ರಾಕಿಂಗ್ ಸ್ಟಾರ್ ಯಶ್(Rocking Star Yash) ಅಭಿನಯದ ಕೆಜಿಎಫ್ ಚಾಪ್ಟರ್ 2 (KGF 2) ಸಿನಿಮಾ, ಥಳಪತಿ ವಿಜಯ್(Thalapathy Vijay) ಅಭಿನಯದ ಬೀಸ್ಟ್(Beast) ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಾಡಿದ್ದ ದಾಖಲೆಯನ್ನು ಹಿಂದಿಕ್ಕುವುದಲ್ಲದೇ, ಬಾಕ್ಸ್ ಆಫೀಸ್ ಚಿಂದಿ ಮಾಡಿ ಮತ್ತಷ್ಟು ಚಿತ್ರಮಂದಿರಗಳನ್ನು ಕಬಳಿಸುತ್ತಿದೆ. ಕೆಜಿಎಫ್ 2 ವಿಜಯ್ ಅವರ ಬೀಸ್ಟ್ ಸಿನಿಮಾವನ್ನು ಥಿಯೇಟರ್‌ಗಳಿಂದ ಹೊರನೂಕುತ್ತಿದೆ ಎಂದೇ ಹೇಳಬಹುದು.

ಬೀಸ್ಟ್ ಸಿನಿಮಾ ಬಿಡುಗಡೆಗೊಂಡ ದಿನದ ಬಳಿಕ ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿದೆ, ಇತ್ತ ಕೆಜಿಎಫ್ 2 ಎಲ್ಲಾ ಭಾಷೆಯಿಂದಲೂ ಸಾಕಷ್ಟು ಪ್ರೀತಿ, ಅಭಿಪ್ರಾಯವನ್ನು ಪಡೆಯುವ ಮೂಲಕ ರಾರಾಜಿಸುತ್ತಿದೆ. ಇದಲ್ಲದೆ, ಬುಕ್ ಮೈಶೋ ಆಪ್ ಪ್ರಕಾರ, ಟಿಕೆಟ್ ಮಾರಾಟದಲ್ಲಿ ಬೀಸ್ಟ್‌ಗೆ ಹೋಲಿಕೆ ಮಾಡಿದರೆ, ಕೆಜಿಎಫ್ 2 ಅಗ್ರಸ್ಥಾನದಲ್ಲಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಥಳಪತಿ ವಿಜಯ್ ಅವರ ಬೀಸ್ಟ್, ಒಂದು ದಿನ ಮುಂಚಿತವಾಗಿ ಏಪ್ರಿಲ್ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮತ್ತೊಂದೆಡೆ, ಕೆಜಿಎಫ್ 2 ಏಪ್ರಿಲ್ 14 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು ಮತ್ತು ಬಾಕ್ಸ್ ಆಫೀಸ್ ಕಲೇಕ್ಷನ್ ನಲ್ಲಿ ಬೀಸ್ಟ್ ಹಿಂದುಳಿದಿದೆ.

BookMyShow ಅಂಕಿಅಂಶಗಳ ಅನುಸಾರ ತಿಳಿಯುವುದಾದರೆ, ಕೆಜಿಎಫ್‌ನ 2.5 ಮಿಲಿಯನ್ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿದೆ. ಆಶಿಶ್ ಸಕ್ಸೇನಾ (CEO) ಮಾತನಾಡಿದ್ದು, “ಈ ವಾರ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಲು ಎರಡು ಬೃಹತ್ ದಕ್ಷಿಣ ಭಾರತದ ಪ್ರಮುಖ ಸಿನಿಮಾಗಳು ಘರ್ಷಣೆಗೆ ಸಜ್ಜಾಗಿದ್ದವು, ಕೆಜಿಎಫ್ 2 (ಕನ್ನಡ, ಹಿಂದಿ, ತೆಲುಗು, ತಮಿಳು) ಮತ್ತು ಬೀಸ್ಟ್ (ತಮಿಳು) ಎರಡು ಸಿನಿಮಾಗಳು ಕೂಡ ಔಟ್-ಅಂಡ್-ಔಟ್ ಮಾಸ್ ಎಂಟರ್ಟೈನರ್ಗಳು ಮತ್ತು ಹೆಚ್ಚು ನಿರೀಕ್ಷಿತ ಚಲನಚಿತ್ರಗಳಾಗಿರುವುದರಿಂದ, ಮುಂಗಡ ಟಿಕೆಟ್ ಮಾರಾಟವು ಅಧಿಕವಾಗಿ ನಡೆಯುತ್ತಿತ್ತು.

ಆದ್ರೆ ಕೆ.ಜಿ.ಎಫ್ 2 ಈಗಾಗಲೇ ಮುಂಗಡ ಮಾರಾಟದಲ್ಲಿ 2.5 ಮಿಲಿಯನ್ ಟಿಕೆಟ್‌ಗಳ ಗಡಿದಾಟಿದೆ ಮತ್ತು ಬೀಸ್ಟ್ ಬುಕ್‌ಮೈಶೋನಲ್ಲಿ 1.8 ಮಿಲಿಯನ್ ಟಿಕೆಟ್ ಮಾರಾಟವನ್ನು ದಾಟಿತ್ತು. ಒಟ್ಟಾರೆ ಸಿನಿಪ್ರೇಕ್ಷಕರಿಗೆ ಇದು ದೊಡ್ಡ ವಾರವಾಗಲಿದೆ ಎಂದು ಹೇಳಿದ್ದಾರೆ.