ಜಗತ್ತನ್ನೇ ನಡುಗಿಸಿದ ಅತ್ಯಂತ ಭೀಕರ ಸುನಾಮಿಗಳಲ್ಲಿ ಉಂಟಾದ ಅಲೆಗಳ ಎತ್ತರ ಕೇಳಿದರೆ ನೀವು ಅಚ್ಚರಿ ಪಡ್ತೀರಾ!

ಪ್ರಾಕೃತಿಕ ವಿಕೋಪಗಳಲ್ಲಿ(Disaster) ಕೆಲವು ತೀವ್ರ ಅನಾಹುತಗಳನ್ನು ಉಂಟುಮಾಡುತ್ತವೆ. ಅಂತಹ ಅಪಾಯಕಾರಿ ವಿಕೋಪಗಳಲ್ಲಿ ಸುನಾಮಿಯೂ(Tsunami) ಒಂದು.

ಸುನಾಮಿ ಎಂಬುದು ಸಮುದ್ರ(Sea) ಅಥವಾ ಸಾಗರದಲ್ಲಿ ಉಂಟಾಗುವ ಅಲ್ಲೋಲ ಕಲ್ಲೋಲ. ಅಪರೂಪದ ಸಂದರ್ಭಗಳಲ್ಲಿ ಮಾತ್ರ ಉಂಟಾಗುವ ಸುನಾಮಿ(deadliest Tsunami), ಅಂತಹ ಎಲ್ಲ ಸಂದರ್ಭಗಳಲ್ಲಿಯೂ ಭಾರೀ ಹಾನಿಯನ್ನೇ ಉಂಟು ಮಾಡುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ 2004 ಡಿಸೆಂಬರ್‌ 26 ರಂದು.

ಸುಮಾತ್ರಾ ದ್ವೀಪದ ಬಳಿ ಉಂಟಾಗಿ ಭಾರತದ ಕರಾವಳಿಯಲ್ಲೂ ಅನಾಹುತ ಸೃಷ್ಟಿಸಿದ್ದ ಸುನಾಮಿ. ಸುನಾಮಿ (deadliest Tsunami)ಹೇಗೆ ಉಂಟಾಗುತ್ತದೆ ಎಂದರೆ, ಸಾಗರ, ಸಮುದ್ರದಲ್ಲಿ ಅಥವಾ ಸಮುದ್ರದ ಹತ್ತಿರದ ಪ್ರದೇಶದಲ್ಲಿ ಭೂಕಂಪನದ ಪರಿಣಾಮವಾಗಿ ಸುನಾಮಿ ಸೃಷ್ಟಿಯಾಗುತ್ತದೆ.

ಕೆರೆಗೆ ಕಲ್ಲು ಎಸೆದಾಗ ಅದು ಬಿದ್ದ ಸ್ಥಳದಿಂದ ಸುತ್ತಲೂ ವೃತ್ತಾಕಾರವಾದ ಅಲೆಗಳು ಏಳುತ್ತವೆಯೋ, ಹಾಗೆಯೇ ಭೂಕಂಪನದ ಕೇಂದ್ರ ಬಿಂದುವಿನಿಂದ ಸುನಾಮಿಯ ಬೃಹತ್ ಗಾತ್ರದ ಅಲೆಗಳು ಉಂಟಾಗುತ್ತವೆ.

ಸಾಗರದೊಳಗೆ ಉಂಟಾಗುವ ಭೂಕುಸಿತ, ಭೂಕಂಪನದಿಂದ ಸೃಷ್ಟಿಯಾಗುವ ಅಗಾಧ ಗಾತ್ರದ ದೈತ್ಯ ಅಲೆಗಳ ಸಮೂಹವನ್ನು ಸುನಾಮಿ ಎಂದು ಕರೆಯುತ್ತಾರೆ. ಸಮುದ್ರದೊಳಗೆ ಜ್ವಾಲಾಮುಖೀ ಸ್ಫೋಟ, ಶಿಲಾಪದರಗಳ ಕುಸಿತ ಮೊದಲಾದವುಗಳು ಸುನಾಮಿಯನ್ನು ಉಂಟು ಮಾಡುತ್ತವೆ.

ಸಮುದ್ರದ ತೀರದಲ್ಲಿ ಹಲವು ಕಿ.ಮೀಗಳಷ್ಟು ದೂರದ ಭೂಪ್ರದೇಶವನ್ನು ಸಂಪೂರ್ಣವಾಗಿ ನಾಶ ಮಾಡುವಷ್ಟು ರಾಕ್ಷಸ ಶಕ್ತಿಯನ್ನು ಸುನಾಮಿ ಹೊಂದಿರುತ್ತದೆ. ಹೌದು, ಇಡೀ ಜಗತ್ತನ್ನೇ ನಡುಗಿಸಿದ ಇಂತಹ ಐದು ಭಯಾನಕ ಸುನಾಮಿಗಳು ಯಾವುವು ಗೊತ್ತಾ? ಕೆಳೆಗೆ ತಿಳಿಸಲಾಗಿದೆ ಮುಂದೆ ಓದಿ.

ಬಾಕ್ಸಿಂಗ್‌ ಡೇ ಸುನಾಮಿ (ಇಂಡೊನೇಷ್ಯಾ-2004ರ ಡಿ. 26) : ಇದು ನಮ್ಮ ಜೀವಿತ ಕಾಲದಲ್ಲಿ ಉಂಟಾದ ಅತಿದೊಡ್ಡ(deadliest)ಸುನಾಮಿ. ಹಿಂದೂ ಮಹಾಸಾಗರದಲ್ಲಿ ಇಂಡೊನೇಶ್ಯಾ ದ್ವೀಪಸಮೂಹದ ಸುಮಾತ್ರಾ ಬಳಿ ಉಂಟಾದ ಭೂಕಂಪದಿಂದ ಉಂಟಾಗಿತ್ತು. ರಿಕ್ಟರ್‌ ಮಾಪಕದಲ್ಲಿ 9.1 ತೀವ್ರತೆ ಹೊಂದಿದ್ದ ಭೂಕಂಪ 30 ಅಡಿಗಳಷ್ಟು ಎತ್ತರದ ಅಲೆಗಳನ್ನು ಸೃಷ್ಟಿಸಿತ್ತು. https://vijayatimes.com/prakash-raj-stands-for-uddhav-thackrey/
ಭಾರತವೂ ಸೇರಿದಂತೆ ಒಟ್ಟು 15 ದೇಶಗಳ 2,30,000 ಜನರನ್ನು ಆಹುತಿ ತೆಗೆದುಕೊಂಡಿತ್ತು. ದೂರದ ಆಫ್ರಿಕಾ ಖಂಡದ ತೀರಕ್ಕೂ ಈ ಸುನಾಮಿ ಅಲೆಗಳು ಮುಟ್ಟಿದ್ದವು. ಇದರಿಂದ 10 ಬಿಲಿಯನ್‌ ಡಾಲರ್‌ ನಷ್ಟವನ್ನು ಅಂದಾಜಿಸಲಾಗಿದೆ.
ನಾರ್ತ್‌ ಪೆಸಿಫಿಕ್‌ ಸಾಗರ ತೀರ, (ಜಪಾನ್‌- 2011ರ ಮಾ. 11): ಜಪಾನ್‌ನ ಪೂರ್ವ ಕರಾವಳಿಯಲ್ಲಿ 24.4 ಕಿ.ಮೀ. ಆಳದಲ್ಲಿ ಉಂಟಾದ, 9 ರಷ್ಟು ತೀವ್ರತೆಯ ಭೂಕಂಪದಿಂದ ಸೃಷ್ಟಿಯಾಗಿತ್ತು. ಗಂಟೆಗೆ 800 ಕಿ.ಮೀ. ವೇಗದ ಸುನಾಮಿ(Tsunami) ಅಲೆಗಳು 18,000 ಜನರನ್ನು ಬಲಿತೆಗೆದುಕೊಂಡಿದ್ದವು. ಇದರಿಂದ 235 ಬಿಲಿಯನ್‌ ಡಾಲರ್‌ನಷ್ಟು ಅಂದಾಜು ಮಾಡಲಾಗಿದೆ.

ಲಿಸನ್‌ (ಪೋರ್ಚುಗಲ್‌- 1755ರ ನ.1) ಪೋರ್ಚುಗಲ್‌ನ ಪೂರ್ವ ಕರಾವಳಿಯಲ್ಲಿ 8.5 ತೀವ್ರತೆಯ ಭೂಕಂಪದಿಂದ ಇದು ಸಂಭವಿಸಿತ್ತು. ಅಲೆಗಳು 30 ಮೀ. ಎತ್ತರವನ್ನು ಹೊಂದಿದ್ದವು. ಸ್ಪೇಯ್ನ್, ಪೋರ್ಚುಗಲ್‌ ಮತ್ತು ಮೊರಕ್ಕೊ ದೇಶಗಳ 60 ಸಾವಿರ ಜನರನ್ನು ಇದು ಬಲಿ ತೆಗೆದುಕೊಂಡಿತು.

ಕ್ರಾಕಟುವಾ (ಇಂಡೊನೇಷ್ಯಾ- 1883ರ ಅ.27) 37 ಮೀ. ಎತ್ತರಕ್ಕೆ ಅಪ್ಪಳಿಸಿದ ಈ ಸುನಾಮಿ(deadliest Tsunami) ಅಲೆಗಳು ಭಾರತ ಸಹಿತ ವಿವಿಧ ದೇಶಗಳ ಒಟ್ಟು 40,000 ಜನರನ್ನು ಬಲಿತೆಗೆದುಕೊಂಡಿತ್ತು.
ಸನ್ರಿಕು (ಜಪಾನ್‌, 1896ರ ಜೂ. 15) 7.6 ತೀವ್ರತೆಯ ಭೂಕಂಪನದಿಂದ ಉಂಟಾದ ಈ ಸುನಾಮಿ(deadliest Tsunami) ಅಲೆಗಳು 38.2 ಮೀ. ಎತ್ತರದಲ್ಲಿದ್ದವು. ಇದರಿಂದ 11,000 ಮನೆಗಳು ನಾಶವಾಗಿ 22,000 ಸಾವಿರ ಜನರು ಮೃತಪಟ್ಟರು. ಈ ಅಲೆಗಳು ಚೀನಾದ ಪೂರ್ವ ಕರಾವಳಿಗೂ ನುಗ್ಗಿ 4,000 ಜನರನ್ನು ಬಲಿ ತೆಗೆದುಕೊಂಡಿತ್ತು.

Latest News

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,

ದೇಶ-ವಿದೇಶ

“ನನ್ನ ಮಕ್ಕಳಿಗೆ ಆಹಾರ ನೀಡಬೇಕೇ? ಅಥವಾ ಅವರನ್ನು ಕೊಲ್ಲಬೇಕೇ?”: ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ಆಕ್ರೋಶ!

ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

ಮಾಹಿತಿ

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.