vijaya times advertisements
Visit Channel

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂಬರ್ 06, 2019 – ಶುಕ್ರವಾರ

1543601765-29243-A-photo-horoscope

ಮೇಷ :– ಹಿರಿಯರ ಆಶೀರ್ವಾದದ ಫಲವಾಗಿ ಮನಃಸ್ಥೆತ್ರೖರ್ಯ ಸಂಪಾದಿಸಿಕೊಂಡು ಜೀವನದಲ್ಲಿಗೆಲ್ಲಲು ಮುಂದಾಗುವಿರಿ. ಅದಕ್ಕೆ ಸುತ್ತಮುತ್ತಲಿನ ವಾತಾವರಣ ನಿಮಗೆ ಸಹಕಾರಿಯಾಗಿ ನಿಲ್ಲುವುದು. ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಿ.

ವೃಷಭ :- ನಿಮ್ಮ ಮನಸ್ಸು ಪ್ರಸನ್ನತೆಯಲ್ಲಿಇರಲಿ. ಭೀಮಬಲ ಸಂಪ್ರಾಪ್ತಿಯಿಂದ ಎಲ್ಲಾಕೆಲಸ ಕಾರ್ಯಗಳಲ್ಲಿಯಶಸ್ಸು ದೊರೆಯುವುದು. ನಿಮ್ಮ ಹೆಚ್ಚಿನ ಸಂತೋಷಕ್ಕೆ ಮಕ್ಕಳು ಮತ್ತು ಮೊಮ್ಮಕ್ಕಳು ಕಾರಣೀಭೂತರಾಗುವರು. ಅವರಿಗೆ ಶುಭ ಹಾರೈಸುವಿರಿ.

ಮಿಥುನ :- ಕಾರಣವಿಲ್ಲದ ಆರೋಪವನ್ನು ನಿಮ್ಮ ಮೇಲೆ ಹೊರಿಸಿ ಮನೋಬಲ ಕುಗ್ಗಿಸುವವರ ಬಗ್ಗೆ ಎಚ್ಚರದಿಂದ ಇರಿ. ತಲೆನೋವು ಮುಂತಾದ ತೊಂದರೆಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಕಟಕ :– ‘ಸಕಲಗ್ರಹಬಲ ನೀನೇ ಸರಸಿಜಾಕ್ಷ’ ಎಂದು ಭಗವಂತನ ಮೊರೆ ಹೋಗುವುದರಿಂದ ಬಂದಂತಹ ಆಪತ್ತು ದೂರವಾಗುವುದು. ಭಗವಂತನನ್ನು ಆರಾಧಿಸುವ ಮೂಲಕ ಇಚ್ಛಿತ ಕಾರ್ಯಗಳನ್ನು ಪೂರ್ಣಗೊಳಿಸಿಕೊಳ್ಳುವಿರಿ.

ಸಿಂಹ :- ವಿನಾಕಾರಣ ಅನೀರಿಕ್ಷಿತ ಬೆಳವಣಿಗೆಯೊಂದು ಸಂಭವಿಸಿ ಕೂಡಿಟ್ಟ ಹಣಕ್ಕೆ ಸಂಚಕಾರ ಬರುವುದು. ವಿಪರೀತವಾಗಿ ಹಣ ಕೈಬಿಡುವುದು. ಈ ಬಗ್ಗೆ ಎಚ್ಚರದಿಂದ ಇರಿ. ಬೇರೊಬ್ಬರ ವ್ಯವಹಾರದಲ್ಲಿ ಜಾಮೀನು ಪತ್ರಕ್ಕೆ ಸಹಿ ಹಾಕದಿರಿ.

ಕನ್ಯಾ :- ಬೇಕಿರದ ಮಾತುಗಳನ್ನೇ ಆಡಿ ತಮಾಷೆ ನೋಡುವಂತಹ ಮಂದಿಯನ್ನು ದೂರವಿಡಿ. ಇದರಿಂದ ನಿಮ್ಮ ವರ್ಚಸ್ಸು ಗೌರವ ಹೆಚ್ಚುವುದು. ಆರ್ಥಿಕ ಸ್ಥಿತಿ ಸದೃಢವಾಗಿರುವುದು.

ತುಲಾ :- ಸ್ವಚ್ಛತೆಯೇ ದೇವರು ಎಂದರು ಅನುಭಾವಿಗಳು. ಅಂತೆಯೇ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಕಸ ಮತ್ತು ಕೊಳೆಯಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಿ. ಇದರಿಂದ ಮನಸ್ಸು ಖುಷಿ ಅನುಭವಿಸುವುದು ಮತ್ತು ಸುತ್ತಮುತ್ತಲು ಸ್ವಚ್ಛತೆ ಇರುವುದು.

ವೃಶ್ಚಿಕ :- ತಾಳ್ಮೆಯಿಂದ ಇರುವುದು ಸೋಲಲ್ಲ. ಬದುಕಿನ ಘನತೆಗಾಗಿ ಬೇಕಾದಂತಹ ತಾಳ್ಮೆಯನ್ನು ಸಂಪಾದಿಸಿ ಗೆಲ್ಲುವಿರಿ. ಪ್ರಯಾಣ ಕಾಲದಲ್ಲಿ ಎಚ್ಚರ ಇರಲಿ. ಸಣ್ಣ ಪುಟ್ಟ ಪೆಟ್ಟುಗಳು ಆಗುವ ಸಾಧ್ಯತೆ ಇದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿ.

ಧನುಸ್ಸು :- ಮನಸ್ಸು ಬೇಡದ ವಿಚಾರಗಳತ್ತಲೇ ಗಿರಕಿ ಹೊಡೆಯುತ್ತಿರುವುದರಿಂದ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಆಗುತ್ತಿಲ್ಲ. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಸೋಮವಾರ ಈಶ್ವರ ದೇವಾಲಯದಲ್ಲಿರುದ್ರಾಭಿಷೇಕ ಮಾಡಿಸಿ.

ಮಕರ :- ನಿಮ್ಮ ಹತ್ತಿರದ ಸಂಬಂಧಿಗಳು ಚುಚ್ಚಿ ಚುಚ್ಚಿ ಮಾತನಾಡಿ ನಿಮ್ಮನ್ನು ಕೆರಳಿಸುವ ಸಾಧ್ಯತೆ ಇದೆ. ಆದರೆ ಅವರ ಮಾತಿಗೆ ಉತ್ತರ ಕೊಡದೆ ಸುಮ್ಮನಿರಿ. ನಿಮ್ಮ ಮನೋಕಾಮನೆಗಳು ಭಗವಂತನ ದಯೆಯಿಂದ ನೆರವೇರುವುದು.

ಕುಂಭ :– ನಿಶ್ಚಯವಾದ ಯಶಸ್ಸಿಗೆ ಕಲ್ಲುಹಾಕುವವರಿದ್ದಾರೆ. ಎಚ್ಚರದ ಹೆಜ್ಜೆಯೇ ನಿಮ್ಮ ಗುರಿಯಾಗಿರಲಿ. ನಿಮ್ಮ ಮುಂದೆ ಆಡಿಕೊಂಡ ವ್ಯಕ್ತಿಗಳು ನಿಮ್ಮ ಕಾರ್ಯವೈಖರಿಯನ್ನು ನೋಡಿ ಬೆರಗಾಗುವರು.

ಮೀನ :– ನಿಮ್ಮದೇ ಆದ ಗುರಿ ತಲುಪುವಲ್ಲಿಗೆಳೆಯರ ವಿಶೇಷ ಬೆಂಬಲ ಲಭ್ಯವಾಗಲಿದೆ. ಮನಸ್ಸನ್ನು ಸಮಾಧಾನ ಮಾಡಿಕೊಳ್ಳಿ. ವಿವಿಧ ಮೂಲಗಳಿಂದ ಹಣಕಾಸು ಬರುವುದರಿಂದ ಒಳಿತಾಗುವುದು.

Latest News

ಮಾಹಿತಿ

ಕರ್ನಾಟಕ ಸರ್ಕಾರದಿಂದ ಪಡಿತರ ಚೀಟಿ ಅರ್ಜಿದಾರರಿಗೆ ಮಹತ್ವದ ಸೂಚನೆ

ಸರ್ಕಾರ ಹೊರಡಿಸಿರುವ ಈ ಆದೇಶದಲ್ಲಿ 2022 ರವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಅರ್ಹ ಕುಟುಂಬಗಳಿಗೆ ಹೊಸ ಆದ್ಯತಾ ಪಡಿತರ ಚೀಟಿಯನ್ನು(Ration card) ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ

ಡಿಜಿಟಲ್ ಜ್ಞಾನ

ಡಿಸೆಂಬರ್ 1 ರಿಂದ ಡಿಜಿಟಲ್ ರೂಪಾಯಿ ; ಈ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ ಓದಿ

 ಇನ್ನು ಪೈಲಟ್ ಯೋಜನೆಯಲ್ಲಿ ಭಾಗವಹಿಸುವ ಗ್ರಾಹಕರು ಮತ್ತು ವ್ಯಾಪಾರಿಗಳನ್ನು ಒಳಗೊಂಡ ಕ್ಲೋಸ್ಡ್ ಯೂಸರ್ ಗ್ರೂಪ್(CUG) ಅನ್ನು ಮಾತ್ರ ಇದು ಒಳಗೊಂಡಿದೆ ಎಂದು ಆರ್‌ಬಿಐ ಹೇಳಿದೆ.

ರಾಜಕೀಯ

ಖರ್ಗೆ ಹೆಸರಿಗೆ ಮಾತ್ರ ಅಧ್ಯಕ್ಷ, ಪೆನ್ನಿನ ಟಾಪ್ ಓಪನ್ ಮಾಡಲೂ ಮೇಡಮ್ ಆಣತಿಗೆ ಕಾಯಬೇಕು : ಬಿಜೆಪಿ

ಕಾರ್ಯಕರ್ತರೇ ಇಲ್ಲದ ಕಾಂಗ್ರೆಸ್(Congress) ಪಕ್ಷಕ್ಕೆ ಹೈಕಮಾಂಡ್ ಏಕೆ ಬೇಕು? ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

ದೇಶ-ವಿದೇಶ

ಕಸ್ಟಡಿಯಲ್ಲಿ ಸಾವು : ಪೊಲೀಸರಿಗೆ 20 ರೂ.ಲಕ್ಷ ದಂಡ ವಿಧಿಸಿ, ಪ್ರಕರಣವನ್ನು CBIಗೆ ನೀಡಿದ ಹೈಕೋರ್ಟ್!

ಮಧ್ಯಪ್ರದೇಶದ ಬೆಳಗಾದ ಗ್ರಾಮದ ನಿವಾಸಿ ಸುರೇಶ್ ರಾವತ್ ಅವರನ್ನು ಗ್ವಾಲಿಯರ್‌ನಲ್ಲಿ ಸ್ಥಳೀಯ ಪೊಲೀಸರು ಆಗಸ್ಟ್ 10, 2019 ರಂದು ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಿದ್ದಾರೆ.