download app

FOLLOW US ON >

Tuesday, January 25, 2022
English English Kannada Kannada

ಯಶ್‌ ಹುಟ್ಟುಹಬ್ಬಕ್ಕೆ ಕೆಜಿಎಫ್‌ 2 ಪೋಸ್ಟರ್‌ ಬಿಡುಗಡೆ

ಹುಟ್ಟುಹಬ್ಬದ ಹಿನ್ನಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಕೆಜಿಎಫ್ 2 ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ . ಅವರ  ಜನ್ಮದಿನದಂದೇ ಪೋಸ್ಟರ್  ಬಿಡುಗಡೆಯಾಗಿರುವುದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ  ಖುಷಿ ಪಟ್ಟಿದ್ದಾರೆ. ರಾಕಿ ಬಾಯ್ ಬರ್ತಡೆಗೆ ಕೆಜಿಎಫ್ 2 ಸಿನಿಮಾದ ಟೀಸರ್  ಹೊರಬರಬಹುದು ಎಂದು ನಿರೀಕ್ಷೆ ಇತ್ತು ಆದರೆ ಈಗ ಅದು ಸುಳ್ಳಾಗಿದೆ.  ಇದರ ಬದಲು ಅವರ ಅಭಿಮಾನಿಗಳಿಗೆ ಖುಷಿಯಾಗಲಿ ಎಂಬ ಕಾರಣಕ್ಕಾಗಿ ಚಿತ್ರತಂಡ ಕೆಜಿಎಫ್‌ 2ನ  ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ
  • ಪ್ರೀತು

ರಾಕಿಂಗ್‌ ಸ್ಟಾರ್‌ ಯಶ್‌ ಅವರು ಇಂದು 36ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಈ ಹಿನ್ನಲೆಯಲ್ಲಿ  ಇಂದು ಅವರ ಹೆಸರು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು,ಯಶ್ ಅವರ  ಸಾಮಾಜಿಕ ಜಾಲತಾಣಗಳಲ್ಲಿ ಯಶ್‌ ಫೋಟೋವನ್ನು ಶೇರ್ ಮಾಡಿಕೊಂಡು ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಹುಟ್ಟುಹಬ್ಬದ ಹಿನ್ನಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಕೆಜಿಎಫ್ 2 ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ . ಅವರ  ಜನ್ಮದಿನದಂದೇ ಪೋಸ್ಟರ್  ಬಿಡುಗಡೆಯಾಗಿರುವುದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ  ಖುಷಿ ಪಟ್ಟಿದ್ದಾರೆ. ರಾಕಿ ಬಾಯ್ ಬರ್ತಡೆಗೆ ಕೆಜಿಎಫ್ 2 ಸಿನಿಮಾದ ಟೀಸರ್  ಹೊರಬರಬಹುದು ಎಂದು ನಿರೀಕ್ಷೆ ಇತ್ತು ಆದರೆ ಈಗ ಅದು ಸುಳ್ಳಾಗಿದೆ.  ಇದರ ಬದಲು ಅವರ ಅಭಿಮಾನಿಗಳಿಗೆ ಖುಷಿಯಾಗಲಿ ಎಂಬ ಕಾರಣಕ್ಕಾಗಿ ಚಿತ್ರತಂಡ ಕೆಜಿಎಫ್‌ 2ನ  ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ

 ಈ ಬಗ್ಗೆ ನಿನ್ನೆ ಘೋಷಣೆ ಮಾಡಿದ್ದ ಹೊಂಬಾಳೆ ಸಂಸ್ಥೆ ಬೆಳಗ್ಗೆ 9 ಗಂಟೆಗೆ ಉಗ್ರ ರಾಕ್ಷಸ ನಿಮ್ಮನ್ನು ಭೇಟಿಯಾಗಲಿದ್ದಾನೆ ಮಿಂಚಿನ ದಾಳಿ ಆರಂಭವಾಗಲಿದೆ ಎಂದು ಟ್ವೀಟ್ ಮಾಡಿತ್ತು ಇದೀಗ ಪೋಸ್ಟರ್ ರಿಲೀಸ್ ಆಗಿದೆ.   ಈ ಪೋಸ್ಟ್‌ರ್‌ನಲ್ಲಿ ಕಡಕ್ ಲುಕ್ಕಿನಲ್ಲಿರುವ ಯಶ್,  ಮುಂದೆ ಒಂದು ಫಲಕವಿದ್ದು ಅದರಲ್ಲಿ  ಎಚ್ಚರಿಕೆ ಮುಂದೆ ಅಪಾಯವಿದೆ ಎಂಬ  ಬರಹ ಇರುವ  ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.  ಪೋಸ್ಟರನ್ನು ಹೊಂಬಾಳೆ ಸಂಸ್ಥೆ ಹಾಗೂ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ರವರು  ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಅದನ್ನು ಅಭಿಮಾನಿಗಳು  ಕೂಡ ಶೇರ್ ಮಾಡಿ  ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ್ದಾರೆ

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp

Submit Your Article