ಆನಂದ್ ಸಿಂಗ್ ಭೇಟಿಯಾದ ಪುನೀತ್ ರಾಜ್‌ಕುಮಾರ್‌

Share on facebook
Share on google
Share on twitter
Share on linkedin
Share on print

ಹೊಸಪೇಟೆ, ಅ. 20: ʻಜೇಮ್ಸ್‌ʼ ಸಿನಿಮಾ ಶೂಟಿಂಗ್‌ಗಾಗಿ ಗಂಗಾವತಿಗೆ ಬಂದಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಅವರು ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರನ್ನು ಭೇಟಿಯಾದರು.

ಇದೇ ವೇಳೆ ಅರಣ್ಯ ಸಚಿವ ಆನಂದ್ ಸಿಂಗ್ ಅವರು ಪುನೀತ್‌ ಅವರಿಗೆ ಬೆಳ್ಳಿ ಗದೆ ನೀಡಿ ಸತ್ಕರಿಸಿದರು.

ಹಂಪಿ, ನೆರೆಯ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ʻಜೇಮ್ಸ್ʼ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಒಂದು ವಾರದಿಂದ ಪುನೀತ್ ಹಾಗೂ ಅವರ ಚಿತ್ರತಂಡ ಇಲ್ಲಿಯೇ ಬೀಡು ಬಿಟ್ಟಿದೆ. ಇಂದು ಬೆಳಿಗ್ಗೆ ಆನಂದ್ ಸಿಂಗ್ ಅವರ ಬಂಗ್ಲೆಗೆ ಬಂದಿದ್ದ ಪುನೀತ್ ಅವರನ್ನು ಸಚಿವರ ಕುಟುಂಬದವರು ಬರಮಾಡಿಕೊಂಡರು.

ಉಪಾಹಾರ ಸೇವಿಸಿ, ಕೆಲಹೊತ್ತು ಮಾತುಕತೆ ನಡೆಸಿ ಪುನೀತ್ ನಿರ್ಗಮಿಸಿದರು. ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಪ್ರಚಾರ ನಿಮಿತ್ತ ನಗರಕ್ಕೆ ಬಂದಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡ ಇದ್ದರು.

Submit Your Article