Visit Channel

ಯಾಹೂ ನ್ಯೂಸ್‌, ಯಾಹೂ ಕ್ರಿಕೆಟ್‌ ಸೇರಿದಂತೆ ಭಾರತದಲ್ಲಿನ ತನ್ನ ಜಾಲತಾಣಗಳನ್ನು ಸ್ಥಗಿತಗೊಳಿಸಿದ ಯಾಹೂ

download

ನವದೆಹಲಿ, ಆ. 26: ಯಾಹೂ ಕಂಪನಿಯು ಭಾರತದಲ್ಲಿ ಪ್ರಕಟವಾಗುತ್ತಿದ್ದ ತನ್ನ ಕೆಲವು ಸುದ್ದಿ ಜಾಲ ತಾಣಗಳನ್ನು ಸ್ಥಗಿತಗೊಳಿಸಿದೆ.

ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ಹೊಸ ನಿಯಮಗಳ ಪ್ರಕಾರ ಭಾರತದಲ್ಲಿ ಡಿಜಿಟಲ್‌ ಮಾಹಿತಿ ಪ್ರಕಟಿಸುವ ಮತ್ತು ನಿರ್ವಹಿಸುವ ಮಾಧ್ಯಮ ಕಂಪನಿಗಳಲ್ಲಿ ವಿದೇಶಿ ಮಾಲೀಕತ್ವವನ್ನು ಮಿತಿಗೊಳಿಸಿರುವ ಹಿನ್ನೆಲೆಯಲ್ಲಿ ಯಾಹೂ ಈ ಕ್ರಮ ತೆಗೆದುಕೊಂಡಿದೆ.

ಸ್ಥಗಿತಗೊಳಿಸಿರುವ ಜಾಲತಾಣಗಳಲ್ಲಿ ಯಾಹೂ ನ್ಯೂಸ್‌, ಯಾಹೂ ಕ್ರಿಕೆಟ್‌, ಹಣಕಾಸು, ಮನರಂಜನೆ ಮತ್ತು ಮೇಕರ್ಸ್‌ ಇಂಡಿಯಾ ಸೇರಿದಂತೆ ಹಲವು ಜಾಲತಾಣಗಳು ಸೇರಿವೆ. ಆದರೆ ಕಂಪನಿಯ ಈ ಕ್ರಮದಿಂದ ಯಾಹೂ ಇ–ಮೇಲ್ ಹಾಗೂ ಸರ್ಚ್‌ ಎಂಜಿನ್‌ ಬಳಕೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.

‘2021ರ ಆಗಸ್ಟ್ 26 ರಿಂದ ಯಾಹೂ ಇಂಡಿಯಾ ಕಂಪನಿ, ಇನ್ನು ಮುಂದೆ ಭಾರತದಲ್ಲಿ ಮೇಲೆ ತಿಳಿಸಿರುವ ಜಾಲತಾಣಗಳನ್ನು ಪ್ರಕಟಿಸುವುದಿಲ್ಲ. ಆದರೆ, ನಿಮ್ಮ ಯಾಹೂ ಇಮೇಲ್‌ ಖಾತೆ ಮತ್ತು ಸರ್ಚ್‌ ಎಂಜಿನ್‌ ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಇಲ್ಲಿವರೆಗೂ ನಮ್ಮನ್ನು ಬೆಂಬಲಿಸಿರುವವರಿಗೆ ಹಾಗೂ ಜಾಲತಾಣ ಓದುಗರಿಗೆ ಧನ್ಯವಾದಗಳು’ ಎಂದು ಯಾಹೂ ವೆಬ್‌ಸೈಟ್ ಹೇಳಿದೆ.

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.