ಎಸಿಬಿ ಕಚೇರಿಗೂ ಕೊರೋನಾ ಕಾಲಿಟ್ಟಿದೆ.. ಎಸಿಬಿಯ ಡಿವೈಎಸ್ ಒಬ್ಬರಿಗೆ ಗುರುವಾರ ಕೊರೋನಾ ಸೋಂಕು ದೃಢಪಟ್ಟಿರೋ ವರದಿಯಾಗಿದೆ. ಈ ಹಿನ್ನೆಲೆ ಸದ್ಯ ಇಡೀ ಎಸಿಬಿ ಕಚೇರಿಯನ್ನು ಬಿಬಿಎಂಪಿ ಸ್ಯಾನಿಟೈಸ್ ಮಾಡಿದ್ದಾರೆ.
ಸ್ಯಾನಿಟೈಸ್ ಬಳಿಕ ಎಸಿಬಿ ಕಚೇರಿಯನ್ನು ೪೮ ಗಂಟೆಗಳ ಕಾಲ ತಾತ್ಕಾಲಿಕ ಸೀಲ್ ಡೌನ್ ಮಾಡಲಾಗಿದೆ. ಜೊತೆಗೆ ಸದ್ಯ ಡಿವೈಎಸ್ಪಿ ಸಂಪರ್ಕದಲ್ಲಿರೋರನ್ನು ಬಿಬಿಎಂಪಿ ಪತ್ತೆ ಮಾಡುತ್ತಿದೆ. ಈ ಹಿಂದೆಯೂ ಎಸಿಬಿಯಲ್ಲಿ ಓರ್ವ ಅಧಿಕಾರಿಗೆ ಕೊರೋನಾ ಬಂದಿತ್ತು.
ರಾಜ್ಯದಲ್ಲಿ ಕೊರೋನಾ ಸೋಂಕು ಜಾಸ್ತಿಯಾಗ್ತಿದೆ. ಕಮ್ಯುನಿಟಿ ಸ್ಪ್ರೆಡ್ ಮೂಲಕ ವೈರಸ್ ಹೆಚ್ಚು ಹರಡುತ್ತಿದೆ ಅನ್ನೋ ಮಾಹಿತಿ ಹೊರ ಬಿದ್ದಿದೆ .ಇದರ ಬೆನ್ನಲೆ ಇದೀಗ ನಗರದ ಎಸಿಬಿ ಕಚೇರಿಗೂ ಕೊರೋನಾ ಕಂಟಕ ಎದುರಾಗಿದ್ದು ; ಮತ್ತಷ್ಟು ಆತಂಕ ಮನೆಮಾಡಿದೆ.