• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಹಳದಿ ಮಾರ್ಗ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ, ಪ್ರತಿದಿನ ಬೆಳಿಗ್ಗೆ 6.30ರಿಂದ ಮೆಟ್ರೋಗಳು ಓಡಾಟ ಆರಂಭಿಸಲಿದೆ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಹಳದಿ ಮಾರ್ಗ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ, ಪ್ರತಿದಿನ ಬೆಳಿಗ್ಗೆ 6.30ರಿಂದ ಮೆಟ್ರೋಗಳು ಓಡಾಟ ಆರಂಭಿಸಲಿದೆ
0
SHARES
39
VIEWS
Share on FacebookShare on Twitter
  • ಟ್ರಾಫಿಕ್ ಕಿರಿಕಿರಿ ಬೇಡವೆಂದು ಮೆಟ್ರೋ ಮೊರೆ ಹೋಗುತ್ತಿರುವ ಪ್ರಯಾಣಿಕರು (Yellow Line Metro route is now open to public)
  • ಸಿಲ್ಕ್ ಬೋರ್ಡ್​ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೊಸ ಪ್ಲಾನ್
  • ಹಳದಿ ಮಾರ್ಗದ 6 ನಿಲ್ದಾಣಗಳಿಂದ 12 ಫೀಡರ್‌ ಬಸ್‌ ಪ್ರತಿದಿನ 96 ಟ್ರಿಪ್ ಸವಾರಿ

Bengaluru: ಬೆಂಗಳೂರಿನ ಬಹು ನಿರೀಕ್ಷಿತ ಯೆಲ್ಲೋ ಲೈನ್ ಮೆಟ್ರೋ(Yellow Line Metro) ಮಾರ್ಗ ಇದೀಗ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದ್ದು,

ಪ್ರಯಾಣಿಕರ ಸಂಚಾರಕ್ಕೆ ಹೊಸ ಆಯಾಮವನ್ನು ತಂದಿದೆ. ಆರ್.ವಿ. ರಸ್ತೆ – ಎಲೆಕ್ಟ್ರಾನಿಕ್ಸ್ ಸಿಟಿ ಬೊಮ್ಮಸಂದ್ರ ಮಾರ್ಗದಲ್ಲಿ ಪ್ರತಿದಿನ ಬೆಳಿಗ್ಗೆ 6.30ರಿಂದ ಮೆಟ್ರೋ ಓಡಾಟ ಆರಂಭಿಸುತ್ತಿವೆ.

ಟ್ರಾಫಿಕ್ ಜಾಮ್(Traffic jam) ಇಂದ ಪಾರಾಗಲು ಅನೇಕ ಮಂದಿಈಗಾಗಲೇ ಮೆಟ್ರೋವನ್ನು ಆರಿಸಿಕೊಂಡಿದ್ದು, ಹಾಗಾಗಿ ಸಿಲ್ಕ್‌ಬೋರ್ಡ್(Silkboard) ಪ್ರದೇಶದ ದಟ್ಟಣೆ ಕೂಡ ಕಡಿಮೆಯಾಗುತ್ತಿದೆ.

ಮೆಟ್ರೋ ಆರಂಭದ ಸಂಭ್ರಮದಲ್ಲೇ ರಾಜ್ಯ ಸರ್ಕಾರ(State Govt) ಮತ್ತೊಂದು ಉತ್ತಮ ನಿರ್ಧಾರ ಪ್ರಕಟಿಸಿದೆ – BMTC ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್‌ ಸೇವೆ ಆರಂಭಿಸಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ(Ramalinga Reddy) ಮಂಗಳವಾರ ಈ ಬಸ್‌ ಸೇವೆಗೆ ಚಾಲನೆ ನೀಡಿ, ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯ ಒದಗಿಸಿದ್ದಾರೆ.

ಹಳದಿ ಮೆಟ್ರೋ ಮಾರ್ಗದಲ್ಲಿ 6 ಪ್ರಮುಖ ನಿಲ್ದಾಣಗಳಿಂದ BMTC ಒಟ್ಟು 4 ಮಾರ್ಗಗಳಲ್ಲಿ 12 ಬಸ್‌ಗಳ ಮೂಲಕ 96 ಟ್ರಿಪ್‌ಗಳ ಸಂಚಾರ ನಡೆಸಲಿದೆ.

Yellow Line Metro route is now open to public

ಫೀಡರ್ ಬಸ್ ಸೌಲಭ್ಯ ಇರುವ ನಿಲ್ದಾಣಗಳು:

ಹೊಸ ರೋಡ್
ಬೆರಟೇನ ಅಗ್ರಹಾರ
ಎಲೆಕ್ಟ್ರಾನಿಕ್ ಸಿಟಿ
ಇನ್ಫೋಸಿಸ್ ಫೌಂಡೇಶನ್
ಕೋನಪ್ಪನ ಅಗ್ರಹಾರ
ಹೆಬ್ಬಗೋಡಿ, ಬೊಮ್ಮಸಂದ್ರ

ಎಲೆಕ್ಟ್ರಾನಿಕ್ ಸಿಟಿ – ಕೊಡತಿ ವಿಪ್ರೋ (MF-22)
ವಿಪ್ರೋ ಗೇಟ್‌ನಿಂದ ಬಸ್ ಬಿಡುವ ಸಮಯ: ಬೆಳಿಗ್ಗೆ 8.20, 8.50, 9.20… ಸಂಜೆ 4.55ವರೆಗೆ.
ಕೊಡತಿ ವಿಪ್ರೋದಿಂದ ಸಮಯ: ಬೆಳಿಗ್ಗೆ 7.10, 7.40, 8.10… ಮಧ್ಯಾಹ್ನ 3.55ವರೆಗೆ.
ಮುಖ್ಯ ಸ್ಟಾಪ್‌ಗಳು: ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ಹೊಸರೋಡ್, ಕಸವನಹಳ್ಳಿ, ಕೈಕೊಂಡ್ರಹಳ್ಳಿ, ದೊಡ್ಡಕನಹಳ್ಳಿ.
ಬಸ್‌ಗಳು: 4

ಎಲೆಕ್ಟ್ರಾನಿಕ್ ಸಿಟಿ – ಚಂದಾಪುರ – ಕೊಡತಿ ವಿಪ್ರೋ (MF-22A)

ವಿಪ್ರೋ ಗೇಟ್‌ನಿಂದ: ಬೆಳಿಗ್ಗೆ 8.40, 9.20, 9.45… ಸಂಜೆ 4.50ವರೆಗೆ.
ಕೊಡತಿ ವಿಪ್ರೋದಿಂದ: ಬೆಳಿಗ್ಗೆ 8.05, 8.35, 10.25… ಸಂಜೆ 5.35ವರೆಗೆ.
ಸ್ಟಾಪ್‌ಗಳು: ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಹುಸ್ಕೂರು ಗೇಟ್, ಚಿಂತಲ ಮಡಿವಾಳ, ಮುತ್ತಾನಲ್ಲೂರು ಕ್ರಾಸ್, ತಿಮ್ಮಸಂದ್ರ ಕ್ರಾಸ್, ಚಂದಾಪುರ ಕ್ರಾಸ್.
ಬಸ್‌ಗಳು: 4, ಟ್ರಿಪ್‌ಗಳು: 24

ಬೊಮ್ಮಸಂದ್ರ ರೌಂಡ್‌ ಟ್ರಿಪ್‌ (MF-22B)
ಬೊಮ್ಮಸಂದ್ರದಿಂದ: ಬೆಳಿಗ್ಗೆ 8.30, 9.00, 9.25… ಸಂಜೆ 6.05ವರೆಗೆ.
ಸ್ಟಾಪ್‌ಗಳು: ಬೊಮ್ಮಸಂದ್ರ, ತಿರುಪಾಳ್ಯ ಕ್ರಾಸ್, ಎಸ್-ಮಾಂಡೋ-3, ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಬೊಮ್ಮಸಂದ್ರ.
ಬಸ್‌ಗಳು: 2, ಟ್ರಿಪ್‌ಗಳು: 20

ಕೋನಪ್ಪನ ಅಗ್ರಹಾರ ರೌಂಡ್‌ ಟ್ರಿಪ್‌ (MF-22C)
ಕೋನಪ್ಪನ ಅಗ್ರಹಾರದಿಂದ: ಬೆಳಿಗ್ಗೆ 8.25, 8.55, 9.20… ಸಂಜೆ 6.05ವರೆಗೆ.
ಸ್ಟಾಪ್‌ಗಳು: ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್, ಎಸ್-ಮಾಂಡೋ-3, ತಿರುಪಾಳ್ಯ ಕ್ರಾಸ್, ಬೊಮ್ಮಸಂದ್ರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ.
ಬಸ್‌ಗಳು: 2, ಟ್ರಿಪ್‌ಗಳು: 20

ಇದನ್ನು ಓದಿ : ನಾಳೆ ವಂದೇ ಭಾರತ್ ರೈಲು ಹಾಗೂ ಯಲ್ಲೋ ಮೆಟ್ರೋ ಮಾರ್ಗ ಉದ್ಘಾಟನೆ : ಭಾನುವಾರ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ

ಇನ್ನು BMTC ಪ್ರಕಾರ, ಪ್ರಸ್ತುತ ಬೆಂಗಳೂರು ನಗರದಲ್ಲಿ 6,217 ಬಸ್‌ಗಳು ಪ್ರತಿದಿನ 44 ಲಕ್ಷ ಪ್ರಯಾಣಿಕರನ್ನು ಸಾಗಿಸುತ್ತಿದ್ದು, ಒಟ್ಟು 65,206 ಟ್ರಿಪ್‌ಗಳಲ್ಲಿ 12.85 ಲಕ್ಷ ಕಿ.ಮೀ. ಕವರ್ ಮಾಡುತ್ತಿದೆ. ಈಗ ಹಳದಿ ಮೆಟ್ರೋ ಮಾರ್ಗಕ್ಕೆ ಹೊಸ ಫೀಡರ್ ಬಸ್ ಸೌಲಭ್ಯ ಸೇರಿಕೊಡುವುದರಿಂದ, ಪ್ರಯಾಣಿಕರಿಗಿರುವ ಅನುಕೂಲತೆ ಹೆಚ್ಚಿಸಲಿದೆ. (Yellow Line Metro route is now open to public)

Tags: bengalurubmtcNamma metroRamalinga ReddySilkboardState Govttraffic jamvijaya timesYellow Line Metro

Related News

₹10.49 ಲಕ್ಷದಿಂದ 28.65 ಕಿ.ಮೀ ಮೈಲೇಜ್: ಟಾಪ್ ಹೈಬ್ರಿಡ್ ಕಾರುಗಳು
ಪ್ರಮುಖ ಸುದ್ದಿ

₹10.49 ಲಕ್ಷದಿಂದ 28.65 ಕಿ.ಮೀ ಮೈಲೇಜ್: ಟಾಪ್ ಹೈಬ್ರಿಡ್ ಕಾರುಗಳು

October 5, 2026
ಮೆದುಳಿನ ಆರೋಗ್ಯಕ್ಕೆ ಈ 5 ಅಭ್ಯಾಸ ಸಾಕು
ಆರೋಗ್ಯ

ಮೆದುಳಿನ ಆರೋಗ್ಯಕ್ಕೆ ಈ 5 ಅಭ್ಯಾಸ ಸಾಕು

October 5, 2026
ಉದ್ಯೋಗಿಗಳಾಗದೇ ಉದ್ಯಮಿಗಳಾಗಿ: ಕರಾವಳಿ–ಮಲೆನಾಡು ಯುವಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ
ಪ್ರಮುಖ ಸುದ್ದಿ

ಉದ್ಯೋಗಿಗಳಾಗದೇ ಉದ್ಯಮಿಗಳಾಗಿ: ಕರಾವಳಿ–ಮಲೆನಾಡು ಯುವಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ

October 5, 2026
ಅನಧಿಕೃತ ಪಿಜಿಗಳ ವಿರುದ್ಧ GBA ಕಠಿಣ ಕ್ರಮ: ಕರೆಂಟ್‌, ನೀರಿನ ಸಂಪರ್ಕ ಕಡಿತಕ್ಕೆ ಸಿದ್ಧತೆ
ಪ್ರಮುಖ ಸುದ್ದಿ

ಅನಧಿಕೃತ ಪಿಜಿಗಳ ವಿರುದ್ಧ GBA ಕಠಿಣ ಕ್ರಮ: ಕರೆಂಟ್‌, ನೀರಿನ ಸಂಪರ್ಕ ಕಡಿತಕ್ಕೆ ಸಿದ್ಧತೆ

October 3, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.