Visit Channel

ನಾವು ಪ್ರತಿದಿನ ಬಳಸುವ WWW(ವರ್ಲ್ಡ್ ವೈಡ್ ವೆಬ್) ಕಂಡುಹಿಡಿದದ್ದುಇವರೇ ನೋಡಿ

Tim Berners Lee

ಇಂದು ಇಂಟರ್ನೆಟ್(Internet) ಬಳಸಲು ಅತೀ ಮುಖ್ಯವಾದ WWW ಅನ್ನು ಕಂಡು ಹಿಡಿದವರು ಬ್ರಿಟಿಷ್‌ ವಿಜ್ಞಾನಿ(British Scientist) ಟಿಮ್‌ ಬರ್ನರ್ಸ್‌–ಲೀ(Tim Berners Lee) ಅವರು. 1989ರ ಮಾರ್ಚ್‌ 12 ರಂದು ಟಿಮ್ ಅವರು ಅನ್ವೇಷಿಸಿದ WWW ಇಡೀ ಜಗತ್ತಿನ ದಿಕ್ಕನ್ನೇ ಬದಲಿಸಿತು. ಇಂಟರ್ನೆಟ್ ಅನ್ನು ಪ್ರವೇಶಿಸಲು ಸುಲಭವಾದ ಮಾರ್ಗವನ್ನು ಒದಗಿಸಿದ್ದ ಈ ಆವಿಷ್ಕಾರವು, ಆಧುನಿಕ ವ್ಯವಹಾರ ಮತ್ತು ಸಂವಹನಗಳ ಮೇಲೆ ಭಾರಿ ಪ್ರಭಾವ ಬೀರಿದೆ. ವರ್ಲ್ಡ್ ವೈಡ್ ವೆಬ್ ಪ್ರಪಂಚದಾದ್ಯಂತದ ಕಂಪ್ಯೂಟರ್(Computer) ಬಳಕೆದಾರರನ್ನು ಪರಸ್ಪರ ಸಂಪರ್ಕಿಸುವ ಸಾಮರ್ಥ್ಯವನ್ನು ಹೆಚ್ಚಿಸಿದೆ.

Http

ಮಾಹಿತಿ ಪಡೆಯುವುದರಿಂದ ಕೊಡುವುವವರೆಗೂ, ಸಂಗ್ರಹದಿಂದ ರವಾನೆಯವರೆಗೂ ಈ 33 ವರ್ಷಗಳಲ್ಲಿ ವರ್ಲ್ಡ್ ವೈಡ್ ವೆಬ್(World Wide Web) ಅತ್ಯಂತ ವೇಗವಾಗಿ ಬದಲಾವಣೆ ಕಂಡಿದೆ. 1976 ರಲ್ಲಿ ಕ್ವೀನ್ಸ್ ಕಾಲೇಜಿನಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದ ನಂತರ, ಬರ್ನರ್ಸ್-ಲೀ ಅವರು ಡಾರ್ಸೆಟ್‌ನಲ್ಲಿ ಪ್ಲೆಸ್ಸೆ ಟೆಲಿಕಮ್ಯುನಿಕೇಶನ್ಸ್, ಲಿಮಿಟೆಡ್‌ನಲ್ಲಿ ತಮ್ಮ ಮೊದಲ ಕೆಲಸವನ್ನು ಪಡೆದರು. 1980 ರಲ್ಲಿ, ಡಾರ್ಸೆಟ್‌ನಲ್ಲಿರುವ DG Nast Ltd ನಲ್ಲಿ ಕೆಲಸ ಮಾಡಿದ ನಂತರ, ಅವರು ಫ್ರೆಂಚ್-ಸ್ವಿಸ್ ಗಡಿಯಲ್ಲಿರುವ CERN ಎಂಬ ಯುರೋಪಿಯನ್ ಕಣ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಸ್ವತಂತ್ರ ಸಲಹೆಗಾರರಾಗಿ ಆರು ತಿಂಗಳ ಕಾಲ ಸೇವೆ ಸಲ್ಲಿಸಿದರು.

ಲ್ಯಾಬ್‌ನ ಬೃಹತ್ ಮತ್ತು ಗೊಂದಲಮಯ ಮಾಹಿತಿ ವ್ಯವಸ್ಥೆಯನ್ನು ಆರು ತಿಂಗಳಲ್ಲಿ ಕರಗತ ಮಾಡಿಕೊಳ್ಳಬೇಕು ಎಂದು ಅವರು ಅರಿತುಕೊಂಡಾಗ, ಅವರು ಎನ್‌ಕ್ವೈರ್ ಎಂಬ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ರಚಿಸಿದರು. ಡಾಕ್ಯುಮೆಂಟ್‌ನಲ್ಲಿ ಪದಗಳನ್ನು ಹಾಕಲು ಅದು ಅವರಿಗೆ ಅವಕಾಶ ಮಾಡಿಕೊಟ್ಟಿತು, ಅದನ್ನು ಕ್ಲಿಕ್ ಮಾಡಿದಾಗ, ಸಂಪೂರ್ಣ ವಿವರಣೆಯೊಂದಿಗೆ ಬಳಕೆದಾರರನ್ನು ಇತರ ದಾಖಲೆಗಳಿಗೆ ಕಳುಹಿಸುತ್ತದೆ. ಬರ್ನರ್ಸ್-ಲೀ ಅವರ ಸ್ಮರಣೆಗೆ ಸಹಾಯ ಮಾಡಲು ಬಳಸಿದ ಈ ಸಾಧನವನ್ನು ಈಗ “ಹೈಪರ್ಟೆಕ್ಸ್ಟ್” ಎಂದು ಕರೆಯಲಾಗುತ್ತದೆ.

Tim


1990 ರಲ್ಲಿ ಸ್ವಿಡ್ಜರ್ಲೆಂಡ್ ನ CERN ನಲ್ಲಿ ಉದ್ಯೋಗಿಯಾಗಿದ್ದಾಗ ಟಿಮ್‌ ಬರ್ನರ್ಸ್‌ ಅವರು ಮೊದಲ ವೆಬ್‌ ಬ್ರೌಸರ್‌ ರೂಪಿಸಿದರು. ಕೆಲ ವರದಿಗಳ ಪ್ರಕಾರ, ಅಭಿವೃದ್ಧಿ ಪಡಿಸಲಾದ ಬ್ರೌಸರ್‌ CERN ಸಂಸ್ಥೆಯಿಂದ ಹೊರ ಬಂದದ್ದು 1991ರಲ್ಲಿ. ಪ್ರಾಥಮಿಕವಾಗಿ ಸಂಶೋಧನಾ ಸಂಸ್ಥೆಗಳಿಗೆ ಹಾಗೂ ನಂತರದಲ್ಲಿ 1991ರ ಆಗಸ್ಟ್‌ ಹೊತ್ತಿಗೆ ಜನ ಸಾಮಾನ್ಯರ ಬಳಕೆಗೆ ವೆಬ್‌ ಬ್ರೌಸರ್‌ ಅನ್ನು ಒದಗಿಸಲಾಯಿತು. ಆ ನಂತರ ಜಗತ್ತಿನಾದ್ಯಂತ ಇಂಟರ್ನೆಟ್‌ ಬಳಕೆಗೆ WWW ಅತ್ಯಗತ್ಯವಾದ ಸಾಧನವಾಗಿ ರೂಪುಗೊಂಡಿತು. ಜನರ ನಡುವಿನ ಸಂಪರ್ಕ, ಸಂಭಾಷಣೆಗೆ ಮೂಲ ವೇದಿಕೆಯಾಯಿತು.


ಯಾವುದೇ ದಾಖಲೆಗಳು, ಮಾಹಿತಿಗಳನ್ನು ಅಂತರ್ಜಾಲ ಸಂಪರ್ಕ ಬಳಸಿ ಹುಡುಕಲು WWW ಬೆನ್ನೆಲುಬಿನಂತಾಯಿತು. ವೆಬ್‌ ಬ್ರೌಸರ್‌ಗಳಲ್ಲಿ WWW ಎಂದು ಟೈಪ್ವ ಮಾಡಿದ್ರೆ, ನಿರ್ದಿಷ್ಟ ಸಂಪನ್ಮೂಲವನ್ನು ಹುಡುಕುವುದು ಪ್ರಾರಂಭವಾಯಿತು.
ತಮ್ಮ ಅನ್ವೇಷಣೆಯನ್ನು ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುವ ಅನೇಕ ವಿಜ್ಞಾನಿಗಳಿದ್ದಾರೆ. ಕಂಪ್ಯೂಟರ್ ವಿಜ್ಞಾನಿಗಳಿಂತೂ ಇಂತಹ ಅನ್ವೇಷನೆಗಳನ್ನು ಬಳಸಿ ಬಹಳಷ್ಟು ಶ್ರೀಮಂತರಾಗುತ್ತಾರೆ. ಆದರೆ ಬರ್ನರ್ಸ್-ಲೀ ಅವರು ತಮ್ಮ ಆವಿಷ್ಕಾರವನ್ನು ನಗದು ಮಾಡಲು ನಿರಾಕರಿಸಿದರು,

Berners lee

ಉಚಿತವಾಗಿಯೇ www ಅನ್ನು ಜನರ ಬಳಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅವರ ಈ ನಿಸ್ವಾರ್ಥ ಸೇವೆಯಿಂದ ಬರ್ನರ್ಸ್-ಲೀ ಅವರು ಇತರ ವಿಜ್ಞಾನಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.

Latest News

Russia
ದೇಶ-ವಿದೇಶ

ಜನಸಂಖ್ಯೆ ಹೆಚ್ಚಳಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ರೆ 13 ಲಕ್ಷ ಬಹುಮಾನ : ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

ರಷ್ಯಾದ ರಾಜಕೀಯ(Russia Politics) ಮತ್ತು ಭದ್ರತಾ ತಜ್ಞ ಡಾ ಜೆನ್ನಿ ಮ್ಯಾಥರ್ಸ್, ಟೈಮ್ಸ್ ರೇಡಿಯೊದಲ್ಲಿ ಈ ಕುರಿತು ಮಾತನಾಡಿ, “ಮದರ್ ಹೀರೋಯಿನ್” ಎಂದು ಕರೆಯಲ್ಪಡುವ ಬಹುಮಾನ ಯೋಜನೆ

Dakshina Kannada
ರಾಜ್ಯ

ವಿಜಯಟೈಮ್ಸ್ ಇಂಪ್ಯಾಕ್ಟ್ ; ಬಂಟ್ವಾಳ ಸೇತುವೆಯ ದುಸ್ಥಿತಿ ನೋಡಲು ದಿಢೀರನೇ ಬಂದ ಅಧಿಕಾರಿಗಳು!

ಕಳಪೆ ಕಾಮಗಾರಿ ದುರಂತದ ಬಗ್ಗೆ ವಿಜಯಟೈಮ್ಸ್ ತಂಡ ಮಾಡಿದ್ದ ವರದಿಗೆ ಅಧಿಕಾರಿಗಳು ಈಗ ದಿಢೀರ್ ಎಚ್ಚೆತ್ತುಕೊಂಡಿದ್ದಾರೆ.

IT Minister
ದೇಶ-ವಿದೇಶ

5G ಬಿಡುಗಡೆಗೆ ತಯಾರಿ ಮಾಡಿಕೊಳ್ಳಿ : ಟೆಲಿಕಾಂ ಕಂಪನಿಗಳಿಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಸೂಚನೆ

ಇನ್ನು ಏರ್ಟೆಲ್(Airtel) ಮತ್ತು ಜಿಯೋ(Jio) ಈ ತಿಂಗಳ ಕೊನೆಯಲ್ಲಿ ತಮ್ಮ 5G ಸೇವೆಗಳ ಮೊದಲ ಹಂತವನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.