ಜಗತ್ತಿನ ಅತ್ಯಂತ ಎತ್ತರದ ವ್ಯಕ್ತಿ ಮತ್ತು ಅತ್ಯಂತ ಕುಬ್ಜ ಮಹಿಳೆ ಪರಸ್ಪರ ಮುಖಾಮುಖಿಯಾದರೆ ಹೇಗಿರಬಹುದು? ಹೌದು, ಅದೊಂದು ಅವಿಸ್ಮರಣೀಯ ಕ್ಷಣವಾಗುವುದರಲ್ಲಿ ಸಂದೇಹವೇ ಇಲ್ಲ. ಹೌದು, ಈ ಇಬ್ಬರು ನಿಂತು, ಕೂತು ಮಾತನಾಡಿದ ಕ್ಷಣಕ್ಕೆ ಸಾಕ್ಷಿಯಾಗಿದ್ದು ವಿಶ್ವವಿಖ್ಯಾತ ಈಜಿಪ್ಟ್(Egypt) ಪಿರಾಮಿಡ್(Pyramid).
ಇದನ್ನೂ ಓದಿ : https://vijayatimes.com/tumkuru-road-accident-kills-9/
ಹೌದು, ಟರ್ಕಿಯ ಸುಲ್ತಾನ್ ಕೋಸೆನ್‌ನ ಎತ್ತರ 8 ಅಡಿ, 9 ಇಂಚು, ಭಾರತದ ಜ್ಯೋತಿ ಆಮ್ಗೆ ಇರುವುದು 2 ಅಡಿ, 0.6 ಇಂಚು. ಇವರಿಬ್ಬರು ಜಗತ್ತಿನ ಅತೀ ಎತ್ತರ ಮತ್ತು ಅತ್ಯಂತ ಕುಬ್ಜ ವ್ಯಕ್ತಿಗಳು ಎಂದು ಗಿನ್ನೆಸ್(Guiness) ದಾಖಲೆಯೂ ಇದೆ. ಹೀಗೆ, ಖ್ಯಾತರಾದ ಇವರಿಬ್ಬರು ಮುಖಾಮುಖಿಯಾಗಿದ್ದು ಈಜಿಪ್ಟ್‌ನ ಗೀಜಾ ನಗರದಲ್ಲಿ ಹರಿಯುವ ನೈಲ್ ನದಿಯ(Nile River) ಪಶ್ಚಿಮ ದಂಡೆಯಲ್ಲಿ.

ಇವರಿಬ್ಬರ ಎತ್ತರದಲ್ಲಿ ದೊಡ್ಡ ವ್ಯತ್ಯಾಸವಿದ್ದರೂ, ಫೋಟೊ ಶೂಟ್ ತುಂಬ ಸುಂದರವಾಗಿ ಬಂದಿದೆ. ಪಿರಮಿಡ್‌ನ ಬಳಿಯಲ್ಲಿ ಕಲ್ಲು ಬಂಡೆಗಳ ಪಕ್ಕದಲ್ಲಿ ನಿಂತು ಕುಳಿತು ಇವರು ನೀಡಿದ ಭಂಗಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿವೆ. ಅಂದ ಹಾಗೆ, ಇವರಿಬ್ಬರನ್ನು ಮುಖಾಮುಖಿ ಮಾಡಿಸಿದ ಕೀರ್ತಿ ಸಲ್ಲುವುದು ಈಜಿಪ್ಟಿನ ಪ್ರವಾಸೋದ್ಯಮ ಉತ್ತೇಜನ ಮಂಡಳಿಗೆ.
ದೇಶದ ಪ್ರವಾಸೋದ್ಯಮ ಪ್ರಚಾರಕ್ಕೆ ಇವರನ್ನು ಬಳಸಿಕೊಳ್ಳಲಾಗಿದೆ. 36 ವರ್ಷದ ಸುಲ್ತಾನ್ ಕೋಸೆನ್ ಪಿಟ್ಯುಟರಿ ಗ್ರಂಥಿಯ ಸಮಸ್ಯೆಯಿಂದ ಇಷ್ಟು ಉದ್ದಕ್ಕೆ ಬೆಳೆದಿದ್ದಾರೆ. 2009 ರಲ್ಲಿ ಸುಲ್ತಾನ್ ರನ್ನು ವಿಶ್ವದ ಅತೀ ಎತ್ತರದ ವ್ಯಕ್ತಿ ಎಂದು ಘೋಷಿಸಲಾಗಿತ್ತು. ಜಗತ್ತಿನಲ್ಲಿ 8 ಅಡಿಗಿಂತಲೂ ಎತ್ತರ ಬೆಳೆದವರು ಕೇವಲ 10 ಮಂದಿ ಮಾತ್ರ ಎನ್ನುವುದು ಗಮನಾರ್ಹ.
https://fb.watch/f6YP8fRmCc/ ಮಳೆ ಅವಾಂತರ
ಹಾಗೇ, ಮಹಾರಾಷ್ಟ್ರದ ನಾಗಪುರದ ಜ್ಯೋತಿ ಆಮ್ಗೆ, ಪ್ರಸ್ತುತ ಕೇವಲ ಎರಡು ವರ್ಷದ ಮಗುವಿನಷ್ಟು ಉದ್ದವಿದ್ದಾರೆ. ಅಕೋಂಡ್ರೊಪ್ಲಾಸಿಯಾ ಎಂಬ ಕುಬ್ಜತನ ರೋಗದಿಂದ ಈಕೆ ಹೀಗಿದ್ದಾರೆ. 2011 ರಲ್ಲಿ ಎಂದರೆ ಜ್ಯೋತಿ ಅವರು ತಮ್ಮ 18ನೇ ವಯಸ್ಸಿನಲ್ಲಿ ಗಿನ್ನೆಸ್ ದಾಖಲೆ ಸೇರಿದ್ದಾರೆ. ಅದೇ ರೀತಿ, ಬಿಗ್ ಬಾಸ್, ಅಮೆರಿಕನ್ ಹಾರರ್ ಸ್ಟೋರಿ ಮೊದಲಾದ ಶೋಗಳಲ್ಲಿ ಕೂಡ ಜ್ಯೋತಿ ಭಾಗವಹಿಸಿದ್ದಾರೆ.
- ಪವಿತ್ರ