Dharwad: ಬಿಜೆಪಿಯ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ (Yogesh Gowda murder case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್
ಕುಲಕರ್ಣಿ ಅವರಿಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರ ನಾಶ ಮಾಡಿದ್ದಾರೆಂದು ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಮಾಡಲಾಗಿದ್ದ ಆರೋಪಗಳ
ಬಗ್ಗೆ ಮರು ತನಿಖೆ ಮಾಡುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ. ಜಾಮೀನಿನ ಮೇಲೆ ಹೊರಗಿರುವ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಈಗ ಮತ್ತೆ ವಿಚಾರಣೆ ಎದುರಿಸಲಿದ್ದಾರೆ.

ಯೋಗಿಶ್ ಗೌಡ ಕೊಲೆ ನಡೆದು ಏಳು ವರ್ಷ ಕಳೆದಿದ್ದು, ಈಗಾಗಲೇ ಸಾಕ್ಷಿ ನಾಶ ಮಾಡಿದ ಆರೋಪದ ಮೇಲೆ ಶಾಸಕ ವಿನಯ ಕುಲಕರ್ಣಿ ಜೈಲಿಗೆ (Jail) ಹೋಗಿ ಜಾಮೀನು ಮೇಲೆ ಹೊರಗೆ ಬಂದಿದ್ದಾರೆ.
2016ರಲ್ಲಿ ಯೋಗಿಶಗೌಡ ಕೊಲೆ ನಡೆದಿದ್ದ ಪ್ರಕರಣದ ರಾಜಿ ಸಂಧಾನ ಮಾಡಲು ಕೆಲವು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದ ಆರೋಪ ಕೇಳಿ ಬಂದಿತ್ತು. ಯೋಗಿಶಗೌಡ ಸಹೋದರ ಗುರುನಾಥಗೌಡ
(Gurunath Gowda) ಕೆಲ ಪೊಲೀಸ್ ಅಧಿಕಾರಿಗಳ ವಿರುದ್ದ ಕೋರ್ಟ್ಗೆ ಹೋಗಿದ್ದರು. ಆಗ ಸಾಕ್ಷಿ ನಾಶದ ಬಗ್ಗೆ ಪ್ರಕರಣ (Yogesh Gowda murder case) ದಾಖಲಿಸಲು ಕೋರ್ಟ್ ಸೂಚಿಸಿತ್ತು.
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ, ಡಿವೈಎಸ್ಪಿ ಸುಲ್ಪಿ ಸೇರಿ ಅನೇಕ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಆಗಿನ ಡಿಸಿಪಿ ಗುನಾರೆ ನೇತೃತ್ವದ
ತಂಡ, ಬಿ ರಿಪೋರ್ಟ್ ಸಲ್ಲಿಸಿತ್ತು. ಬಿ ರಿಪೋರ್ಟ್ (B Report) ವಿರುದ್ಧ ಮರಳಿ ಗುರುನಾಥಗೌಡ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ, ಈ ಪ್ರಕರಣದ
ಮರು ತನಿಖೆಗೆ ಆದೇಶ ಮಾಡಿದೆ. ಮರು ತನಿಖೆಗೆ ಆದೇಶ ಆಗಿರುವುದರಿಂದ ಶಾಸಕ ವಿನಯ ಕುಲಕರ್ಣಿ ಗೆ ದೊಡ್ಡ ಸಂಕಷ್ಟ ಎದುರಾಗಿದೆ.

ಸದ್ಯ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರಿಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ನಾಶ ಮಾಡಿರುವ ಆರೋಪದ ಮೇಲೆ ಧಾರವಾಡ ಜಿಲ್ಲೆಗೆ ಪ್ರವೇಶ ನೀಡಲಾಗಿಲ್ಲ.
ವಿಧಾನಸಭಾ ಚುಣಾವಣೆಯ ವೇಳೆ ಪ್ರಚಾರ ಮಾಡಲು ಅವಕಾಶ ಕೋರಿದ್ದರೂ, ನ್ಯಾಯಾಲಯ ಶಾಸಕ ವಿನಯ್ ಕುಲಕರ್ಣಿ ಅವರ ಮನವಿಯನ್ನು ತಳ್ಳಿಹಾಕಿತ್ತು.
ಇದನ್ನು ಓದಿ: ಕಣ್ಣಿನ ತೊಂದರೆಯಿಂದ ಬಳಲುತ್ತಿರುವಿರಾ? ಹಾಗಾದ್ರೆ ಕಣ್ಣಿನ ಆರೋಗ್ಯಕ್ಕೆ ಈ ಆಹಾರಗಳನ್ನು ಸೇವಿಸಿ