• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

‘ಯಾರ ಮಗ’ ಟೀಸರ್ ಬಿಡುಗಡೆ

Sharadhi by Sharadhi
in ಮನರಂಜನೆ
‘ಯಾರ ಮಗ’ ಟೀಸರ್ ಬಿಡುಗಡೆ
0
SHARES
0
VIEWS
Share on FacebookShare on Twitter

ತಾಯಿ ಸೆಂಟಿಮೆಂಟ್ ಮತ್ತು ಭೂಗತಲೋಕದ ಕಥಾನಕ ಹೊಂದಿರುವ ಚಿತ್ರ ಯಾರಮಗ. ಈ ಚಿತ್ರದಲ್ಲಿ ಯುವನಟ ರಘು ಪಡುಕೋಟೆ ನಾಯಕನಾಗಿ ನಟಿಸಿದ್ದು ಅವರೇ ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.

ಭೂಗತಲೋಕದಲ್ಲಿ ಒಬ್ಬ ತಾಯಿ ಮಗನನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿರುವ ಈ ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ರೇಣುಕಾಂಬ ಥಿಯೇಟರಿನಲ್ಲಿ ನೆರವೇರಿತು. “ಈ ಕೋಟೆಗೆ ರಾಜನೂ ನಾನೇ, ಕಾವಲುಗಾರನೂ ನಾನೇ” ಎನ್ನುವ ಖಡಕ್ ಡೈಲಾಗ್ ಇರುವ ಈ ಟೀಸರ್ ನೋಡುಗರ ಗಮನ ಸೆಳೆಯುವಂತಿದೆ.

ಕನ್ನಡಪರ ಹೋರಾಟಗಾರ ಬಸವರಾಜ ಪಡುಕೋಟೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇವರ ಪುತ್ರ ರಘು ಪಡುಕೋಟೆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಈ ಚಿತ್ರದ ಕಥೆ ಬರೆದು ನಿರ್ದೇಶನ ಕೂಡ ಇವರೇ ಮಾಡಿದ್ದಾರೆ.

ಟೀಸರ್ ಅನಾವರಣ ಸಮಾರಂಭದಲ್ಲಿ ಕರವೇ ಯುವಘಟಕದ ರಾಜ್ಯಾಧ್ಯಕ್ಷ ಧರ್ಮರಾಜ್, ಡಿ.ಎಸ್. ಮ್ಯಾಕ್ಸ್‌ ನ ದಯಾನಂದ್, ಮಾರುತಿರಾವ್ ಮೋರೆ, ವೀರಶೈವ ಯುವ ವೇದಿಕೆಯ ಪ್ರಶಾಂತ್, ಕೆ.ಜಿ.ಹನುಮಂತಯ್ಯ ಹಾಗೂ ಚಿತ್ರತಂಡದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಬಸವರಾಜ ಪಡುಕೋಟೆ “ನಾನು ಮೊದಲಿನಿಂದಲೂ ಕನ್ನಡಪರ‌ ಹೋರಾಟಗಳನ್ನು ಮಾಡಿಕೊಂಡು ಬಂದವನು. ಅಲ್ಲದೆ ಡಾ.ರಾಜ್‌ಕುಮಾರ್ ಅವರ ಅಪ್ಪಟ ಅಬಿಮಾನಿ, ಸಿನಿಮಾ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದೆ, ಈಗ ನನ್ನ ಮಗನಿಗಿರುವ ಸಿನಿಮಾ ಆಸಕ್ತಿ ಕಂಡು ಈಚಿತ್ರ ನಿರ್ಮಾಣ ಮಾಡಿದ್ದೇನೆ. ಈಗಾಗಲೇ ಸುರಪುರ ತಾಲ್ಲೂಕಿನ ಪಡುಕೋಟೆ, ಬೆಂಗಳೂರಿನ ಶಿವಾಜಿನಗರ, ವೈಟ್‌ಫೀಲ್ಡ್ ಸುತ್ತಮುತ್ತ ಅರವತ್ತು ಭಾಗದಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ಸಾಕಷ್ಟು ಹೊಸಬರಿಗೆ ಅವಕಾಶ ಕೊಟ್ಟಿದ್ದೇವೆ. ಪ್ಲಾನ್ ಪ್ರಕಾರ ಆದರೆ ಇದೇ ಜೂನ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ” ಎಂದು ಹೇಳಿದರು. ನಂತರ ದಯಾನಂದ್ ಮಾತನಾಡಿ ಅಭಿನಯ ಒಂದು ಕಲೆ, ಅದು ಎಲ್ಲರಿಗೂ ಬರಲ್ಲ, ಈ ಹುಡುಗನಿಗೆ ಹುಟ್ಟಿನಿಂದಲೇ ಅದು ಒಲಿದಿದೆ, ಈತ ಮುಂದೆ ಒಳ್ಳೇ ಹೆಸರು ಮಾಡುವ ಎಲ್ಲಾ ಲಕ್ಷಣಗಳು ಈ ಚಿತ್ರದಲ್ಲಿದೆ ಎಂದರು.

ಚಿತ್ರದ ನಾಯಕ ಹಾಗೂ ನಿರ್ದೇಶಕ ರಘು ಪಡುಕೋಟೆ ಮಾತನಾಡಿ ಈಗಿನ ಕಾಲದ ಹುಡುಗರು ಹೇಗೆಲ್ಲಾ ಹಾಳಾಗ್ತಿದಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ತಾಯಿ ಸೆಂಟಿಮೆಂಟ್, ಲವ್, ಡ್ರಗ್ ಮಾಫಿಯಾ ಕೂಡ ಚಿತ್ರದಲ್ಲಿದೆ. ಒಬ್ಬ ಮಗನಾದವನು ತನ್ನ ತಾಯಿಯನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳಬಹುದು ಎಂದು ನನ್ನ ಪಾತ್ರದ ಮೂಲಕ ನಿರೂಪಿಸಲಾಗುತ್ತಿದೆ. ತಾಯಿ ಕೂಡ ತನ್ನ ಮಗನ ಮೇಲೆ ಎಷ್ಟು ಕಾಳಜಿ ವಹಿಸುತ್ತಾಳೆ ಎಂಬ ಕಂಟೆಂಟ್ ಚಿತ್ರದಲ್ಲಿದೆ. ಮೇಕಿಂಗ್‌ವೈಸ್ ಸಿನಿಮಾ ತುಂಬಾ ರಿಚ್‌ಆಗಿ ಮೂಡಿಬಂದಿದ್ದು, ಒಳ್ಳೇ ಮೆಸೇಜ್ ಕೂಡ ಇದೆ ಎಂದು ಹೇಳಿದರು. ನಂತರ ಚಿತ್ರದ ಸಂಗೀತ ನಿರ್ದೇಶಕ ಪ್ರವೀಣ್ ಮಾತನಾಡಿ ಚಿತ್ರದಲ್ಲಿ 4 ಹಾಡುಗಳಿವೆ. ಹೀರೋ ಇಂಟ್ರಡಕ್ಷನ್, ಡ್ಯುಯೆಟ್, ಪ್ಯಾಥೋ ಹಾಗೂ ತಾಯಿ ಸೆಂಟಿಮೆಂಟ್ ಹೀಗೆ ಎಲ್ಲಾ ರೀತಿಯ ಹಾಡುಗಳಿವೆ ಎಂದರು. 90ರ ದಶಕದಲ್ಲಿ ನಡೆಯುವ ಅಂಡರ್‌ವರ್ಲ್ಡ್ ಕಥೆ ಚಿತ್ರದಲ್ಲಿದ್ದು, ರೆಟ್ರೋ ಸ್ಟೈಲ್‌ನಲ್ಲಿ ಚಿತ್ರದ ನಿರೂಪಣೆಯಿರುತ್ತದೆ. ನಾಯಕಿಯಾಗಿ ಸುಕೃತ ಅವರು ಅಭಿನಯಿಸುತ್ತಿದ್ದು, ಕಾಕ್ರೋಚ್‌ ಸುಧಿ, ಬಲ ರಾಜವಾಡಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Related News

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ
Vijaya Time

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

May 29, 2023
ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ
Sports

ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ

May 26, 2023
ತಿರುಪತಿಯಲ್ಲಿ ನಡೆಯಲಿದೆ ‘ಆದಿಪುರುಷ್’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್​
ಪ್ರಮುಖ ಸುದ್ದಿ

ತಿರುಪತಿಯಲ್ಲಿ ನಡೆಯಲಿದೆ ‘ಆದಿಪುರುಷ್’ ಚಿತ್ರದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್​

May 26, 2023
ತೆಲುಗು ಖ್ಯಾತ ನಟ ಪ್ರತಿದಿನ ರಾತ್ರಿ ಡೇಟಿಂಗ್​ಗೆ ಬರುವಂತೆ ಹಿಂಸೆ ಕೊಟ್ಟಿದ್ದರು : ಹನ್ಸಿಕಾ ಮೋಟ್ವಾನಿ
ಪ್ರಮುಖ ಸುದ್ದಿ

ತೆಲುಗು ಖ್ಯಾತ ನಟ ಪ್ರತಿದಿನ ರಾತ್ರಿ ಡೇಟಿಂಗ್​ಗೆ ಬರುವಂತೆ ಹಿಂಸೆ ಕೊಟ್ಟಿದ್ದರು : ಹನ್ಸಿಕಾ ಮೋಟ್ವಾನಿ

May 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.