Mumbai : ಉತ್ತರ ಪ್ರದೇಶ(Uttar pradesh) ರಾಜ್ಯ ಚಲನಚಿತ್ರ ಸ್ನೇಹಿ ರಾಜ್ಯ ಎಂದು ಪ್ರಚುರಪಡಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adithyanath) ಅವರು ತಮ್ಮ ರಾಜ್ಯವನ್ನು ಚಲನಚಿತ್ರ ನಿರ್ಮಾಣ ತಾಣವಾಗಿ ಅನ್ವೇಷಿಸಲು ಮನರಂಜನಾ ಉದ್ಯಮದ ಪ್ರಮುಖ ನಟ-ನಟಿಯರನ್ನು ಗುರುವಾರ ಆಹ್ವಾನಿಸಿ, ಕೈ ಮೀಲಾಯಿಸಿದ್ದಾರೆ.
ಈ ಹಿಂದಿನಿಂದಲೂ ಸಿಎಂ ಯೋಗಿ ಆದಿತ್ಯನಾಥ್ ಅವರು ಸಿನಿಮಾಗಳು(Yogi offer to Bollywood cinema), ಸಿನಿಮಾ ಕಲಾವಿದರಿಗೆ ವಿಶೇಷ ಆದ್ಯತೆ ನೀಡುತ್ತ ಬಂದಿದ್ದಾರೆ.
ಅದೇ ರೀತಿ ಈ ಬಾರಿ ಮುಂಬೈನಲ್ಲಿ(Mumbai) ಬಾಲಿವುಡ್(Bollywood) ಸದಸ್ಯರೊಂದಿಗೆ ಸಂವಾದ ನಡೆಸಿದ ಅವರು, ನಿಮ್ಮ ಇಬ್ಬರು ಚಿತ್ರರಂಗದ ಸದಸ್ಯರನ್ನು ನಾವು ಸಂಸದರನ್ನಾಗಿ ಮಾಡಿದ್ದೇವೆ.
ನೀವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ನಮಗೆ ತಿಳಿದಿದೆ. ಸಮಾಜವನ್ನು ಒಗ್ಗೂಡಿಸುವಲ್ಲಿ ಮತ್ತು ದೇಶದ ಏಕತೆ,
ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಸಿನಿಮಾ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.

ಮುಂದಿನ ತಿಂಗಳು ಲಕ್ನೋದಲ್ಲಿ(Lucknow) ನಡೆಯಲಿರುವ ಹೂಡಿಕೆದಾರರ ಶೃಂಗಸಭೆಯನ್ನು ಉತ್ತೇಜಿಸಲು ಮುಂಬೈಗೆ ಭೇಟಿ ನೀಡುತ್ತಿರುವ ಸಿಎಂ ಆದಿತ್ಯ ಆದಿತ್ಯನಾಥ್,
ಉತ್ತರ ಪ್ರದೇಶವು ಚಲನಚಿತ್ರ ಸ್ನೇಹಿ ರಾಜ್ಯವಾಗಿ ಹೊರಹೊಮ್ಮಿದೆ ಮತ್ತು ಸಿನಿಮಾಗಳು,
ಸಿನಿಮಾ ನಟ-ನಟಿಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಸಿನಿಮಾ ರಂಗದ ಕಲಾವಿದರನ್ನು ಪ್ರೋತ್ಸಾಹಿದೆ ಎಂದು ಹೇಳಿದರು.
ಬಾಲಿವುಡ್ ಚಿತ್ರರಂಗದ ಖ್ಯಾತ ನಟ-ನಟಿಯರನ್ನು ಉದ್ದೇಶಿಸಿ ಮಾತನ್ನು ಮುಂದುವರೆಸಿದ ಸಿಎಂ ಯೋಗಿ ಆದಿತ್ಯನಾಥ್,
ತಮ್ಮ ಸರ್ಕಾರದ ಚಲನಚಿತ್ರ ನೀತಿಯ ಅಡಿಯಲ್ಲಿ, ಉತ್ತರಪ್ರದೇಶದಲ್ಲಿ ವೆಬ್ ಸರಣಿಯನ್ನು(Yogi offer to Bollywood cinema) ಚಿತ್ರೀಕರಿಸಿದರೆ,
ಇದನ್ನೂ ಓದಿ: https://vijayatimes.com/siddaramaiah-is-called-tagaru/
ಅದಕ್ಕೆ ಶೇಕಡಾ 50 ಪರ್ಸೆಂಟ್ ರಷ್ಟು ಸಬ್ಸಿಡಿ(Subsidy) ನೀಡಲಾಗುವುದು ಎಂದು ಹೇಳಿದರು. ಅಂತೆಯೇ, ಸ್ಟುಡಿಯೋಗಳು ಮತ್ತು ಫಿಲ್ಮ್ ಲ್ಯಾಬ್‌ಗಳನ್ನು ಸ್ಥಾಪಿಸಲು ಶೇಕಡಾ 25 ಪರ್ಸೆಂಡ್ ರಷ್ಟು ಸಹಾಯಧನ ನೀಡಲಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿರ್ಮಾಪಕ ಬೋನಿ ಕಪೂರ್(Boni kapoor),
ಗೋರಖ್‌ಪುರ ಲೋಕಸಭಾ ಸಂಸದ, ನಟ ರವಿ ಕಿಶನ್, ಭೋಜ್‌ಪುರಿ ನಟ ದಿನೇಶ್ ಲಾಲ್ ನಿರ್ಹುವಾ, ಹಿನ್ನೆಲೆ ಗಾಯಕರಾದ ಸೋನು ನಿಗಮ್(Sonu nigam), ಕೈಲಾಶ್ ಖೇರ್, ನಟ ಸುನೀಲ್ ಶೆಟ್ಟಿ(Sunil shetty), ಚಿತ್ರ ನಿರ್ಮಾಪಕರಾದ ಚಂದ್ರಪ್ರಕಾಶ್ ದ್ವಿವೇದಿ,
ಮಧುರ್ ಭಂಡಾರ್ಕರ್ ಮತ್ತು ರಾಜಕುಮಾರ್ ಸಂತೋಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಯೋಗಿ ಆದಿತ್ಯನಾಥ್ ಹಾಗೂ ಚಿತ್ರ ಕಲಾವಿದರ ಭೇಟಿಯನ್ನು ಕೆಲವರು ಪ್ರಶ್ನಿಸಿದ್ದು, ಇದೇನು ರಾಜಕೀಯ ಅಜೆಂಡವಾ? ಎಂದು ಕೇಳಿದ್ದಾರೆ. ಇನ್ನು ಕೆಲವರು ಚಿತ್ರರಂಗದವರಿಗೆ ಪ್ರೋತ್ಸಾಹ ನೀಡುವ ಯೋಗಿ ಆದಿತ್ಯನಾಥ್ ಅವರ ಚಿಂತನೆ ಮೆಚ್ಚುವಂತದ್ದು ಎಂದು ಹೇಳಿದ್ದಾರೆ.