ಮೇಷ:- ಪರಮಶಿವನ ನೆನೆದು ನಿಮ್ಮ ದೈನಂದಿನ ಕೆಲಸ ಸುಗಮವಾಗಿ ಶುರುವಾಗುವಂತೆ ನೋಡಿಕೊಳ್ಳಿ. ಭಗವಂತನ ಅನುಗ್ರಹದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು. ತಡೆಹಿಡಿಯಲ್ಪಟ್ಟ ಕೆಲಸ ಕಾರ್ಯಗಳಿಗೆ ಉತ್ತಮ ಚಾಲನೆ ದೊರೆಯುವುದು.
ವೃಷಭ:- ವಿನಾಕಾರಣ ನಿಂದನೆ ಬಂದಾಗ ಸುಮ್ಮನೆ ಇರಬೇಡಿ. ನಿಮ್ಮ ವಾದವನ್ನು ಸಹನೆಯಿಂದ ಮಂಡಿಸಿ. ತೀರ್ಪುಗಾರರು ಶುಭಾಶುಭಗಳನ್ನು ತಿಳಿದು ತೀರ್ಮಾನ ಕೊಡುವರು. ಮನಸ್ಸಿನಲ್ಲಿ ಅನಗತ್ಯ ಗೊಂದಲಕ್ಕೆ ಅವಕಾಶ ಮಾಡಿಕೊಡದಿರಿ. ಮಕ್ಕಳ ಪ್ರಗತಿಯು ಮನಸ್ಸಿಗೆ ಮುದ ನೀಡುವುದು.
ಮಿಥುನ:- ನಿಮ್ಮದೇ ಆದ ವಿಧಾನಗಳ ಸ್ಪಷ್ಟ ಆಯೋಜನೆಯಿಂದ ನಿರೀಕ್ಷಿತ ಲಾಭಕ್ಕೆ ದಾರಿಯು ಸುಗಮವಾಗಲಿದೆ. ಗುರುಮಹಾರಾಜರ ಶುಭ ಸಂಚಾರದಿಂದ ಬಾಕಿ ಬರಬೇಕಾಗಿದ್ದ ಹಣಕಾಸು ಬರುವುದು. ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ.
ಕಟಕ:- ವ್ಯಾಪಾರ ವ್ಯವಹಾರದಲ್ಲಿ ಹಾಕಿರುವ ಬಂಡವಾಳಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಹಾಗಾಗಿ ನೂತನ ವ್ಯವಹಾರಗಳಿಗೆ ಸದ್ಯ ಹೊಸ ಬಂಡವಾಳ ಹೂಡುವುದು ಒಳ್ಳೆಯದಲ್ಲ. ವಿದೇಶದಿಂದ ಬರುವ ವರ್ತಮಾನವು ಮನಸ್ಸಿಗೆ ಮುದ ನೀಡುವುದು.
ಸಿಂಹ:- ಹಿರಿತನವೆಂಬುದು ಸುಮ್ಮನೆ ಬರುವುದಲ್ಲ. ಅದಕ್ಕೆ ಸಾಕಷ್ಟು ನೋವುಗಳನ್ನು ಎದುರಿಸಬೇಕಾಗುವುದು. ಸಾವಿರ ಉಳಿ ಪೆಟ್ಟಿನಿಂದ ದೇವರ ಮೂರ್ತಿ ತಯಾರಾಗುವಂತೆ ಜಗತ್ತಿನಲ್ಲಿ ಕೆಲವೊಮ್ಮೆ ಅವಮಾನ ಪ್ರಸಂಗಗಳನ್ನು ಎದುರಿಸಬೇಕಾಗುವುದು.
ಕನ್ಯಾ:- ಏಕತಾನತೆಯನ್ನು ಅನುಭವಿಸುತ್ತಾ ಜೀವನದಲ್ಲಿ ಸಂಕೋಲೆಗಳನ್ನು ಒಂದೊಂದಾಗಿ ಬಿಡಿಸಿಕೊಳ್ಳಲು ಯತ್ನಿಸುವಿರಿ. ಆದರೂ ಕೆಲವು ಜವಾಬ್ದಾರಿಗಳನ್ನು ನೀವು ನಿಭಾಯಿಸಲೇಬೇಕಿದೆ. ಈ ಬಗ್ಗೆ ಗುರುಹಿರಿಯರ ಸಲಹೆ ಪಡೆಯಿರಿ.
ತುಲಾ:- ನಿರರ್ಥಕವಾದ ವಾದ, ಚರ್ಚೆಗಳಿಂದ ಕಗ್ಗಂಟುಗಳನ್ನು ನಿರ್ಮಿಸಿಕೊಂಡು ನೀವೇ ಸಮಸ್ಯೆಯ ಸುಳಿಗೆ ಸಿಲುಕಿಕೊಳ್ಳುವಿರಿ. ಈ ಬಗ್ಗೆ ಎಚ್ಚರಿಕೆ ಇರಲಿ. ನಿಮಗೆ ಬೇಡದ ವಿಷಯದಲ್ಲಿ ಮೂಗು ತೂರಿಸಿಕೊಂಡು ಹೋಗದಿರಿ.
ವೃಶ್ಚಿಕ:- ಯಾರದೋ ಕೊಂಕು ಮಾತು ನಿಮ್ಮನ್ನು ದಿನವಿಡೀ ಕಿರಿಕಿರಿಗೆ ತಳ್ಳಬಹುದು. ಈ ಬಗ್ಗೆ ಎಚ್ಚರ ಇರಲಿ ಧನಕಾರಕ ಗುರುವು ಸ್ವಂತ ಮನೆ ಪ್ರವೇಶಿಸುವ ಮೂಲಕ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡುವನು.
ಧನುಸ್ಸು:- ಜನ್ಮಸ್ಥ ಗುರುವು ನಿಮಗೆ ನವಚೈತನ್ಯ ನೀಡುವರು. ಇದರಿಂದ ಅನಾಯಾಸವಾದ ಯಶಸ್ಸು ದೊರೆಯಲು ಕಾರಣವಾಗುವುದು. ಆಂಜನೇಯ ಸ್ವಾಮಿಯನ್ನು ತಪ್ಪದೆ ಭಜಿಸಿ.
ಮಕರ:- ವೃಥಾ ಆರೋಪಗಳನ್ನು ಆಹ್ವಾನಿಸದಿರಿ. ನಿಮ್ಮ ದಾರಿಯನ್ನು ಸ್ಪಷ್ಟವಾಗಿ ಇರಿಸಿಕೊಂಡರೆ ಗೆಲುವು ಸಾಧ್ಯ. ಸಾಡೇಸಾತ್ ಶನಿಯ ಪ್ರಭಾವವಿದ್ದರೂ ನಿಮ್ಮ ರಾಶಿಯ ಸ್ವಾಮಿಯೇ ಶನಿ ಆದಕಾರಣ ಹೆಚ್ಚಿನ ತೊಂದರೆ ಇರುವುದಿಲ್ಲ.
ಕುಂಭ:- ಗುರುವಿನ ಶುಭ ಆಶೀರ್ವಾದದಿಂದ ಒಳಿತಾಗುವುದು. ನಿಮ್ಮ ಅಕೌಂಟ್ ಸ್ಟೇಟ್‌ಮೆಂಟ್ ಅನ್ನು ಕ್ಲಪ್ತ ಸಮಯದಲ್ಲಿ ತಯಾರಿಸಿಕೊಳ್ಳಿ. ಇದು ನಿಮ್ಮ ಮುಂದಿನ ವಹಿವಾಟುಗಳಿಗೆ ಅನುಕೂಲವಾಗುವುದು.
ಮೀನ:- ಬದಲಾವಣೆಯ ಕಾಲ ಘಟ್ಟದಲ್ಲಿದ್ದೀರಿ. ಕೆಲವು ಬದಲಾವಣೆಗಳು ನಿಮಗೆ ಪೂರಕವಾಗಿ ಕೆಲಸ ಮಾಡುವುವು. ನಿಮ್ಮನ್ನು ಭೇಟಿ ಮಾಡಲು ಬರುವ ಜನರು ಕೊಡುವಂತಹ ಸಲಹೆಗಳನ್ನು ಸ್ವೀಕರಿಸಿ. ಇದರಿಂದ ಕಾರ್ಯಗಳನ್ನು ಅನಾಯಾಸವಾಗಿ ಗೆಲ್ಲಲು ಅನುಕೂಲವಾಗುವುದು.