚಿ ಗ್ರಹಿಕೆ ಉತ್ತಮವಾಗುತ್ತದೆ. ನಿದ್ರೆಯ ಗುಣಮಟ್ಟ ಅಧಿಕವಾಗುತ್ತದೆ. ಹಾಗೂ ಸಿಗರೇಟ್ ತ್ಯಜಿಸಿದರೆ ಮುಂದಿನ ಒಂದು ವರ್ಷದಷ್ಟು ಕಾಲವೂ ಧೂಮಪಾನ ಮಾಡದೇ ಉಳಿದರೆ ಹೃದಯಾಘಾತದ ಸಮಸ್ಯೆಗಳು ಕಡಿಮೆ ಆಗುತ್ತದೆ. ಹತ್ತು ಹದಿನೈದು ವರ್ಷಗಳಲ್ಲಿ ಆಗಬಹುದಾದ ಕ್ಯಾನ್ಸರ್ ಅಥವಾ ಸ್ಟ್ರೋಕ್​ನಂಥ ಆರೋಗ್ಯದ ಏರುಪೇರು ಕಡಿಮೆ ಆಗುತ್ತದೆ.

೨. ಸಿಗರೇಟ್ ತ್ಯಜಿಸಲು ಮನಸ್ಸು ಮಾಡುವುದಾದರೆ, ಬಾಯಿಯಲ್ಲಿ ಲವಂಗ, ಏಲಕ್ಕಿ ಅಥವಾ ಚೀವಿಂಗ್ ಗಮ್​ಗಳನ್ನು ಇಟ್ಟುಕೊಳ್ಳಬಹುದು. ಅದರಿಂದ ಉಪಯೋಗ ಆಗುತ್ತದೆ.

೩. ಧೂಮಪಾನ ಅಭ್ಯಾಸ ತ್ಯಜಿಸಲು ಪ್ರೇರಣೆ ನೀಡುವಂತಹ ಚಟುವಟಿಕೆಗಳನ್ನು ನಡೆಸಬೇಕು. ಅಂದರೆ, ಪ್ರಾಣಾಯಾಮ ಮಾಡುವುದು, ಉಸಿರಾಟದ ವ್ಯಾಯಾಮಗಳನ್ನು ಮಾಡುವುದು, ದೈಹಿಕ ವ್ಯಾಯಾಮ ಅಥವಾ ಧ್ಯಾನ ಮಾಡುವುದು ಇತ್ಯಾದಿಗಳಿಂದ ಸಿಗರೇಟ್ ಅಭ್ಯಾಸ ದೂರವಾಗಬಹುದು.

೪.ಒಂದುವೇಳೆ ಸಿಗರೇಟ್ ಅಭ್ಯಾಸ ಅತಿಯಾಗಿದ್ದರೆ, ಅಂದರೆ, ಬೆಳಗ್ಗೆ ಎದ್ದ ತಕ್ಷಣ ಸಿಗರೇಟ್ ಸೇದಲೇಬೇಕು ಎಂಬಷ್ಟು ಅಭ್ಯಾಸ ಅಂಟಿಕೊಂಡಿದ್ದರೆ. ಅಥವಾ ಒಂದು ದಿನಕ್ಕೆ 20ಕ್ಕಿಂತ ಹೆಚ್ಚಿನ ಸಿಗರೇಟ್​ಗಳನ್ನು ನೀವು ಸೇವಿಸುವಿರಾದರೆ, ಖಂಡಿತವಾಗಿ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ. ಸಿಗರೇಟ್ ತ್ಯಜಿಸಲು ಸೂಕ್ತ ವೈದ್ಯಕೀಯ ಪರಿಹಾರ ಕಂಡುಕೊಳ್ಳಬೇಕಾಗಬಹುದು.

Latest News

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,

ದೇಶ-ವಿದೇಶ

“ನನ್ನ ಮಕ್ಕಳಿಗೆ ಆಹಾರ ನೀಡಬೇಕೇ? ಅಥವಾ ಅವರನ್ನು ಕೊಲ್ಲಬೇಕೇ?”: ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ಆಕ್ರೋಶ!

ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

ಮಾಹಿತಿ

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.

ರಾಜಕೀಯ

ನಿತೀಶ್‌ ಕುಮಾರ್‌ ಪ್ರಧಾನಿಯಾಗುವ ಭ್ರಮೆಯಲ್ಲಿದ್ದಾರೆ, ಅದಕ್ಕಾಗಿ ವಿಪಕ್ಷಗಳ ಕೂಟ ಸೇರಿದ್ದಾರೆ : ಬಿಜೆಪಿ

ಇದು ‘ಆಯಾ ರಾಮ್, ಗಯಾ ರಾಮ್ʼ ಕಾಯಿಲೆಗೆ ಉದಾಹರಣೆ. ಹಡಗು ಜಿಗಿದು ದಾಖಲೆ ನಿರ್ಮಿಸಿದ್ದಾರೆ. ಅವರು ಉನ್ನತ ಕುರ್ಚಿಗೆ ಹಾತೊರೆಯುತ್ತಿದ್ದಾರೆ.