ಪುತ್ತೂರು, ಡಿ. 02: ಶ್ವಾಸಕೋಶದ ಸಮಸ್ಯೆಯಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಸಕಲೇಶಪುರದ ಅರೇಹಳ್ಳಿ ಮೂಲದ ೨೨ ವರ್ಷದ ಬಾಲಕಿ ಸುಹಾನಾ ಎಂಬಾಕೆಯನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ವಿಶೇಷ ಆಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ನಲ್ಲಿ ಬೆಂಗಳೂರಿನ ವೈಟ್ಫೀಲ್ಡ್ನ ವೈದೇಹಿ ಆಸ್ಪತ್ರೆಗೆರವಾನಿಸಿದ್ದಾರೆ.
ಪುತ್ತೂರು ಸಂಚಾರಿ ಪೋಲೀಸರು ನಗರ ವ್ಯಾಪ್ತಿಯಲ್ಲಿ ಈ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಆಂಬುಲೆನ್ಸ್ ಸಾಗಿ ಬರುವ ಮಾರ್ಗದಲ್ಲಿ ಆಯಾ ಊರಿನ ನಾಗರೀಕರು ಹಾಗೂ ಸಂಘಟನೆಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.