Visit Channel

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಡಿಸೆಂಬರ್ 19,2019-ಗುರುವಾರ

unnamed-file

ಮೇಷ:- ಹಲವಾರು ಯೋಜನೆಗಳನ್ನು ಕೈಬಿಟ್ಟು ಒಂದೇ ಒಂದನ್ನು ಆಯ್ಕೆ ಮಾಡಿಕೊಂಡಲ್ಲಿ ಸಿದ್ಧಿಗೆ ಅನುಕೂಲವಾಗುವುದು. ಸಂವಹನ ಕಾರ್ಯದಲ್ಲಿ ಹಿನ್ನಡೆ ಉಂಟಾಗುವುದು. ದುರ್ಗಾದೇವಿಯನ್ನು ಪ್ರಾರ್ಥಿಸುವುದು ಒಳ್ಳೆಯದು.

ವೃಷಭ:– ನಿಯೋಜಿಸಿಕೊಂಡ ಪ್ರವಾಸ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಬೇಕಾಗುವುದು. ಬಂಧು ಬಳಗದವರು ಈ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸುವ ಸಾಧ್ಯತೆ ಇದೆ. ಆದರೆ ಅದಕ್ಕೂ ಪ್ರಮುಖವಾದ ಕಾರ್ಯವನ್ನು ಹಮ್ಮಿಕೊಳ್ಳಬೇಕಾಗಿರುವುದರಿಂದ ಮುಂದಿನ ದಿನಗಳಲ್ಲಿ ಪ್ರವಾಸ ಮಾಡಿ.

ಮಿಥುನ:– ಜೀವನದ ಮಹತ್ವದ ದಿನಗಳು ಹಲವಾರು. ಅಂತೆಯೇ ಇಂದು ಕೂಡ ಮಹತ್ವದ ಸಾಧನೆಯೊಂದನ್ನು ನಡೆಸಲು ದೈವದ ಸಹಾಯ ದೊರೆಯುವುದು. ಇದರಿಂದ ಸಮಾಜದಲ್ಲಿ ಗೌರವ ಆದರಗಳನ್ನು ಪಡೆಯುವಿರಿ.

ಕಟಕ:- ತಲೆ ತಿನ್ನುವ ಜನರನ್ನು ಹತ್ತಿರ ಬರದಂತೆ ಉಪಾಯದಿಂದ ಸಾಗಹಾಕುವುದು ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯು ಮನಸ್ಸಿಗೆ ಮುದ ನೀಡುವುದು. ದುರ್ಗಾದೇವಿಯ ಆರಾಧನೆ ಮಾಡುವುದು ಒಳ್ಳೆಯದು. ಕೆಲವರಿಗೆ ದೂರದ ಊರಿನ ಪ್ರಯಾಣ ಸಾಧ್ಯತೆ ಇದೆ.

ಸಿಂಹ:- ನಿಮಗೆ ಜಾಣತನವಿದೆ. ಆದರೆ ಅವಸರಿಸದಿರಿ. ಸಾವಧಾನವೇ ನಿಮಗೆ ವಜ್ರಾಯುಧ. ನಿಮ್ಮ ಮುಂದಾಲೋಚನೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುವಿರಿ. ಮಕ್ಕಳು ನಿಮ್ಮ ಆಜ್ಞೆಯನ್ನು ಶಿರಸಾ ಪಾಲಿಸುವರು.

ಕನ್ಯಾ:- ಮನಸ್ಸಿನ ಹಲವು ಹೊಯ್ದಾಟಗಳನ್ನು ನಿಯಂತ್ರಿಸಿಕೊಂಡಲ್ಲಿ ಒಳಿತಾಗುವುದು. ಕೇವಲ ವಾದ ವಿವಾದದ ಜ್ಞಾನವು ನಿತ್ಯ ಜೀವನಕ್ಕೆ ಬಾರದೇ ಹೋಗುವ ಸಾಧ್ಯತೆ ಇದೆ. ವಿಷ್ಣು ಸಹಸ್ರನಾಮ ಮತ್ತು ಆಂಜನೇಯ ಸ್ವಾಮಿ ಸ್ತೋತ್ರವನ್ನು ತಪ್ಪದೇ ಪಠಣ ಮಾಡಿ.

ತುಲಾ:- ಹಣಕಾಸಿನ ಕುರಿತು ಗಮನವಿರಲಿ. ಸುಖಾಸುಮ್ಮನೆ ಖರ್ಚಿನ ಹಾದಿ ವಿಸ್ತಾರಗೊಳ್ಳುವುದು. ಮಕ್ಕಳನ್ನು ಶಾಲೆಗೆ ಸೇರಿಸುವ ಬಗ್ಗೆ ಹಣಕಾಸಿನ ಜೋಡಣೆಯನ್ನು ಮಾಡಿಕೊಳ್ಳುವಿರಿ. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸುವುದು ಒಳ್ಳೆಯದು.

ವೃಶ್ಚಿಕ:- ಕೆಲಸದ ಸ್ಥಳದಲ್ಲಿ ಕೆಲವು ಕಹಿ ಅನುಭವಗಳನ್ನು ಎದುರಿಸಬೇಕಾಗುವುದು. ಹಾಗಂತ ನಿಮ್ಮ ಆತ್ಮಸಾಕ್ಷಿಗೆ ವಿರೋಧವಾಗಿ ನಡೆದುಕೊಳ್ಳದಿರಿ. ಹಣಕಾಸನ್ನು ತುಂಬಾ ಎಚ್ಚರಿಕೆಯಿಂದ ನಿಭಾಯಿಸಿ.

ಧನುಸ್ಸು:- ಶಕ್ತಿ ಸಂವರ್ಧನೆಗೆ, ಸಿದ್ಧಿಗೆ ಮತ್ತು ಉದ್ದೇಶಗಳನ್ನು ಸಾಧಿಸಿಕೊಳ್ಳಲು ಗುರು-ಹಿರಿಯರ ಆಶೀರ್ವಾದ ಪಡೆಯುವಿರಿ. ಬಡವರಿಗೆ ಆಹಾರ ನೀಡಿ ಮತ್ತು ಕಾಲು ಕೇಜಿ ಕಡಲೆಕಾಳುಗಳನ್ನು ಹಸುವಿಗೆ ದಾನ ಮಾಡಿ.

ಮಕರ:- ನಿಮಗೆ ದೈವಾನುಕೂಲ ಇರುವ ಕಾರಣ ಮಹತ್ವದ್ದಾದ ಒಂದು ಕಾರ್ಯವನ್ನು ಸಾಧಿಸುವಿರಿ. ನಿಮ್ಮಿಂದ ದೂರವಾಗಿದ್ದ ಸ್ನೇಹಿತರುಗಳು ಹಾಗೂ ಬಂಧುಗಳು ನಿಮ್ಮ ಸ್ನೇಹಹಸ್ತವಾಗಿ ನಿಮ್ಮ ಬಳಿ ಬರುವರು. ಈ ಬಗ್ಗೆ ನಿಮ್ಮ ಸಂಗಾತಿಯ ಸಲಹೆಯಂತೆ ನಡೆಯಿರಿ.

ಕುಂಭ:- ಸಕಾರಾತ್ಮಕವಾದ ಚಿಂತನೆಗಳ ಜೊತೆಗೆ ಬಂಧುಗಳ, ಸಂಬಂಧಿಗಳ ಬೆಂಬಲದಿಂದ ಹಮ್ಮಿಕೊಂಡ ಎಲ್ಲಾ ವಿಚಾರಗಳಲ್ಲೂ ಯಶಸ್ಸು ಹೊಂದುವಿರಿ. ಆಂಜನೇಯ ಸ್ವಾಮಿ ಮಂತ್ರವನ್ನು ಆದಷ್ಟು ಹೆಚ್ಚಿಗೆ ಪಾರಾಯಣ ಮಾಡಿ. ಒಳಿತಾಗುವುದು.

ಮೀನ:– ಜನರಿಗೆ ಸಹಾಯ ಮಾಡುವ ನಿಮ್ಮ ಮನೋಭಾವದಿಂದಾಗಿ ಎಲ್ಲಾ ರೀತಿಯ ಶ್ಲಾಘನೆ ಪಡೆಯುವಿರಿ. ಗೆಳೆಯರ ಗುಂಪು ನಿಮ್ಮ ಸಹಾಯಕ್ಕೆ ಬಂದು ಅಭಿವೃದ್ಧಿಗೆ ದಾರಿ ಮಾಡಿಕೊಳ್ಳಬಲ್ಲರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.