ಮೇಷ :- ಈ ದಿನ ದೃಢ ನಿರ್ಧಾರ ತಳೆಯುವಲ್ಲಿ ಹಿಂಜರಿಕೆ ಆಗುವುದು. ಮನಸ್ಸಿನ ಗೊಂದಲಗಳ ಕವಲುದಾರಿಯಲ್ಲಿದ್ದೀರಿ. ಹಾಗಾಗಿ ಸಮಚಿತ್ತದಿಂದ ಕಾರ್ಯಾಕಾರ್ಯ ವಿಚಾರ
ಮಾಡಿರಿ. ಯಾವುದೇ ಗುರುವಿನ ಸ್ತೋತ್ರಾದಿಗಳನ್ನು ಪಠಿಸಿರಿ.
ವೃಷಭ :- ಅಷ್ಟಮ ಶನಿಯ ಕಾಟವನ್ನು ಇನ್ನು ಸ್ವಲ್ಪ ದಿನ ಅನುಭವಿಸಬೇಕಾಗುವುದು. ಸೊಂಟದ ಕೆಳಗೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದು. ಮನೆ ವೈದ್ಯರ ಸಲಹೆಯನ್ನು ಸ್ವೀಕರಿಸಿರಿ. ಮಕ್ಕಳ ವಿಷಯದಲ್ಲಿ ಪ್ರಗತಿ ಕಂಡು ಬರುವುದು.
ಮಿಥುನ :- ಮನಸ್ಸಿನ ತಾಕಲಾಟಗಳನ್ನು ಯಾರ ಮುಂದೆಯೂ ಹೇಳಿಕೊಳ್ಳಲು ಆಗದಂತಹ ಪರಿಸ್ಥಿತಿ. ಎಲ್ಲವೂ ಮಾಯಾಕಾರಕ ರಾಹುವಿನ ಮಹಿಮೆ. ಕೆಲವೊಮ್ಮೆ ಅಪವಾದಗಳನ್ನು ಹೊತ್ತು ತರುವರು. ಹಾಗಾಗಿ ಮಾತಾ ದುರ್ಗಾದೇವಿಯ ಪ್ರಾರ್ಥನೆ ಮಾಡಿರಿ.
ಕಟಕ :- ಸ್ವಚ್ಛತೆಯಿದ್ದಲ್ಲಿ ಭಗವಂತನು ಇರುತ್ತಾನೆ. ಹಾಗಾಗಿ ಮನೆಯ ಸಂಧಿ- ಮೂಲೆಯಲ್ಲಿನ ಕಸವನ್ನು ಹೊರಹಾಕಿ, ಮನೆಯಲ್ಲಿ ಧನಾತ್ಮಕ ಶಕ್ತಿಗೆ ಚಾಲನೆ ನೀಡಿರಿ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ ನಿಮ್ಮ ಈ ದಿನ ಕಾರ್ಯ ಸುಲಲಿತವಾಗುವುದು.
ಸಿಂಹ :- ನಿಮ್ಮ ಆತ್ಮ ವಿಶ್ವಾಸವು ಇಂದು ನಿಮ್ಮ ಬೆಂಬಲಕ್ಕೆ ಬರುವ ಮೂಲಕ ಗೆಲುವಿನ ಮಾರ್ಗವು ಗಟ್ಟಿಯಾಗಲಿದೆ. ನಿಮ್ಮನ್ನು ಟೀಕಿಸುತ್ತಿದ್ದವರು ಸುಮ್ಮನಾಗುವರು. ನೀವು ನೇರವಾಗಿ ತಪ್ಪು ಎಸಗದಿದ್ದರೂ ನಿಮ್ಮ ಮುಂದಾಳತ್ವದಲ್ಲಿ ಕೆಲಸಗಾರರು ಮಾಡಿದ ತಪ್ಪಿಗೆ ದಂಡ ತೆರಬೇಕಾಗುವುದು.
ಕನ್ಯಾ :- ಎಲ್ಲವೂ ಸುಲಲಿತವಾಗುತ್ತದೆ ಎನ್ನುತ್ತಿರುವಾಗಲೇ ವಿರೋಧಿಗಳಿಂದ ಏಕಾಏಕಿ ತಲೆಯ ಮೇಲೆ ತೂಗುಕತ್ತಿಯೊಂದು ತೂಗಾಡುವ ಸಾಧ್ಯತೆ ಇದೆ. ಸದಾ ದೈವವನ್ನೆ ನಂಬಿಕೊಂಡಿರುವುದರಿಂದ ನಿಮಗೇನೂ ತೊಂದರೆಯಾಗುವುದಿಲ್ಲ. ಪುಟಕ್ಕಿಟ್ಟ ಚಿನ್ನದಂತೆ ಹೆಚ್ಚು ಪ್ರಕಾಶಮಾನರಾಗುವಿರಿ.
ತುಲಾ :- ನಯಗಾರಿಕೆ ತಂತ್ರ, ಬೆಣ್ಣೆಯಲ್ಲಿ ಕೂದಲು ತೆಗೆವ ಚಾಣಾಕ್ಷ ಮಂದಿಯಿಂದ ದೂರವಿರಿ. ಭಗವಂತನ ಒಲುಮೆಯಿಂದ ನಿಮ್ಮ ದಿನನಿತ್ಯದ ಕಾರ್ಯಗಳು ಸರಾಗವಾಗಿ ಆಗುತ್ತವೆ. ಇದಕ್ಕೆ ನಿಮ್ಮ ಜೀವನ ಸಂಗಾತಿಯ ಸಹಕಾರವು ಇರುವುದರಿಂದ ಹೆಚ್ಚಿನ ತೊಂದರೆಯಿರುವುದಿಲ್ಲ.
ವೃಶ್ಚಿಕ :- ಮಾತೇ ಮುತ್ತು ಮಾತೇ ಶತ್ರು ಹಾಗಾಗಿ ನಿಮ್ಮನ್ನು ಮಾತನಾಡಿಸಲು ಬರುವವರ ಜೊತೆ ಒರಟಾಗಿ ವರ್ತಿಸದಿರಿ. ಹೊಸದೇ ಆದ ಒಳಿತಿಗೆ ದಾರಿ ತೆರೆಯುವುದು. ಹಣಕಾಸಿನ ಪರಿಸ್ಥಿತಿಯು ಸಧ್ಯದರಲ್ಲೇ ಸುಧಾರಿಸುವುದು.
ಧನುಸ್ಸು :- ನಿಮ್ಮ ಪ್ರಗತಿಯನ್ನು ಕಂಡು ಮರುಗುವ ಜನ ನಿಮ್ಮ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ಮಾಡುವ ಸಾಧ್ಯತೆ ಇರುವುದು. ಈ ಬಗ್ಗೆ ಎಚ್ಚರದಿಂದ ಇರಿ. ನಿಮ್ಮ
ಅನುಭವದ ಚಾತುರ್ಯದಿಂದ ಅವರನ್ನು ದುರ್ಬಲಗೊಳಿಸುವಿರಿ.
ಮಕರ :- ಹಣಕಾಸಿನ ಪರಿಸ್ಥಿತಿಯೇನೋ ಉತ್ತಮವಾಗಿದೆ. ಆದರೆ ಹಣವೇ ಎಲ್ಲಾ ಅಲ್ಲ ಎಂದು ಅರಿಯುವ ಸಾಧ್ಯತೆ ಎದುರಾಗುವುದು. ಮಾನವಿತೆಯ ನೆಲೆಗಟ್ಟಿನ ಮೇಲೆ ನೀವು ಕೆಲಸ ಮಾಡಿದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುವಿರಿ.
ಕುಂಭ :- ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಅನನ್ಯ ಪೂಜಿಸುವ ದೇವರು ನಿಮಗೆ ಇಂದು ಒಳಿತನ್ನೆ ಮಾಡುವನು. ಜೀವನದಲ್ಲಿ ಹಲವು ತಿರುವುಗಳಲ್ಲಿ ಇಂದಿನ ತಿರುವು ಸಹ ಪ್ರಮುಖವಾಗಿರುತ್ತದೆ.
ಮೀನ :- ಅಪರಿಚಿತ ವ್ಯಕ್ತಿಗಳ ಸಂಗಡ ಹೆಚ್ಚಿನ ಸಲುಗೆ ಬೇಡ. ಅವರು ನಿಮ್ಮ ಬಳಿ ಏತಕ್ಕೆ ಬಂದಿರುವರು ಎಂದು ಅರಿತು ಅಷ್ಟಕ್ಕೆ ಅವರಿಗೆ ಉತ್ತರಿಸಿ ಅವರನ್ನು ಸಾಗಹಾಕಿರಿ. ಅವರ ಮುಂದೆ ನಿಮ್ಮ ಕಷ್ಟ-ಸುಖಗಳನ್ನು ಹೇಳಿಕೊಳ್ಳಬೇಡಿರಿ.