ಕ್ಷೀಣಿಸುತ್ತಿರುವ ರಣಹದ್ದುಗಳ(Vultures) ಸಂಖ್ಯೆಯನ್ನು ಪರಿಶೀಲಿಸುವ ಪ್ರಮುಖ ಹೆಜ್ಜೆಯಲ್ಲಿ, ಉತ್ತರ ಪ್ರದೇಶ(UttarPradesh) ಸರ್ಕಾರವು ಗೋರಖ್‌ಪುರದಲ್ಲಿ(Ghorakpur) ವಿಶ್ವದ ಮೊದಲ ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರವನ್ನು(Vulture Conservation and Breeding Centre) ನಿರ್ಮಿಸುತ್ತಿದೆ. ಈ ಒಂದು ಯೋಜನೆಯನ್ನು ಸೆಪ್ಟೆಂಬರ್ 3 ರಂದು ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್(Yogi Adityanath) ಉದ್ಘಾಟಿಸಲಿದ್ದಾರೆ.

ಉತ್ತರ ಪ್ರದೇಶದ ಗೋರಖ್‌ಪುರ ಅರಣ್ಯ ವಿಭಾಗದಲ್ಲಿರುವ ಮಹಾರಾಜ್‌ಗಂಜ್‌ನ ಫರೆಂಡಾದಲ್ಲಿ ನಿರ್ಮಿಸಲಾಗುತ್ತಿರುವ ಕೇಂದ್ರದ ನಿರ್ಮಾಣಕ್ಕೆ 1.06 ಕೋಟಿ ರೂಪಾಯಿ ಹೆಚ್ಚುವರಿ ಬಜೆಟ್ ಬಿಡುಗಡೆಯಾಗಿದೆ. ಈ ಸಂರಕ್ಷಣಾ ಕೇಂದ್ರವು ಗೋರಖ್‌ಪುರ ನಗರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿಂದೆ 2021 ರಲ್ಲಿ ರೆಡ್ ಹೆಡೆಡ್ ರಣಹದ್ದು ಸಂರಕ್ಷಣಾ ಕೇಂದ್ರ ಯೋಜನೆಗೆ 80 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು.
ಉದ್ಘಾಟನೆಯು ಸೆಪ್ಟೆಂಬರ್ 3 ರಂದು ನಡೆಯಲಿದೆ, ಇದು ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನವನ್ನು ಸಹ ಗುರುತಿಸಲಿದೆ. ಇದರ ನಿರ್ಮಾಣಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತುಂಡು ಭೂಮಿ ಮಂಜೂರು ಮಾಡಿದ್ದರು. ಯೋಗಿ ಆದಿತ್ಯನಾಥ್ ಸರ್ಕಾರವು ಈ ಹಿಂದೆ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯೊಂದಿಗೆ 15 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತು, ಅದರ ಅಡಿಯಲ್ಲಿ ಭೂಮಿಯನ್ನು ಹಂಚಲಾಯಿತು.

ಸದ್ಯದ ವರದಿಯ ಅನುಸಾರ, ಉತ್ತರ ಪ್ರದೇಶ ಸರ್ಕಾರವು ಗೋರಖ್‌ಪುರದಲ್ಲಿ ವಿಶ್ವದ ಮೊದಲ ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರವನ್ನು ನಿರ್ಮಿಸುತ್ತಿದ್ದು, ಇದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇದೇ 2022ರ ಸೆಪ್ಟೆಂಬರ್ 3 ರಂದು ಉದ್ಘಾಟಿಸಲಿದ್ದಾರೆ.