ಮೇಷ:- ಪ್ರತಿಯೊಂದೂ ವಿಚಾರದಲ್ಲೂ ಎಚ್ಚರ ಇರಲಿ. ಹಣದ ವಿಚಾರದಲ್ಲಿ ವಹಿಸಬೇಕಾದ ಮುತುವರ್ಜಿಯ ಬಗ್ಗೆ ವಿಶೇಷವಾದ ಸಲಹೆ ಸೂಚನೆಗಳನ್ನು ಅನ್ಯರಿಂದ ಪಡೆಯಬೇಕಾಗಿಲ್ಲ. ಸ್ವಯಂಪೂರ್ಣವಾದ ಅಸಲೀ ಪ್ರತಿಭೆ ನಿಮಗೇ ಇರುವುದರಿಂದ ಅದೃಷ್ಟವು ನಿಮ್ಮ ಹಿಂದೆ ಇರುತ್ತದೆ.
ವೃಷಭ:– ಸರ್ಕಾರಿ ಕೆಲಸಗಾರರು ತೊಂದರೆದಾಯಕವಾದ ವರ್ಗಾವಣೆಗಾಗಿ ಸಜ್ಜಾಗಬೇಕಾಗಿದೆ. ನೀವು ಬಯಸಿದ ಕೆಲಸದಲ್ಲಿ ನೌಕರಿ ಮಾಡಬೇಕೆಂದಿದ್ದರೆ ದೈವದ ಮೊರೆ ಹೋಗುವುದು ಒಳ್ಳೆಯದು. ಶ್ರೀರಾಮರಕ್ಷಾ ಸ್ತೋತ್ರ ಪಠಿಸಿ.
ಮಿಥುನ:-ನಿಮ್ಮ ಮಾತಿನ ವೈಖರಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಬಾಯಿತಪ್ಪಿ ಆಡಿದ ಮಾತಿಗೆ ಕ್ಷಮೆ ಯಾಚಿಸುವುದರಲ್ಲಿ ತಪ್ಪಿಲ್ಲ. ಹಾಗಿಲ್ಲವಾದಲ್ಲಿಅನಗತ್ಯ ಟೀಕೆ ಟಿಪ್ಪಣೆಗಳಿಗೆ ಗುರಿ ಆಗುವಿರಿ.
ಕಟಕ:- ಬಾಕಿ ಇರುವ ಹಣ ನಿಮಗೆ ಸಂದಾಯವಾಗುವುದು. ಮನೆಯಲ್ಲಿ ಬೇಡದ ವಸ್ತುಗಳನ್ನು ಗುಜರಿಗೆ ಹಾಕುವ ಮೂಲಕ ಸ್ವಚ್ಛತಾ ಆಂದೋಲನವನ್ನು ಮನೆಯಿಂದಲೇ ಆರಂಭಿಸಿ. ಸ್ವಚ್ಛತೆಯಲ್ಲಿ ಭಗವಂತ ನೆಲೆಸಿರುತ್ತಾನೆ.
ಸಿಂಹ:- ಅರಣ್ಯದೊಳಗೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯಾ ಎಂಬ ಮಾತಿದೆ. ಹಾಗಾಗಿ ವೃಥಾ ನಡೆಸುವ ಟೀಕೆಗೆ ಹೆದರಬೇಡಿ. ನಿಮ್ಮ ವಿರುದ್ಧ ಟೀಕೆಮಾಡುವವರು ನಿಮ್ಮ ಸಂಸಾರದ ಆಗುಹೋಗುಗಳ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ.
ಕನ್ಯಾ:- ಬಯಸಿದ ಮಾರ್ಗವನ್ನು ಪಡೆಯುವ, ಅದೇ ಮಾರ್ಗದಲ್ಲಿ ಸಂಚರಿಸಿ ಯಶಸ್ಸನ್ನು ಸಂಪಾದಿಸುವ ವಿಶೇಷ ಶಕ್ತಿಯನ್ನು ಸಂಪಾದಿಸುತ್ತೀರಿ. ಎಲ್ಲಾ ರೀತಿಯ ಸರಳ ಪ್ರಯತ್ನಗಳೇ ಯಶಸ್ಸು ತರುತ್ತದೆ. ನಿಮ್ಮ ಉತ್ತಮವಾದ ಪ್ರಯತ್ನಗಳು ನಿರೀಕ್ಷಿತ ಯಶಸ್ಸನ್ನು ತರುವುವು.
ತುಲಾ:– ನೀವು ಕೈಗೊಳ್ಳುವ ಕೆಲಸದ ವಿಚಾರದಲ್ಲಿ ಪೂರ್ವ ತಯಾರಿಗಳ ಬಗ್ಗೆ ಹೆಚ್ಚಿನ ಎಚ್ಚರ ಇರಲಿ. ಇನ್ನು ದಿನಗಳು ಬಾಕಿ ಇವೆ ಎಂದು ತುಸು ನಿರಾಳವಾಗಿಸುವ ವಿಚಾರ ಮಾಡಬೇಡಿ. ನಿಶ್ಚಿತವಾದುದರ ಬಗೆಗಿನ ತಯಾರಿಗೆ ವಿಳಂಬ ಬೇಡ.
ವೃಶ್ಚಿಕ:– ದಣಿವರಿಯದೆ ಮುನ್ನುಗ್ಗುವ ಇಚ್ಛಾಶಕ್ತಿ ಬೆಳೆಸಿಕೊಳ್ಳಿ. ನಿಮ್ಮ ತಾಕಲಾಟದ ದಾರಿಯು ಅವಿರತವಾದ ಯಶಸ್ಸಿಗೆ ಹಿನ್ನೆಡೆ ತರುವುದು. ಆದರೆ ವಿಘ್ನ ವಿನಾಶಕ ಗಣಪತಿಯು ನಿಮ್ಮ ದಾರಿಯಲ್ಲಿನ ವಿಘ್ನಗಳನ್ನು ನಿವಾರಿಸಿ ಸರಳವಾದ ಗುರಿಯನ್ನು ಮುಟ್ಟಿಸುವನು.
ಧನುಸ್ಸು:- ನಿಮ್ಮ ಏಳಿಗೆಯನ್ನು ಸಹಿಸಲಾರದ ನಿಮ್ಮ ಹತ್ತಿರದವರೇ ಆದ ಜನರ ಗುಂಪು ನಿಮ್ಮನ್ನು ತೀವ್ರವಾಗಿ ಬಾಧಿಸುತ್ತಿದೆ. ಕೆಲಸದಲ್ಲಿ ವಿಳಂಬ ಉಂಟಾಗುವುದು. ಶನಿ ದೇವಾಲಯದಲ್ಲಿ ಎಳ್ಳುದೀಪ ಹಚ್ಚಿ.
ಮಕರ:- ನಿಮ್ಮ ತಾಳ್ಮೆಯನ್ನು ಕೆಡಿಸಿಕೊಳ್ಳದೆ ಇರುವ ಕೆಲಸ ಮುಂದುವರಿಸಿಕೊಂಡು ಮುನ್ನುಗ್ಗಿ. ನಿಮ್ಮ ಪಾಲಿನ ತೀವ್ರತರವಾದ ಮನದಾಳದ ಸದಿಚ್ಛೆಯು ಪೂರ್ಣಗೊಳ್ಳುವುದು. ಕಾರ್ಯಗಳು ಸುಲಲಿತವಾಗುವುವು.
ಕುಂಭ:– ನೋವು ತರುವ ಮಾತುಗಳನ್ನಾಡುವ ಜನರನ್ನು ನಯವಾಗಿ ನಿರ್ಲಕ್ಷಿಸಿ. ಆತ್ಮಪ್ರಾಮಾಣ್ಯದ ನಿಮ್ಮ ನಡೆಯ ಶಕ್ತಿಯನ್ನು ಸುಡುವ ದಾವಾಗ್ನಿಯೂ ಏನೂ ಮಾಡಲಾಗದೆ ಸೋಲುತ್ತದೆ. ಆಂಜನೇಯ ಸ್ವಾಮಿಯನ್ನು ಆರಾಧಿಸಿ. ಇದರಿಂದ ನಿಮ್ಮ ವರ್ಚಸ್ಸಿಗೆ ಬೇಕಾದ ಸಿದ್ಧಿಗೆ ದಾರಿಯಾಗುವುದು.
ಮೀನ:- ನಿಮ್ಮಲ್ಲಿ ಆನೆ ಬಲವಿದೆ. ಆದರೆ ದೂರದಿಂದ ಬೊಗಳುವ ಶ್ವಾನವನ್ನು ನೀವು ನಿಯಂತ್ರಿಸಲಾರಿರಿ. ಮನೆಯಲ್ಲಿ ಸಮತೋಲನ ತಪ್ಪದಂತೆ ಕುಟುಂಬದ ಜೊತೆ ವ್ಯವಹರಿಸಿ. ಆರೋಗ್ಯದ ಕಡೆ ಗಮನ ಹರಿಸಿ. ಮನೆ ವೈದ್ಯರ ಸಲಹೆ ಪಡೆಯಿರಿ.