ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾಮಾನ್ಯ ನಾಗರಿಕರಿಗೆ ತೊಂದರೆ ನೀಡುವ ಜಿರೋ (zerotraffic CM riding quietly) ಟ್ರಾಫಿಕ್ನಲ್ಲಿ ನಾನು ಸವಾರ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿ,

ಜನಸಾಮಾನ್ಯರ ಮನಗೆದ್ದಿದ್ದರು. ಆದರೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ದಿಲ್ಲದೇ ಜಿರೋ ಟ್ರಾಫಿಕ್ (zerotraffic CM riding quietly) ಸವಾರಿ ಮಾಡುತ್ತಿದ್ದಾರೆ.
ಸೋಮವಾರ ದಾವಣಗೆರೆಗೆ ಭೇಟಿ ನೀಡದ್ದ ಸಿಎಂ ಸಿದ್ದರಾಮಯ್ಯನವರು ತಮ್ಮ ವಾಹನ ಮುಕ್ತವಾಗಿ ಸಂಚರಿಸಲು ನಾಗರಿಕರು ನಗರದ ಮುಖ್ಯರಸ್ತೆಯಾಗಿರುವ ಹದಡಿ ರಸ್ತೆಯಲ್ಲಿ ಸುಡು ಬಿಸಿಲಿನಲ್ಲಿ ಬಲವಂತವಾಗಿ ನಿಲ್ಲುವಂತೆ
ಮಾಡಿದರು. ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಝೀರೋ ಟ್ರಾಫಿಕ್ ಮೂಲಕ ಸಾಗಿದರು. ಈ ಸಂಬಂಧ ಅನೇಕ ಜನರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ನಾನು ಕಾಲೇಜಿನಿಂದ ಟಿಸಿ ಸಂಗ್ರಹಿಸಬೇಕಾಗಿತ್ತು ಪೊಲೀಸರು ಮುಖ್ಯರಸ್ತೆಯನ್ನೇ ಗಂಟೆಗಳ ಕಾಲ ತಡೆದಿದ್ದರಿಂದ ಚಲಿಸಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರಿಗೆ ಉಂಟಾಗುತ್ತಿರುವ ಈ
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಿದ್ದರಾಮಯ್ಯ ಅವರು ಈ ಹಿಂದೆ ನೀಡಿದ ಹೇಳಿಕೆಗಳನ್ನು ಅನುಸರಿಸಬೇಕು ಎಂದು ಡಿಆರ್ಎಂ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ನೇತ್ರಾವತಿ ಒತ್ತಾಯಿಸಿದರು.
ಇದನ್ನು ಓದಿ: ಜೂನ್ 7 ವಿಶ್ವ ಆಹಾರ ಸುರಕ್ಷತಾ ದಿನ : ಈ ದಿನದ ಇತಿಹಾಸ, ಮಹತ್ವ ಬಗ್ಗೆ ಇಲ್ಲಿದೆ ಮಾಹಿತಿ
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿರೋ ಟ್ರಾಫಿಕ್ ಸವಾರಿಯ ಕುರಿತು ವ್ಯಂಗ್ಯವಾಡಿರುವ ರಾಜ್ಯ ಬಿಜೆಪಿ, ಇದು ರಿವರ್ಸ್ಗೇರ್ ಸರ್ಕಾರ ಎಂದು ನಾವು ಅಂದೇ ಹೇಳಿದ್ದೆವು. ಈಗದು ಪ್ರತ್ಯಕ್ಷವಾಗಿ ಸಾಬೀತಾಗುತ್ತಿದೆ
ಅನ್ನೂವುದೂ ರಾಜ್ಯದ ಪಾಲಿಗೆ ಖೇದಕರ. ಜೀರೋ ಟ್ರಾಫಿಕ್ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದು ಸುದ್ದಿಯಾಗೋದಕ್ಕೆ ಮಾತ್ರ. ಈಗ ಸದ್ದಿಲ್ಲದೆ ಮತ್ತೆ ಜೀರೋ ಟ್ರಾಫಿಕ್ನಲ್ಲಿ ಓಡಾಡುತ್ತಿದ್ದಾರೆ ಎಂದು
ಲೇವಡಿ ಮಾಡಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯನವರ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ರೇಣುಕಾ ಎಂಬುವವರು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳೂ ಅಷ್ಟೇ ಮಂತ್ರ ಹೇಳಕ್ಕೆ ಬದನೆಕಾಯಿ ತಿನ್ನಕ್ಕೇ ಎಲ್ಲರಿಗೂ
ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ ಏನಿದ್ದರೂ ಅಧಿಕಾರ ಎಂದು ಟೀಕಿಸಿದ್ದಾರೆ.
ಮಹೇಶ