English English Kannada Kannada

ದೇಶ-ವಿದೇಶ

ಪಾಕಿಸ್ತಾನ ಗೆಲುವಿಗೆ ಸಂಭ್ರಮಾಚರಿಸಿದರೆ ಅಂತವರ ವಿರುದ್ದ ದೇಶದ್ರೋಹಿ ಪ್ರಕರಣ

ಕ್ರಿಕೆಟ್ ಪಂದ್ಯಾವಳಿಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಮತ್ತು ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ರಾಜಸ್ಥಾನದ ಉದಯಪುರದ ಖಾಸಗಿ ಶಾಲೆಯ ಶಿಕ್ಷಕ ಮತ್ತು ಉತ್ತರ ಪ್ರದೇಶದ ಆಗ್ರಾದಲ್ಲಿ ಓದುತ್ತಿರುವ ಕಾಶ್ಮೀರದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬುಧವಾರ ಬಂಧಿಸಲಾಗಿದೆ.

ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ದ ನವಾಬ್ ಮಲ್ಲಿಕ್ ಆರೋಪ

ಅಕ್ಟೋಬರ್ 2ರಂದು ಮುಂಬೈನಿಂದ ಗೋವಾಕ್ಕೆ ಹೊರಟ್ಟಿದ್ದ ಐಶರಾಮಿ ಹಡಗಿನಲ್ಲಿ ಗಡ್ಡದಾರಿಯೊಬ್ಬ ತನ್ನ ಸ್ನೇಹಿತೆಯೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಇದೆ. ಪ್ರಕರಣದಲ್ಲಿ ಆತನನ್ನು ಏಕೆ ಬಂಧಿಸಿಲ್ಲ. ಆತ ಡ್ರಗ್ಸ್ ಮಾಫೀಯಾದ ಕಿಂಗ್ ಪಿನ್ ಎಂದು ಹೇಳಲಾಗುತ್ತಿದೆ. ಎನ್‍ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು ಗೋವಾ ಮೂಲದ ಡ್ರಗ್ಸ್ ಮಾಫೀಯಾ ಬಗ್ಗೆ ಸದಾ ಕಾಲ ಕಣ್ಣು ಮುಚ್ಚಿಕೊಂಡು ಕೆಲಸ ಮಾಡುತ್ತಾರೆ ಎಂದು ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ.

ಭೀಕರ ರಸ್ತೆ ಅಪಘಾತ 3ಸಾವು

ರಸ್ತೆ ಅಪಘಾತ ತೀವ್ರವಾಗಿದ್ದು, ವಾಹನಗಳು ಒಂದರ ಮೇಲೊಂದು ನುಗ್ಗಿ ಸಂಪೂರ್ಣ ಜಖಂಗೊಂಡಿವೆ. ಅಪಘಾತದಲ್ಲಿ ಟ್ರಕ್ ಅಲ್ಲದೆ, ಕೆಲವು ನಾಲ್ಕು ಚಕ್ರದ ವಾಹನಗಳು ಸಹ ಜಖಂಗೊಂಡಿವೆ ಎಂದು ಹೇಳಲಾಗುತ್ತಿದೆ. ಅಪಘಾತದ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.

tvs-scooty

ಪೆಟ್ರೋಲ್‌ ಬೆಲೆ ಏರಿಕೆ ಹಿನ್ನಲೆ, ದ್ವಿಚಕ್ರ ವಾಹನ ಖರೀದಿಯಲ್ಲಿಇಳಿಕೆ

ಕಳೆದ ಮೂರು ವರ್ಷದ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈ ಬಾರಿ ದ್ವಿಚಕ್ರ ವಾಹನ ಖರೀದಿದಾರರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಕೋವಿಡ್‌(Covid19) ಅಲೆಯ ಹೊಡೆತದಿಂದಾದ ಆರ್ಥಿಕ ಹಿಂಜರಿತ ಹಾಗೂ ಉದ್ಯೋಗ(Job) ನಾಶಗಳು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಆರ್ಯನ್ ಖಾನ್ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್

 ಪ್ರಭಾಕರ್ ಸೈಲ್ ಎಂಬಾತ 25 ಕೋಟಿ ರೂಪಾಯಿ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಎನ್ ಸಿ ಬಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿರುವ ಬಗ್ಗೆಯೂ ಆರೋಪಿಸಿದ್ದಾನೆ.

ಅಮರಿಂದರ್ ಸಿಂಗ್ ಹೊಸ ಪಕ್ಷ ಘೋಷಣೆ

“ನವಜೋತ್ ಸಿಂಗ್ ಸಿಧು ಅವರು ಎಲ್ಲಿಂದ ಕಣಕ್ಕಿಳಿದರೂ ನಾವು ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ” ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಚಂಡೀಗಢದಲ್ಲಿ ಹೇಳಿದ್ದಾರೆ.

ರೈಲಿನಲ್ಲಿ ಈ ತಪ್ಪುಗಳನ್ನು ಮಾಡುವುದು ಶಿಕ್ಷಾರ್ಹ ಅಪರಾಧ

ರೈಲ್ವೇಯ ಟ್ವೀಟ್ ಪ್ರಕಾರ, ಈಗ ಪ್ರಯಾಣಿಕರು ಸೀಮೆಎಣ್ಣೆ, ಒಣ ಹುಲ್ಲು, ಒಲೆ, ಪೆಟ್ರೋಲ್,  ಗ್ಯಾಸ್ ಸಿಲಿಂಡರ್, ಬೆಂಕಿಕಡ್ಡಿಗಳು, ಪಟಾಕಿ ಅಥವಾ ರೈಲು ವಿಭಾಗದಲ್ಲಿ ಬೆಂಕಿ ಹರಡುವ ಯಾವುದೇ ವಸ್ತುವಿನೊಂದಿಗೆ ಪ್ರಯಾಣಿಸುವಂತಿಲ್ಲ. ಪ್ರಯಾಣಿಕರ ಪ್ರಯಾಣವನ್ನು ಸುರಕ್ಷಿತವಾಗಿಸಲು ರೈಲ್ವೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.

ಪಟಾಕಿ ಅಂಗಡಿಗೆ ಬೆಂಕಿ 6 ಮಂದಿ ಸಾವು

ಶಂಕರಾಪುರಂನಲ್ಲಿ ದಿನಸಿ ಅಂಗಡಿಯಲ್ಲಿ ದೀಪಾವಳಿ ಸಮಯವಾಗಿರುವುದರಿಂದ ಕೆಲ ದಿನಗಳ ಹಿಂದೆ ಪಟಾಕಿ ಅಂಗಡಿಯನ್ನು ತೆರೆಯಲಾಗಿತ್ತು. ಕಟ್ಟಡದ ಮೊದಲ ಮಹಡಿಯಲ್ಲಿ ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು. ನಿನ್ನೆ ರಾತ್ರಿ ಪಟಾಕಿಗಳು ತುಂಬಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಪಟಾಕಿಗಳು ಒಂದರ ನಂತರ ಒಂದರಂತೆ ಅವ್ಯಾಹತವಾಗಿ ಸ್ಫೋಟಗೊಳ್ಳಲು ಆರಂಭಿಸಿದವು

lockdown

ಚೀನಾದಲ್ಲಿ ಕಠಿಣ ಲಾಕ್‌ ಡೌನ್‌ ! ಹಾಗದ್ರೆ ಲಾಕ್ ಡೌನ್‌ ಮಾರ್ಗಸೂಚಿಯಲ್ಲಿ ಏನಿದೆ ?

ಸೋಂಕು ಪ್ರಕರಣಗಳು ಕ್ಷೀಣಿಸುತ್ತಿರುವಂತೆ ಇಡೀ ವಿಶ್ವ ವ್ಯಾಪಾರ-ವಹಿವಾಟು, ಸಾರಿಗೆ ಎಲ್ಲ ಮಾದರಿಯ ಚಟುವಟಿಕೆಗಳಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಕೊರೊನಾ ವೈರಸ್‍ನೊಂದಿಗೆಯೇ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಿಶ್ವ ಯೋಚಿಸುತ್ತಿದೆ. ಇದೇ ಹೊತ್ತಿನಲ್ಲಿ ಶೂನ್ಯ-ಕೋವಿಡ್ ಸ್ಥಿತಿಗೆ ದೇಶವನ್ನು ಕೊಂಡೊಯ್ಯಬೇಕು ಎಂದು ಚೀನಾ ಸರ್ಕಾರ ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ಬೆರಳೆಣಿಕೆಯಷ್ಟೇ ಪ್ರಕರಣಗಳಿರುವ ಪ್ರದೇಶಗಳಲ್ಲೂ ಕಠಿಣ ಲಾಕ್‍ಡೌನ್ ವಿಧಿಸಲು ಚೀನಾ ಮುಂದಾಗಿದೆ. 

ಚೀನಾದಲ್ಲಿ ಮತ್ತೆ ಅಬ್ಬರಿಸುತ್ತಿರವ ಕೊರೊನಾ

ರಾಜಧಾನಿ ಬೀಜಿಂಗ್‌ನಲ್ಲೂ ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗಿದ್ದು, ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಅಲ್ಲದೇ ನಗರವಾಸಿಗಳು ತುರ್ತು ಸಂದರ್ಭ ಹೊರತುಪಡಿಸಿ ನಗರದಿಂದ ಹೊರಗೆ ಹೋಗಬಾರದು ಎಂದು ತಿಳಿಸಲಾಗಿದೆ. ವೈರಸ್ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಜನರ ಪರೀಕ್ಷೆ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.

Submit Your Article