Visit Channel

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 5,2019 – ಗುರುವಾರ

images

ಮೇಷ:– ಕಾರಣ ಇರದ ಕ್ಷುಲ್ಲಕ ವಿಚಾರದಿಂದಾಗಿ ವ್ಯಾಜ್ಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಜಾಗೃತರಾಗಿರಿ. ಅನವಶ್ಯಕ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದಿರಿ. ಸಹೋದರನ ಸಂಬಂಧ ತಟಸ್ಥ ನಿಲುವು ತಳೆಯುವುದು ಒಳ್ಳೆಯದು. 

ವೃಷಭ:– ಆಸ್ತಿಯ ವಿಚಾರದಲ್ಲಿ ಮಹತ್ತರ ಮಾತುಕತೆಯಿಂದಾಗಿ ಬಹುದಿನದಿಂದ ನೆನೆಗುದಿಗೆ ಬಿದ್ದಿದ್ದ ವ್ಯಾಪಾರ ಸುಲಲಿತವಾಗುವುದು. ಮತ್ತು ಅದರಿಂದ ಹಣಕಾಸಿನ ನೆರವು ದೊರೆಯುವುದರಿಂದ ಸಾಲದ ತೀರುವಳಿಗೆ ಅನುಕೂಲವಾಗುವುದು. ಕುಲದೇವರನ್ನು ಪ್ರಾರ್ಥಿಸಿ. 

ಮಿಥುನ:– ಗುರು ದತ್ತಾತ್ರೇಯ ಮಂದಿರಕ್ಕೆ ಹೋಗಿ ಭಕ್ತಿಯಿಂದ ದತ್ತಗುರುವನ್ನು ಆರಾಧಿಸಿ. ನಿಮ್ಮ ಮನೋ ಸಂಕಲ್ಪಗಳು ಈಡೇರುವುವು. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ಶಿರೋವೇದನೆಗೆ ಸಂಬಂಧಪಟ್ಟಂತೆ ಸೂಕ್ತ ಚಿಕಿತ್ಸೆ ಪಡೆಯಿರಿ. 

ಕಟಕ:- ನೀವು ಧರಿಸುವ ಬಟ್ಟೆಯು ನಿಮ್ಮ ವ್ಯಕ್ತಿತ್ವವನ್ನು ತಿಳಿಸುವುದು. ಹಾಗಾಗಿ ಶುಭ್ರವಾದ ಬಟ್ಟೆಯನ್ನು ಧರಿಸುವುದರಿಂದ ಮನೋಲ್ಲಾಸ ಹೆಚ್ಚಾಗುವುದು. ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸದಿರುವುದು ಕ್ಷೇಮ. 

ಸಿಂಹ:– ಗ್ರಹಗತಿಗಳು ನಿಮ್ಮ ವಿರುದ್ಧವಾಗಿ ಇವೆ ಎನಿಸುತ್ತದೆ. ಆದಷ್ಟು ಶಾಂತತೆಯನ್ನು ಕಾಪಾಡಿಕೊಳ್ಳಿ. ಅರಳಿಮರಕ್ಕೆ ಶುದ್ಧ ಜಲವನ್ನು ಹಾಕಿ ಪ್ರದಕ್ಷಿಣೆ ಮಾಡಿಕೊಂಡು ಬನ್ನಿ. ಈ ದಿನದ ಕೆಲಸಗಳು ಸುಗಮವಾಗುವುವು. 

ಕನ್ಯಾ:– ಹಿರಿಯರ ಬೆಂಬಲದ ಮೂಲಕ ನಿಮ್ಮ ಮನಸ್ಸಿನ ಉತ್ತಮ ಸಂಕಲ್ಪಗಳನ್ನು ಈಡೇರಿಸಿಕೊಳ್ಳುವಿರಿ. ವೃತ್ತಿಯಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಕಿರಿಕಿರಿ ಅನುಭವಿಸುವಿರಿ. ಯಾವುದೇ ಗುರುವಿನ ಸ್ತೋತ್ರ ಪಠಿಸುವ ಮೂಲಕ ಮನಃಶಾಂತಿಯನ್ನು ಹೊಂದಿ. 

ತುಲಾ:- ಅತಿವಿನಯಂ ದೂರ್ತ ಲಕ್ಷಣಂ ಎನ್ನುವಂತೆ ನಿಮ್ಮ ಮುಂದೆ ನಯವಾಗಿ ಮಾತನಾಡಿ ನಿಮಗೇ ಮೋಸ ಮಾಡುವ ವ್ಯಕ್ತಿಯ ಭೇಟಿಯ ಸಾಧ್ಯತೆ ಇದೆ. ಈಬಗ್ಗೆ ಹೆಚ್ಚು ಜಾಗರೂಕತೆಯಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ. 

ವೃಶ್ಚಿಕ:– ಭಗವಂತನ ಒಲುಮೆ ಇರುವಾಗ ಮತ್ತೊಬ್ಬರ ಹಂಗೇಕೆ? ಗುರು ಮಹಾರಾಜರು ದ್ವಿತೀಯ ಕುಟುಂಬ ಸ್ಥಾನದಲ್ಲಿದ್ದು ಶುಭಫಲವನ್ನು ನೀಡುತ್ತಿರುವುದರಿಂದ ಹೆಚ್ಚಿನ ತೊಂದರೆಯಿರುವುದಿಲ್ಲ. ವಿವಿಧ ಮೂಲಗಳಿಂದ ಹಣಕಾಸು ಬರುವುದು. 

ಧನುಸ್ಸು:– ಯಾವುದೇ ಕಾರಣಕ್ಕೂ ಕೋಪ ಮಾಡಿಕೊಳ್ಳಲು ಹೋಗದಿರಿ. ಕೋಪವು ಅನರ್ಥಕ್ಕೆ ದಾರಿಯಾಗುವುದು. ಹಿರಿಯರ ಪುಣ್ಯದಿಂದ ಕೆಲಸಗಳು ಸುಗಮವಾಗಿ ಆಗುವುವು. ಕುಲದೇವರ ಸ್ಮರಣೆ ಮಾಡಿ. 

ಮಕರ:- ಗುರುಬಲವಿಲ್ಲ. ಸಾಡೇಸಾತ್‌ ಶನಿಯ ಕಾಟದಿಂದ ಎಲ್ಲಾ ಕಾರ್ಯಗಳಲ್ಲಿ ವಿಘ್ನಗಳೇ ಜಾಸ್ತಿ. ಆದುದರಿಂದ ವಿಘ್ನನಾಶಕ ಗಣಪತಿಯ ಮಂತ್ರ ಜಪಿಸಿ. ಮತ್ತು ಗಣಪತಿ ದೇವರಿಗೆ 21 ಗರಿಕೆ ಪತ್ರೆಗಳನ್ನು ನೀಡಿ. 

ಕುಂಭ:– ನಿಮಗೇ ಅರಿವಿರದಂತಹ ಉತ್ತಮವಾದ ಪ್ರಾಪ್ತಿಯೊಂದು ವಿಸ್ಮಯಕರವಾಗಿ ನಿಮ್ಮ ಕೈಸೇರುವುದು. ಇದರಿಂದ ವೃತ್ತಿ ಜೀವನದಲ್ಲಿ ಮಹತ್ತರ ಬದಲಾವಣೆ ಉಂಟಾಗುವುದು. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಹೆಚ್ಚು ಗೌರವದಿಂದ ಕಾಣುವರು. 

ಮೀನ:- ಮಾತೃವರ್ಗದವರ ಆರೋಗ್ಯದ ಸಲುವಾಗಿ ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿಗಳಿರುವುದರಿಂದ ಮನೋನಿಯಾಮಕ ರುದ್ರದೇವರನ್ನು ಭಜಿಸಿ. 

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.