ಚೆನ್ನೈ, ನ. 3: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್ ಗೆಲುವಿಗೆ ಪ್ರಾರ್ಥಿಸಿ, ಅವರ ಪೂರ್ವಜರು ವಾಸವಿದ್ದ ಚೆನ್ನೈನ ತುಲಸೇಂದ್ರಪುರಂನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಚೆನ್ನೈನಿಂದ 390 ಕಿ.ಮೀ ದೂರದಲ್ಲಿರುವ ತುಲಸೇಂದ್ರಪುರಂ ಗ್ರಾಮದಲ್ಲಿ ಕಮಲಾ ಹ್ಯಾರಿಸ್ ಪೂರ್ವಜರು ವಾಸವಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಆರಂಭಕ್ಕೂ ಮುನ್ನ ತುಲಸೇಂದ್ರಪರಂ ಗ್ರಾಮದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ, ಕಮಲಾ ಹ್ಯಾರಿಸ್ ಗೆಲುವಿಗಾಗಿ ಪ್ರಾರ್ಥಿಸಲಾಯಿತು.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಮಲಾ ಹ್ಯಾರಿಸ್ ಅವರ ಸಂಬಂಧಿ ಡಾ.ಸರಳಾ ಗೋಪಾಲನ್, ತುಲಸೇಂದ್ರಪುರಂ ದೇವಸ್ಥಾನ ತಮ್ಮ ತಂದೆ ಕುಟುಂಬದ ದೇವತೆ. ಹೀಗಾಗಿ ನಮ್ಮ ಕುಟುಂಬದಲ್ಲಿ ಮದುವೆ ಅಥವಾ ಯಾವುದೇ ಶುಭ ಸಮಾರಂಭ ನಡೆದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದಾಗಿ ತಿಳಿಸಿದರು.