WWF ನಲ್ಲಿ ತನ್ನದೇ ಆದ ಹೆಸರನ್ನು ಗಳಿಸಿಕೊಂಡಿರುವ ಭಾರತದ ಹಮ್ಮೆಯ WWF ಕುಸ್ತಿ ಪಟು ದಿ ಗ್ರೇಟ್ ಖಲಿ ಎಂದು ಖ್ಯಾತಿ ಪಡೆದಿರುವ ಪಂಜಾಬ್ ಮೂಲದ ಕುಸ್ತಿಪಟು ದಲೀಪ್ ಸಿಂಗ್ ರಾಣ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನವದೆಹಲಿಯಲ್ಲಿರುವ ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ
ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಜಿತೇಂದ್ರ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಮುಖಂಡರ ಸಮ್ಮುಖದಲ್ಲಿ ದಲೀಪ್ ಸಿಂಗ್ ರಾಣಾರನ್ನು ಶಾಲು ಹೊದಿಸಿ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು.

ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೂ ಮುಂಚಿತವಾಗಿ ಅವರು ಬಿಜೆಪಿಗೆ ಸೇರ್ಪಡೆಗೊಳುತ್ತಿರುವುದು ಭಾರೀ ಕುತೂಹಲ ಕೆರಳಿಸಿದೆ. ಇಂದು ಮಧ್ಯಾಹ, ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 49 ವರ್ಷದ ಖಲಿ ಅವರು ಮೂಲತ ಹಿಮಾಚಲ ಪ್ರದೇಶದವರಾಗಿದ್ದು, 22 ವರ್ಷಗಳ ಹಿಂದೆ ಕುಸ್ತಿಗೆ ಪದಾರ್ಪಣೆ ಮಾಡಿದರು . ಖಲಿ WWಯಲ್ಲಿ ವೃತ್ತಿಯನ್ನು ಆರಂಭಿಸುವ ಮುನ್ನ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರ ಬಾಡಿಗಾರ್ಡ್ ಆಗಿದ್ದರು. ಆದರೆ WWEಯಲ್ಲಿ ಆರಂಭಿಸಿ ನಂತರ ಖಲಿ ಅವರು ಚಾಂಪಿಯನ್ ಪಟ್ಟಗಳಿಸಿದರು.

ಅಲ್ಲದೆ ಹಾಲಿವುಡ್ನ ನಾಲ್ಕು ಸಿನಿಮಾ ಹಾಗೂ ಬಾಲಿವುಡ್‌ನ ಎರಡು ಸಿನಿಮಾಗಳಲ್ಲಿ ಖಲಿ ಅಭಿನಯಿಸಿದ್ದಾರೆ. ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರಿದಕ್ಕೆ ನನಗೆ ಖುಷಿಯಾಗಿದೆ. ಪ್ರಧಾನಿ ಮೋದಿಯವರು ದೇಶಕಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಕೆಲಸಗಳೇ ಅವರನ್ನು ಮತ್ತೆ ಪ್ರಧಾನಿಯಾನ್ನಾಗಿ ಮಾಡಲಿದೆ. ರಾಷ್ಟ್ರದ ಅಭಿವೃದ್ಧಿಗಾಗಿ ಅವರ ಆಡಳಿತದ ಭಾಗವಾಗವಾಗಬೇಕೆಂದು ಆಸೆ ಇಟ್ಟುಕೊಂಡಿದ್ದೆ, ಹಾಗಾಗಿ ಬಿಜೆಪಿಯ ರಾಷ್ಟ್ರೀಯ ನೀತಿಯಿಂದ ಪ್ರಭಾವಿತನಾಗಿ ಪಕ್ಷ ಸೇರಿದ್ದೇನೆ ಎಂದು ಹೇಳಿದ್ದಾರೆ.