Visit Channel

ಯಡಿಯೂರಪ್ಪ ಅವರೇ ನೀವು ತಡೆಯಾಜ್ಞೆ ತರುವುದಿಲ್ಲವೇ: ಟ್ವೀಟ್ ಮೂಲಕ ಕಾಂಗ್ರೆಸ್ ಲೇವಡಿ

congress-logo16069142211609615894

ಬೆಂಗಳೂರು, ಮಾ. 06: ಶಾಸಕ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಹೊರಬರುತ್ತಿದ್ದಂತೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ತಳಮಳ ಶುರುವಾಗಿದ್ದು, 6 ಸಚಿವರು ತಮ್ಮ ವಿರುದ್ಧ ಸಾಕ್ಷ್ಯಾಧಾರ ಇಲ್ಲದ ಯಾವುದೇ ಸುದ್ದಿ ಪ್ರಕಟಿಸಬಾರದೆಂದು ಕೋರಿ ಬೆಂಗಳೂರಿನ ಸಿಟಿ
ಕೋರ್ಟ್’ನಿಂದ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿದ್ದಾರೆ.

ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ. ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ. ಸುಧಾಕರ್, ನಾರಾಯಣಗೌಡ, ಭೈರತಿ ಬಸವರಾಜ್ ತಮ್ಮ ವಿರುದ್ಧ ಪ್ರಸಾರಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದಾರೆ.

ಈ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಲೆಳೆದಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ ಕಣ್ಣಿನಲ್ಲಿ ನೋಡಲಾಗದಂತ ಸಿಡಿ ಇದೆಯಂತೆ. ಬಿ.ಎಸ್. ಯಡಿಯೂರಪ್ಪ ಅವರೇ ನೀವು ತಡೆಯಾಜ್ಞೆ ತರುವುದಿಲ್ಲವೇ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.

Latest News

Russia
ದೇಶ-ವಿದೇಶ

ಜನಸಂಖ್ಯೆ ಹೆಚ್ಚಳಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ರೆ 13 ಲಕ್ಷ ಬಹುಮಾನ : ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

ರಷ್ಯಾದ ರಾಜಕೀಯ(Russia Politics) ಮತ್ತು ಭದ್ರತಾ ತಜ್ಞ ಡಾ ಜೆನ್ನಿ ಮ್ಯಾಥರ್ಸ್, ಟೈಮ್ಸ್ ರೇಡಿಯೊದಲ್ಲಿ ಈ ಕುರಿತು ಮಾತನಾಡಿ, “ಮದರ್ ಹೀರೋಯಿನ್” ಎಂದು ಕರೆಯಲ್ಪಡುವ ಬಹುಮಾನ ಯೋಜನೆ

Dakshina Kannada
ರಾಜ್ಯ

ವಿಜಯಟೈಮ್ಸ್ ಇಂಪ್ಯಾಕ್ಟ್ ; ಬಂಟ್ವಾಳ ಸೇತುವೆಯ ದುಸ್ಥಿತಿ ನೋಡಲು ದಿಢೀರನೇ ಬಂದ ಅಧಿಕಾರಿಗಳು!

ಕಳಪೆ ಕಾಮಗಾರಿ ದುರಂತದ ಬಗ್ಗೆ ವಿಜಯಟೈಮ್ಸ್ ತಂಡ ಮಾಡಿದ್ದ ವರದಿಗೆ ಅಧಿಕಾರಿಗಳು ಈಗ ದಿಢೀರ್ ಎಚ್ಚೆತ್ತುಕೊಂಡಿದ್ದಾರೆ.

IT Minister
ದೇಶ-ವಿದೇಶ

5G ಬಿಡುಗಡೆಗೆ ತಯಾರಿ ಮಾಡಿಕೊಳ್ಳಿ : ಟೆಲಿಕಾಂ ಕಂಪನಿಗಳಿಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಸೂಚನೆ

ಇನ್ನು ಏರ್ಟೆಲ್(Airtel) ಮತ್ತು ಜಿಯೋ(Jio) ಈ ತಿಂಗಳ ಕೊನೆಯಲ್ಲಿ ತಮ್ಮ 5G ಸೇವೆಗಳ ಮೊದಲ ಹಂತವನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.