ಜನವರಿ ೩೦ ರಂದು ಭಾರತದಲ್ಲಿ ಮೊದಲ ಕೋವಿಡ್-೧೯ ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ವಿದ್ಯಾಭ್ಯಾಸಕ್ಕೆಂದು ಚೀನಾದ ವುಹಾನ್ ಗೆ ಹೋಗಿ, ಅಲ್ಲಿಂದ ಭಾರತಕ್ಕೆ ಹಿಂದಿರುಗಿದ್ದ ಕೇರಳದ ವಿದ್ಯಾರ್ಥಿಗೆ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯಿಂದ ಪಡೆದ ಗಂಟಲು ದ್ರವವನ್ನು ಪರೀಕ್ಷೆಗಾಗಿ ಪುಣೆಯ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು.
ಸಂಶೋಧನೆ ವೇಳೆ ದ್ರವ ಮಾದರಿಯಲ್ಲಿ ಪತ್ತೆಯಾದ ವೈರಸ್ ಗಳು ವುಹಾನ್ ನ ವೈರಸ್ ಮಾದರಿಗಳೊಂದಿಗೆ ೯೯.೯೮% ತಾಳೆ ಆಗಿರುವುದು ಕಂಡುಬAದಿದೆ. ಪ್ರಯೋಗದ ವೇಳೆ ಕೋವಿಡ್-೧೯ ರೋಗಕ್ಕೆ ಕಾರಣವಾಗುವ SಂಖS-ಅov-೨ ವೈರಸ್ ಗಳು ದುಂಡಗಿನ ರೂಪದಲ್ಲಿದ್ದು, ಮೈ ಮೇಲೆ ಹೊರಚಾಚಿದ ಕಾಂಡದ ರೀತಿಯ ಮುಳ್ಳುಗಳನ್ನು ಹೊಂದಿರುವುದು ಗೋಚರವಾಗಿದೆ. ಇನ್ನು, ಇದೇ ಲ್ಯಾಬ್ ನಲ್ಲಿ ಅಧ್ಯಯನದ ಸಲುವಾಗಿ ಕೊರೊನಾ ವೈರಸ್ ನ ಮೂಲ ತಳಿಯ ವಿಶಿಷ್ಟ ಲಕ್ಷಣಗಳಿಗೆ ಹೋಲಿಕೆಯಾಗುವ ಒಂದು ನಿರ್ದಿಷ್ಟ ವೈರಾಣು ಕಣವೊಂದನ್ನು ಸಂರಕ್ಷಿಸಿ ಇಡಲಾಗಿದೆ.