ಬರ ಇದ್ದಾಗ ಬೇರೆ ಎಲ್ಲಾ ಕಾರ್ಯಕ್ರಮಗಳು, ರಾಜಕೀಯ ಸಭೆಗಳು, ಗ್ಯಾರಂಟಿ ಉತ್ಸವಗಳು ನಡೆಯಬಹುದು – ಹಂಪಿ ಉತ್ಸವ (Yatnal Tong to Congress) ನಡೆಯುವ ಹಾಗಿಲ್ಲ. ಬರ ಇರುವಾಗ

ರಾಜೀವ್ ಗಾಂಧೀ ಪುತ್ಥಳಿಗೆ ಕೋಟಿ ಕೋಟಿ ಹಣ, ಹಜ್ ಭವನಗಳಿಗೆ 500 ಕೋಟಿ ನೀಡಬಹುದೇ? ಎಂದು ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಸರ್ಕಾರದ ವಿರುದ್ದ
ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಟ್ವೀಟ್ ಮೂಲಕ ತೀವ್ರ ವಾಗ್ದಾಳಿ ನಡೆಸಿರುವ ಅವರು, ನಿಮ್ಮದೇ ಸರ್ಕಾರ ಇರೋದು ಅಲ್ಲವೇ ? ಮಾನ ಮರ್ಯಾದೆ ಇದ್ದರೇ ಕೂಲಂಕುಷವಾಗಿ ತನಿಖೆ ಮಾಡಿಸಿ.
ನೀವು ಟ್ವೀಟ್ ಡಿಲೀಟ್ ಮಾಡಿ ಓಡಿ ಹೋಗಬೇಡಿ. ನಾನು ಹೇಳಿದ್ದು ಎಲ್ಲಾ ಪಕ್ಷದಲ್ಲೂ ದಲ್ಲಾಳಿಗಳು ಇರಬಹುದು ಅಂತ, ನನ್ನ ಹೇಳಿಕೆಯನ್ನು ತನಿಖೆ ಮಾಡಿಸಿ ಮೂರ್ಖರೇ. ನಿಮ್ಮಂತಹ ರೌಡಿ, ಪುಡಾರಿ,
ಕೊತ್ವಾಲ್ ಶಿಷ್ಯನ ಶಿಷ್ಯರಿಗೆ ನನ್ನ ಹೇಳಿಕೆ ಎಲ್ಲಿ ಅರ್ಥ ಆಗಬೇಕು ಅಲ್ಲವೇ ಎಂದು (Yatnal Tong to Congress) ಲೇವಡಿ ಮಾಡಿದ್ದಾರೆ.
ಇದಕ್ಕೂ ಮುನ್ನ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಉದ್ಯಮಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ಮೋಸ ಮಾಡಿರುವ ಆರೋಪ ಹೊತ್ತಿರುವ ಚೈತ್ರಾ ಕುಂದಾಪುರ ಅವರೊಂದಿಗಿರುವ
ಪೋಟೋವನ್ನು ಹಾಕಿ, ಬಿಜೆಪಿಯಲ್ಲಿ ಸಿಎಂ ಹುದ್ದೆಗೆ 2,500 ಕೋಟಿ ನೀಡಬೇಕು ಎಂಬ ಸತ್ಯ ಬಹಿರಂಗಪಡಿಸಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಟಿಕೆಟ್ ಗೆ 7 ಕೋಟಿ ಕೊಡಬೇಕು

ಎಂದು ವಂಚಿಸಿದ ಆರೋಪಿಯೊಂದಿಗೆ. ಸ್ಯಾಂಟ್ರೋ ರವಿಯೂ ಬಿಜೆಪಿಗರಿಗೆ ಆಪ್ತ, PSI ಹಗರಣದ ಆರೋಪಿಗಳೂ ಬಿಜೆಪಿಗರಿಗೆ ಆಪ್ತರು, ರೌಡಿ ಶೀಟರ್ ಗಳೂ ಬಿಜೆಪಿಗರಿಗೆ ಆಪ್ತರು, ಟಿಕೆಟ್ ಹಗರಣದ
ವಂಚಕರೂ ಬಿಜೆಪಿಗರಿಗೆ ಆಪ್ತರು. ಕಳ್ಳರು, ಸುಳ್ಳರು, ವಂಚಕರು ರಾಜ್ಯ ಬಿಜೆಪಿ ನಾಯಕರಿಗೇ ಆಪ್ತವಾಗುವುದೇಕೆ? ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿತ್ತು.
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ , ಮಾನ ಮರ್ಯಾದೆ ಇದ್ದರೇ ಕೂಲಂಕುಷವಾಗಿ ತನಿಖೆ ಮಾಡಿಸಿ. ನೀವು ಟ್ವೀಟ್ ಡಿಲೀಟ್ ಮಾಡಿ ಓಡಿ ಹೋಗಬೇಡಿ
ಎಂದು ವಾಗ್ದಾಳಿ ನಡೆಸಿದ್ದರು.
ಇದನ್ನು ಓದಿ: Job News: ಸಹಕಾರ ಹಾಲು ಉತ್ಪಾದಕರ ಸಂಘದಲ್ಲಿ ಉದ್ಯೋಗ ಅವಕಾಶಕ್ಕೆ ಅರ್ಜಿ ಆಹ್ವಾನ