ಪೈನಾಪಲ್ ನಲ್ಲಿ ಬ್ರೋಮಿಲಿನ್ ಎಂಬ ಕಿಣ್ವ ಇದೆ ಇದು ಪಚನ ಕ್ರಿಯೆಗೆ ಸಹಾಯಕವಾಗಿದೆ. ಪೈಬರ್ ಅಂಶವು ಸಮ್ರದ್ಧವಾಗಿದೆ.
ಸಿ ವಿಟಮಿನ್ ಕೂಡಾ ಇದರಲ್ಲಿದೆ. ಪೈನಾಪಲ್ ನ್ನು ಅನೇಕ ಅಡಿಗೆಯಲ್ಲೂ ಬಳಸಬಹುದಾಗಿದೆ ದೇಹದಲ್ಲಿ ಏನೇ ಉಷ್ಣಕಾರಕ
ತೊಂದರೆಗಳಾದರೂ ಪೈನಾಪಲ್ ರಸವನ್ನು ಕುಡಿಯುವುದರಿಂದ ಪ್ರಯೋಜನವಿದೆ. ಕಫ ನಿವಾರಣೆಯಾಗುತ್ತದೆ, ಜೀರ್ಣಶಕ್ತಿ
ವ್ರದ್ಧಿಯಾಗುತ್ತದೆ,, ಎದೆಯೊಳಗೆ ಉರಿ ಇದ್ದಲ್ಲಿ ಇದರ ಜ್ಯಾಸ್ ಕುಡಿದರೆ ಉತ್ತಮವಾದ ಪರಿಣಾಮ ಕಾಣುವುದು. ಕಣ್ಣಿನ
ಉರಿಗೂ ಇದರ ರಸ ಕುಡಿಯಬಹುದು. ಚೆನ್ನಾಗಿ ಕಟ್ ಮಾಡಿ ಹಾಗೆಯೂ ತಿನ್ನಬಹುದು, ಹೊಟ್ಟೆಯಲ್ಲಿ ಏನೇ ಸಮಸ್ಯೆ ಇದ್ದರೂ
ಇದು ಪರಿಹರಿಸುವುದು.
ನಿಶ್ಯಕ್ತಿ,ಆಯಾಸದಿಂದ ದೇಹ ದಣಿದಾಗ ಒಂದು ಗ್ಲಾಸ್ ಪೈನಾಪಲ್ ರಸವನ್ನು ಕುಡಿದರೆ ಶರೀರಕ್ಕೆ ಇದು ಶಕ್ತಿವರ್ಧಕವಾಗಿ
ಪರಿಣಮಿಸುವುದು ನಿತ್ಯಸೇವನೆಯಿಂದ ಆರೋಗ್ಯವಂತರಾಗಿರಲು ಇದು ಸಹಕಾರಿಯಾಗಿದೆ. ಉರಿಮೂತ್ರದ ಸಮಸ್ಯೆಗೆ ಇದರಲ್ಲಿದೆ
ಪರಿಹಾರ. ಎದೆಯಲ್ಲಿ ಕಫ ಗಟ್ಟಿಯಾಗಿದ್ದರೆ ಪೈನಾಪಲ್ ರಸ ಸೇವನೆಯಿಂದ ಕಫ ಕರಗಿ ನೀರಾಗುವುದು ಎದೆ ಹಗುರವಾದಂತೆ
ಭಾಸವಾಗುವುದು. ಇದರ ಉಪಯೋಗ ಮಾಡುವಾಗ ಮಾತ್ರ ಸಿಪ್ಪೆಯನ್ನು ಚೆನ್ನಾಗಿ ತೆಗೆದು ಉಪಯೋಗಿಸಬೇಕು ಅಲ್ಲಲ್ಲಿ
ಕಣ್ಣುಗಳಂತಿರುವ ಭಾಗವನ್ನು ಚೆನ್ನಾಗಿ ಕತ್ತರಿಸಿ ತೆಗೆದು ಉಪಯೋಗಿಸಬೇಕು ಹಾಗೇ ತಿಂದರೆ ಅಲರ್ಜಿಯಾಗುವ ಸಂಭವವೂ ಇದೆ.
ಇದರಿಂದ ಚೆನ್ನಾಗಿ ಮಾಗಿದ ಹಣ್ಣಿನ್ನು ಆಯ್ದುಕೊಂಡು ಉಪಯೋಗಿಸುವುದರಿಂದ ಉತ್ತಮ ಆರೋಗ್ಯ
ನಿಮ್ಮದಾಗುವುದು,ಇದರಿಂದ ದೇಹವು ತಂಪಾಗಿರುವುದು.