vijaya times advertisements
Visit Channel

ಕವರ್‌ ಸ್ಟೋರಿ

coverstory

`ಡೊನೇಷನ್‌’ ಹೆಸರಿನಲ್ಲಿ ಮುಗ್ದ ಜನರನ್ನು ಯಾಮಾರಿಸುತ್ತಿದ್ದ ಗ್ಯಾಂಗ್ ಅನ್ನು ಬಯಲಿಗೆಳೆದ ವಿಜಯ ಟೈಮ್ಸ್ ತಂಡ!

ಡೊನೇಷನ್‌ ಹೆಸರಲ್ಲಿ ಭಾರಿ ದೋಖಾ ಮಾಡುತ್ತಿದ್ದವರ ಹೆಡೆಮುರಿ ಕಟ್ಟಿದ ವಿಜಯ ಟೈಮ್ಸ್ ತಂಡ.
ಡೊನೇಷನ್‌ ದಂಧೆಯ ಭಯಾನಕ ರೂಪ ಇಲ್ಲಿದೆ ನೋಡಿ.
ದಾನದ ಹೆಸರಲ್ಲಿ ಮಾಡ್ತಾರೆ ಮೋಸ ಎಚ್ಚರ!
ಅಶ್ರಮದ ಹೆಸರಲ್ಲಿ ಹಣ ಗುಳುಂ!

ಕೋಲಾರದ ಬಂಗಾರಪೇಟೆಯಲ್ಲಿ ವಿಜಯ ಟೈಮ್ಸ್ ಬಯಲು ಮಾಡಿತು ವಿಷ ಬೆಲ್ಲದ ರಹಸ್ಯ!

ಕೋಲಾರದ ಬಂಗಾರಪೇಟೆಯ ಆದಿನಾರಾಯಣ ಟ್ರೇಡರ್ಸ್ನಲ್ಲಿ ನಕಲಿ ಮಿಶ್ರಿತ ಬೆಲ್ಲ ತಯಾರಿಸುತ್ತಿದ್ದದ್ದನ್ನು ಪತ್ತೆಹಚ್ಚಿದ ವಿಜಯ ಟೈಮ್ಸ್ ತಂಡ ಬಯಲು ಮಾಡಿದೆ.

‘ವಿಜಯ ಟೈಮ್ಸ್ ಇಂಪ್ಯಾಕ್ಟ್’ ಅಪರೇಷನ್ ಖೋಟಾ ನೋಟು ! ಬಯಲಾಯ್ತು ಕೋಟೆ ನಾಡಿನ ರಾಜಕಾರಣಿಯ ದಂಧೆಯ ರಹಸ್ಯ, ಪ್ರಮುಖ ಆರೋಪಿ ಚಂದ್ರಶೇಖರನ ಬಂಧನ

ಕಳೆದ ಕೆಲವು ದಿನಗಳ ಹಿಂದೆ ವಿಜಯಲಕ್ಷ್ಮಿ ಶಿಬರೂರು ನೇತೃತ್ವದ ವಿಜಯ ಟೈಮ್ಸ್‌ ಕವರ್‌ ಸ್ಟೋರಿ ತಂಡ ಚಿತ್ರದುರ್ಗದಲ್ಲಿರುವ ಖೋಟಾ ನೋಟು ಅಡ್ಡೆಯಲ್ಲಿ ಸ್ಟಿಂಗ್‌ ಆಪರೇಷನ್‌ ನಡೆಸಿತ್ತು. ಈ ಕಾರ್ಯಚರಣೆಯು ರಾಜ್ಯಾದ್ಯಂತ ಸಾಕಷ್ಟು ಸಂಚಲನವನ್ನು ಮೂಡಿಸಿತ್ತು. ಈ ದಂಧೆಯನ್ನು ವಿಜಯ ಟೈಮ್ಸ್‌ ತಂಡ ಬಯಲು ಮಾಡಿದ ಬೆನ್ನಲ್ಲೇ ಚಿತ್ರದುರ್ಗ ಪೊಲೀಸರು ಖೋಟಾ ನೋಟು ದಂಧೆಯ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗ ನಗರಸಭೆಯ  ಸದಸ್ಯನಾಗಿರುವ ಚಂದ್ರಶೇಖರ್‌ ಅಲಿಯಾಸ್‌ ಖೋಟಾ ನೋಟು ಚಂದ್ರು  ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರ್‌ಟಿಓ ಲೂಟಿ. ಲಜ್ಜೆಗೆಟ್ಟವರ ಹಗಲು ದರೋಡೆ ನೋಡಲು ಹೇಸಿಗೆಯಾಗುತ್ತಿದೆ. ಹೊಸಪೇಟೆ, ಕೊಪ್ಪಳ, ಚಿತ್ರದುರ್ಗ ಆರ್‌ಟಿಓಗಳ ಲಂಚಾವತಾರ ವಿಜಯಟೈಮ್ಸ್‌ನಲ್ಲಿ ಲೈವಾಗಿ ಬಯಲು

ನೆರೆಯ ಯಾವ ರಾಜ್ಯಗಳಲ್ಲಿ ಆರ್‌ಟಿಓಗಳು ಲಂಚ ಪಡೆಯಲ್ಲ. ಕೇರಳ, ತಮಿಳುನಾಡು, ಆಂಧ್ರ, ಗೋವಾ, ಗುಜರಾತ್‌ ಇಲ್ಲೆಲ್ಲೂ ಆರ್‌ಟಿಓ ಲೂಟಿ ಇಲ್ಲವೇ ಇಲ್ಲ. ಆದ್ರೆ ಕರ್ನಾಟಕದ ರಸ್ತೆಯಲ್ಲಿ ಓಡಾಡೋದು ಅಂದ್ರೆ ಲಾರಿ ಚಾಲಕರು ಭಯಬೀಳ್ತಾರೆ, ಹೇಸಿಗೆ ಪಡ್ತಾರೆ. ಇದೇ ರೀತಿ ಮುಂದುವರೆದ್ರೆ ನಮ್ಮ ರಾಜ್ಯಕ್ಕೆ ಲಾರಿಗಳು ಬರೋಕೆ ಹಿಂದೇಟು ಹಾಕಬಹುದು.

ಎಚ್ಚರ! ಕಾಳಲ್ಲೂ ಕಲಬೆರಕೆ ಮಾಡ್ತಾರೆ, ಸಾಸಿವೆ ಜೀರಿಗೇನೂ ಬಿಟ್ಟಿಲ್ಲ ಕಲಬೆರಕೆ ಖದೀಮರು. ಈ ಕಲಬೆರಕೆ ಕಳ್ಳರ ಬಣ್ಣ ಬಯಲು ಮಾಡಿದೆ ವಿಜಯಟೈಮ್ಸ್‌.

ಸಾಸಿವೆ ಜೀರಿಗೆ, ಕಾಳುಮೆಣಸನ್ನೂ ಬಿಟ್ಟಿಲ್ಲ ಕಲಬೆರಕೆ ಖದೀಮರು. ಲಾಭಕ್ಕಾಗಿ ಜನರಿಗೆ ವಿಷ ಹಾಕೋ ವಿಷ ಆಹಾರ ಮಾಫಿಯಾ ಮಂದಿ ನಾವು ನಿತ್ಯ ಬಳಸೋ ಕಾಳುಗಳು, ಧಾನ್ಯಗಳಲ್ಲೂ ಕಲಬೆರಕೆ ಮಾಡುತ್ತಿದ್ದಾರೆ. ಜನರಿಗೆ ವಿಷವುಣಿಸುವ ಇಂಥಾ ಕಲಬೆರಕೆ ದಂಧೆಕೋಮಾಡೋ ಕಳ್ಳರ ಬಣ್ಣ ಬಯಲು ಮಾಡಿದೆ ವಿಜಯಟೈಮ್ಸ್‌. ಆಹಾರ ಪದಾರ್ಥಗಳಲ್ಲಿ ಅಸಲಿ ಯಾವುದು ನಕಲಿಯಾವುದು ಅಂತ ಪತ್ತೆ ಹಚ್ಚಲು ವಿಜಯಟೈಮ್ಸ್‌ ಹೇಳಿಕೊಡುತ್ತೆ ಸರಳ ಸೂತ್ರದ ಬಗ್ಗೆ ಮುಂದೆ ಓದಿ

ಸಿಹಿತಿಂಡಿಯ ವಿಷ ರಹಸ್ಯ ! ಸಿಹಿತಿಂಡಿಗೆ ಬಳಸೋ ತುಪ್ಪ, ಖೋವಾನೂ ನಕಲಿ, ಕಿಲ್ಲರ್ ಕಲರ್ ಬಳಸ್ತಾರೆ ಜೋಕೆ. ವಿಜಯಟೈಮ್ಸ್ನಿಂದ ಸಿಹಿ ತಿಂಡಿಯೊಳಗಿನ ಕೊಳಕು ಸೀಕ್ರೆಟ್ ಬಯಲು.

ಸಿಹಿ ತಿಂಡಿ ಪ್ರಿಯರೇ ನಿಮಗಿದೆ ಶಾಕಿಂಗ್ ನ್ಯೂಸ್ ! ನಕಲಿ ಸಿಹಿತಿಂಡಿ ತಯಾರು ಮಾಡೋ ಫ್ಯಾಕ್ಟರಿಗಳಿವೆ. ಕಡಿಮೆ ಬೆಲೆಯ ಸಿಹಿತಿಂಡಿಯೊಳಗಿದೆ ವಿಷ ರಾಸಾಯನಿಕ !. ನಕಲಿ ಹಾಲು, ಗೋಡೆಗೆ ಬಳಿಯೋ ವಾಲ್ಪುಟ್ಟಿ ಹಾಕ್ತಾರೆ. ತುಪ್ಪ, ಖೋವಾನೂ ನಕಲಿ, ಕಿಲ್ಲರ್ ಕಲರ್ ಬಳಸ್ತಾರೆ ಜೋಕೆ. ವಿಷಯುಕ್ತ ನಕಲಿ ಸಿಹಿ ತಿಂದ್ರೆ ನಿಮ್ಮ ಆರೋಗ್ಯ ಢಮಾರ್. ಕಿಡ್ನಿ, ಲಿವರ್, ಎಲುಬಿನ ಜೊತೆ ಚರ್ಮ, ಕರುಳೂ ಹಾಳಾಗುತ್ತೆ

ಅಕ್ರಮ ಗೋಹತ್ಯೆಗೆ ತಡೆ ಎಂದು ?

ವಿಜಯ ಟೈಮ್ಸ್ ಕವರ್‌ ಸ್ಟೋರಿತಂಡ, ಧ್ಯಾನ ಫೌಂಡೇಶನ್ ಸದಸ್ಯರೊಂದಿಗೆ ನೈಜ ಸಾಕ್ಷ್ಯವನ್ನು ಕಂಡುಹಿಡಿಯಲು ಕಸಾಯಿಖಾನೆಯ ಕಡೆಗೆ ಹೊರಟರು. ಕಸಾಯಿಖಾನೆಯ ಇದರ ಖಚಿತತೆಗಾಗಿ ಕವರ್‌ ಸ್ಟೋರಿ ತಂಡವು ಬಾಗೇಪಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿತು. ಪೋಲಿಸರೊಂದಿಗೆ ತೆರಳಿದ ತಂಡವು ಅಕ್ರಮ ಗೋಹತ್ಯೆನ್ನು ಬಯಲಿಗೆಳೆಯಿತು. ಕಾರ್ಮಿಕರ ಅಮಾನವೀಯ ವರ್ತನೆಯಿಂದಾಗಿ, ಶೆಡ್ ಗಬ್ಬು ನಾರುತ್ತಿತ್ತು. ಸಂಪೂರ್ಣ ಶೆಡ್ ಮತ್ತು ಅದರ ಎದುರಿಗಿರುವ ಕಾರ್ಮಿಕರ ಮನೆಯ ಮೇಲೂ ದಾಳಿ ನಡೆಸಿ ಅಕ್ರಮವನ್ನು ಬಯಲಿಗೆಳೆಯಲಾಯಿತು. ಈ ಕಾರ್ಯಚರಣೆಯಲ್ಲಿ ಒಂದು ಎತ್ತನ್ನು ರಕ್ಷಿಸಿ ಹತ್ತಿರದ ಗೋಶಾಲೆಗೆ ಸ್ಥಳಾಂತರಿಸಳಾಯಿತು.

ಸಾಕು ನಿಲ್ಲಿಸಿ ಶೋಷಣೆ, ನಮ್ಮ ಹಕ್ಕು ನಮಗೆ ನೀಡಿ : ಹಾಲಕ್ಕಿ ಹಕ್ಕೋತ್ತಾಯ.

ಸಿಡಿದೆದ್ದಿದ್ದಾರೆ ಉತ್ತರ ಕನ್ನಡದ ಹಾಲಕ್ಕಿ ಒಕ್ಕಲು ಮಕ್ಕಳು. ಶತಮಾನಗಳ ಶೋಷಣೆಯ ವಿರುದ್ಧ ಹೋರಾಡಲು ಸಿದ್ಧ. ವಿಜಯಟೈಮ್ಸ್ ಅಧ್ಯಯನದಲ್ಲಿ ಬಯಲಾಯ್ತು ಕಟು ಸತ್ಯ! ಮೂಲಭೂತ ಸೌಕರ್ಯಕ್ಕೂ ಪರದಾಡುತ್ತಿದ್ದಾರೆ ಹಾಲಕ್ಕಿ ಮಕ್ಕಳು. ಪರಿಶಿಷ್ಟ ಪಂಗಡ ಸ್ಥಾನಮಾನ ನೀಡದೆ ಹಾಲಕ್ಕಿಗಳಿಗೆ ಅನ್ಯಾಯ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಭಾರೀ ಹಿಂದುಳಿದಿದ್ದಾರೆ ಹಾಲಕ್ಕಿಗಳು. ಬುಡಕಟ್ಟು ಜನಾಂಗದವರಾಗಿದ್ರೂ ಇನ್ನೂ ಸಿಗಲಿಲ್ಲ ಎಸ್ಟಿ ಪಟ್ಟ. ರಾಜಕಾರಣಿಗಳು ಭರವಸೆಯಿಂದ ಮೋಸ ಹೋಗಿದ್ರು ಹಾಲಕ್ಕಿಗಳು

ಅಂಗನವಾಡಿ ಆಹಾರ ರಹಸ್ಯ ಬಯಲು ! ಆಹಾರ ಸುರಕ್ಷತಾ ಸರ್ಟಿಫಿಕೇಟ್‌ ಇಲ್ಲದೆಯೇ ಮಕ್ಕಳ ಆಹಾರ ತಯಾರಿಕೆ. ವಿಜಯಟೈಮ್ಸ್‌ ರಿಯಾಲಿಟಿ ಚೆಕ್‌ನಲ್ಲಿ ಬಯಲಾಯ್ತು ಆಹಾರ ಸೀಕ್ರೆಟ್ಸ್.

ಹಾಸನ ಭಾಗದ ಮಂದಿ ಅಂಗನವಾಡಿಯಲ್ಲಿ ಸರಬರಾಜಾಗೋ ಪೌಷ್ಟಿಕ ಆಹಾರ  ಪುಡಿಯನ್ನು ಹಸುಗಳಿಗೆ ಹಾಕ್ತಿದ್ದಾರೆ ಅನ್ನೋ ದೂರು ಕೂಡ ಬರುತ್ತಿದೆ. ಇದಕ್ಕೆ ಇಲ್ಲಿನ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯಲ್ಲಿ ಮೂವತ್ತು ವರ್ಷಗಳಿಂದ ಝಾಂಡಾ ಊರಿರುವ ಕೆಲ  ಅಧಿಕಾರಿಗಳ ಕಮಿಷನ್ ದಂಧೆ, ಅರ್ಹತೆಯೇ ಇಲ್ಲದೆ ನಿಯಮಮೀರಿ ಉಪನಿರ್ದೇಶಕ ಸ್ಥಾನದಲ್ಲಿ ಕೂತಿರುವ ಅಧಿಕಾರಿ ಲಂಚಕ್ಕಾಗಿ ಮಾಡ್ತಿರೋ ಲಜ್ಜೆಗೆಟ್ಟ ವ್ಯವಹಾರಗಳೇ ಕಾರಣ ಅನ್ನೋ ಆರೋಪ ಬಲವಾಗಿ ಕೇಳಿ ಬರುತ್ತಿದೆ