Visit Channel

‘ಕಡಲಮುತ್ತು’ ಚಿತ್ರದ ಪೂಜೆ

WhatsApp Image 2021-07-29 at 3.56.55 PM

ದೇವರಾಜ್ ಕುಮಾರ ಫಿಲಂಸ್ ಲಾಂಛನದಲ್ಲಿ ಕಡಲಮುತ್ತು ಎಂಬ ಚಿತ್ರ ಅಕ್ಟೋಬರ್ ನಲ್ಲಿ ಆರಂಭವಾಗಲಿದೆ.

ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ನೂತನ ಚಿತ್ರದ ನಿರ್ದೇಶನ ಹಾಗೂ ನಾಯಕನ ಜವಾಬ್ದಾರಿಯನ್ನು ದೇವರಾಜ್ ಕುಮಾರ್ ಮಾಡಲಿದ್ದಾರೆ ಈ ಹಿಂದೆ ದೇವರಾಜ ಕುಮಾರ್ ಅವರು ಡೇಂಜರ್ ಜೋನ್ ಮತ್ತು ನಿಶಬ್ದ 2 ಹಾಗೂ ಅನುಷ್ಕಾ ನಿರ್ದೇಶನ ಮಾಡಿದ್ದು ಹಾಗೂ ಇತ್ತೀಚೆಗೆ ತಾಜ್ ಮಹಲ್ -2 ನಿರ್ದೇಶನದೊಂದಿಗೆ, ನಾಯಕನಟನಾಗೂ ಅಭಿನಯಿಸಿದ್ದಾರೆ. ಕಡಲಮುತ್ತು ಚಿತ್ರದಲ್ಲೂ ನಾಯಕನಾಗಿ ಅಭಿನಯಿಸುತ್ತಿರುವ ದೇವರಾಜ್ ಕುಮಾರ್ ಅವರು‌ ನಿರ್ದೇಶನವನ್ನು ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನೂ ದೇವರಾಜ್ ಕುಮಾರ್ ಅವರೇ ಬರೆದಿದ್ದಾರೆ.

ದೇವರಾಜ್ ಕುಮಾರ್ ಅವರಿಗೆ ಹೊಸ ನಾಯಕಿಯಾಗಿ ನಟಿಸಲು‌ ನೂತನ ಪ್ರತಿಭೆ ಅನ್ವೇಷಣೆ ನಡೆಸಲಾಗುತ್ತಿದೆ. ಈ ಚಿತ್ರದ ಕಥಾವಸ್ತು ವಿಶೇಷವಾಗಿದ್ದು ಸಂಪೂರ್ಣ ಚಿತ್ರೀಕರಣ ಸಮುದ್ರ ದಂಡೆಯಲ್ಲಿ ನಡೆಯಲಿದೆ. ವೀನಸ್ ಮೂರ್ತಿ ಛಾಯಾಗ್ರಹಣ, ವಿಕ್ರಂ ಸೆಲ್ವ ಸಂಗೀತ ನಿರ್ದೇಶನ, ರವೀಂದ್ರ ಮುದ್ದಿ ಸಾಹಿತ್ಯ, ಚಂದ್ರು ಬಂಡೆ ಸಾಹಸ ನಿರ್ದೇಶನ, ವಿಜಯ್ ಸಂಕಲನ ಹಾಗೂ ಬಿ.ಧನಂಜಯ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. 45 ದಿನಗಳ ಕಾಲ ಮಂಗಳೂರು ಕುಂದಾಪುರ, ಉಡುಪಿ, ಕಾರವಾರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.