ಆಡಳಿತ ವ್ಯವಸ್ಥೆ ದಿಕ್ಕೆಟ್ಟು ಹೋಗಿದೆ: ಸಿದ್ಧಾರಾಮಯ್ಯ

Share on facebook
Share on google
Share on twitter
Share on linkedin
Share on print

ಬೆಂಗಳೂರು, ನ. 21: ಯಡಿಯೂರಪ್ಪ ಸರ್ಕಾರದಲ್ಲಿ ಇದೀಗ ಬಿಜೆಪಿ ನಾಯಕರು ಸಂಪುಟ ರಚನೆಯ ಬಗ್ಗೆ ಕಾತುರದಿಂದ ನಾ ಮುಂದು ತಾ ಮುಂದು ಎಂದು ಸಚಿವ ಸ್ಥಾನಕ್ಕೆ ಮುಗಿಬಿದ್ದಿದ್ದಾರೆ. ಇಲ್ಲಿ ಜನಪರ ಕಾಳಜಿ ಇಲ್ಲ ಬರೀ ಕುರ್ಚಿಗಾಗಿ ಗುದ್ದಾಡುತ್ತಿದ್ದಾರೆ.  ಸಂಪುಟ ವಿಸ್ತರಣೆಯೋ, ಪುನಾರಚನೆಯೋ, ನಾಯಕತ್ವ ಬದಲಾವಣೆಯೋ ಇವೆಲ್ಲಾ ನಿಮ್ಮ ಪಕ್ಷದ ಹಣೆಬರಹ ಈ ಸರ್ಕಸ್ ನಲ್ಲಿ ರಾಜ್ಯದ ಆಡಳಿತ ದಿಕ್ಕೆಟ್ಟು ಹೋಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಶೀಘ್ರವಾಗಿ ಏನಾದರೂ ನಿರ್ಧಾರ ಕೈಗೊಂಡು ಈಗಿನ ಬಿಕ್ಕಟ್ಟು ಕೊನೆಗೊಳಿಸಿ, ಆಡಳಿತದ ಕಡೆ ಗಮನಕೊಟ್ಟು ರಾಜ್ಯವನ್ನು ಉಳಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಹಿಂದೆಲ್ಲ ಬಿಜೆಪಿ ನಾಯಕರು, ‘ಹೈಕಮಾಂಡ್ ಸಂಸ್ಕೃತಿ’ ಮೂಲನಿವಾಸಿಗಳು-ವಲಸೆಗಾರರು’ ‘ಕುಟುಂಬ ರಾಜಕಾರಣ’ ಎಂಬೀತ್ಯಾದಿ ಪದಗಳನ್ನು ಜೋಡಿಸಿ ಹಗಲು ರಾತ್ರಿ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದರು. ಈಗ ಅದೇ ಆರೋಪಗಳನ್ನು ಪರಸ್ಪರ ಮಾಡ್ಕೊಂಡು ಬತ್ತಲಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Submit Your Article