The study says that no boys will be born in the future: Y chromosome number is decreasing!
ಅಂದಿನಿಂದ ಇಂದಿನವರೆಗೂ ಮಕ್ಕಳಾದ ಮೇಲೆ ಗಂಡಾ, ಹೆಣ್ಣಾ (Male, Female) ಎಂದು ಕೇಳಿ ಹೆಣ್ಣಾಗಿದ್ದರೆ ಮುಂದಿನದು ಗಂಡಾಗಲಿ ಎಂದು ಹರಸುವ ಹಲವಾರು ಜನರಿದ್ದಾರೆ. ಆದರೆ ಇದೀಗ ಭವಿಷ್ಯದಲ್ಲಿ ಗಂಡುಮಕ್ಕಳೇ ಹುಟ್ಟೋದಿಲ್ಲ ಎನ್ನುತ್ತಿದೆ ಅಧ್ಯಯನ.ಹಾಗಿದ್ರೆ ಇನ್ನು ಸಾವಿರಾರು ವರ್ಷಗಳ ನಂತರ ಹೆಣ್ಣುಮಕ್ಕಳು ಮಾತ್ರ ಜನಿಸುತ್ತಾರಾ, ಪ್ರಪಂಚದಲ್ಲಿ ಗಂಡುಮಕ್ಕಳು ಇರುವುದಿಲ್ವಾ ಎಂಬೆಲ್ಲಾ ಪ್ರಶ್ನೆ ಜನರನ್ನು ಕಾಡಲಾರಂಬಿಸಿದೆ.
ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿರುವ ಲಾ ಟ್ರೋಬ್ ವಿಶ್ವವಿದ್ಯಾಲಯ (La Trobe University)ದ ಜೀವಶಾಸ್ತ್ರ ಪ್ರೊಫೆಸರ್ ಜೆನ್ನಿಫರ್ ಮಾರ್ಷಲ್ ಗ್ರೇವ್ಸ್ ಎಂಬ ವಿಜ್ಞಾನಿ ಈ ಬಗ್ಗೆ ಅಧ್ಯಯನ ನಡೆಸಿ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಜರ್ನಲ್ನಲ್ಲಿ ಪ್ರಬಂಧ ಪ್ರಕಟಿಸಿದ್ದಾರೆ. ಅದರ ಪ್ರಕಾರ, ಗಂಡುಮಕ್ಕಳ ಜನನಕ್ಕೆ ಕಾರಣವಾಗುವ ವೈ ವರ್ಣತಂತು (Y Chromosomes)ವಿನಲ್ಲಿರುವ 1438 ಮೂಲ ಜೀನ್ಸ್ಗಳ ಪೈಕಿ 1393 ಜೀನ್ಸ್ಗಳು ಕಳೆದ 30 ಕೋಟಿ ವರ್ಷದಲ್ಲಿ ನಾಶವಾಗಿವೆ. ಇನ್ನುಳಿದ 45 ಜೀನ್ಸ್ಗಳು ಮುಂದಿನ 1.1 ಕೋಟಿ ವರ್ಷದಲ್ಲಿ ನಾಶವಾಗಲಿವೆ.
ಆಗ ಗಂಡುಮಕ್ಕಳ ಜನನ ಸಂಪೂರ್ಣವಾಗಿ ನಿಲ್ಲುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರವಾಗಿ ಖುಷಿ ಪಡಬೇಕಾದ ಸುದ್ದಿ ಎಂದರೆ ಪ್ರಪಂಚದಲ್ಲಿರುವ ಒಂದು ಜಾತಿಯ ಇಲಿಗಳಲ್ಲಿ ಈಗಾಗಲೇ ವೈ ಕ್ರೋಮೋಸೋಮ್ ಸಂಪೂರ್ಣ ಕಣ್ಮರೆಯಾಗಿದೆ. ಆದರೂ ಅವುಗಳ ಸಂಖ್ಯೆ ಅಳಿದಿಲ್ಲ.
ಪೀರ್ ರಿವ್ಯೂ ಜರ್ನಲ್ ‘ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ (Peer Review Journal ‘Proceedings of the National Academy of Science’)’ ನಲ್ಲಿ 2022ರಲ್ಲಿ ಪ್ರಕಟವಾದ ಅಧ್ಯಯನವು ಸ್ಪೈನಿ ಇಲಿಯು ಹೊಸ ಪುರುಷ-ನಿರ್ಧರಿಸುವ ಜೀನ್ ಅನ್ನು ಯಶಸ್ವಿಯಾಗಿ ವಿಕಸನಗೊಳಿಸಿದೆ ಎಂದು ತಿಳಿಸುತ್ತದೆ.
ಆ ಕಾರಣಕ್ಕೆ ಮನುಷ್ಯನಲ್ಲಿ ಹೊಸ ಜೀನ್ (Gene) ಗಳ ವಿಕಸನ ಆಗಬಹುದು ಎಂಬ ಭರವಸೆ ಮೂಡುವಂತೆ ಮಾಡಿದೆ. ಪುರುಷ ಕ್ರೋಮೋಸೋಮ್ಗಳು ಕಡಿಮೆಯಾಗುತ್ತಿರುವುದು ಆತಂಕಕಾರಿಯಾದರೂ, ಹೊಸ ಜೀನ್ಗಳು ಹುಟ್ಟುವ ಸಾಧ್ಯತೆಯೂ ಇದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿರುವುದು ಕೊಂಚ ನೆಮ್ಮದಿ ನೀಡಿದೆ.
Y Chromosome Number is Decreasing In kannada
From then till today, there are many people who ask if they are male or female after having a child, and if it is a female, then the next one will be a male. But now the study says that no boys will be born in the future. If so, after thousands of years, only girls will be born, the question of whether there will be boys in the world has started bothering people.
A scientist named Jennifer Marshall Graves, a biology professor at La Trobe University in Melbourne, Australia, has studied this and published an essay in the National Academy of Science Journal. Accordingly, 1393 genes out of 1438 original genes in the Y Chromosomes that lead to the birth of boys have been destroyed in the last 30 million years. The remaining 45 genes will be destroyed in the next 1.1 crore years.
It is said that then the birth of boys will stop completely. But the good news in this regard is that the Y chromosome has already completely disappeared in one species of mouse in the world. However, their number is not extinct.
A study published in 2022 in the peer review journal ‘Proceedings of the National Academy of Science’ reveals that the spiny mouse has successfully evolved a new male-determining gene.
For that reason, there is hope that new genes can be evolved in humans. While the shrinking number of male chromosomes is alarming, there is some relief when scientists predict that new genes may also be born.