ಬೆಂಗಳೂರು: ಬಸವ ಕಲ್ಯಾಣ ಶಾಸಕ ನಾರಾಯಣರಾವ್ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿ ಮತ್ತಷ್ಟು ಚಿಂತಾಹನಕವಾಗಿತ್ತು .
ಇದೀಗ ( 24-ಸೆ 2020 )ಕೊರೋನಾಗೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.ಸಚಿವ ನಾರಾಯಣರಾವ್ (65) ಅವರಿಗೆ ನ್ಯುಮೋನಿಯಾ ,ಅಧಿಕ ರಕ್ತದೊತ್ತಡ, ಮಧುಮೇಹದ ಸಮಸ್ಯೆ ಕೂಡಾ ಇತ್ತು ಎನ್ನಲಾಗಿದೆ. ಮಣಿಪಾಲ್ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದೀಗ ಮಾರಕ ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ ಶಾಸಕ ನಾರಾಯಣ ರಾವ್ . ದೇಶದಲ್ಲಿ ಕೊರೋನಾ ದಿನದಿಂದ ದಿನಕ್ಕೆ ತೀರ್ವವಾಗಿ ಹೆಚ್ಚಾಗುತ್ತಿದ್ದು ;ಈ ಮಾರಕ ರೋಗಕ್ಕೆ ಇನ್ನೆಷ್ಟು ಜನ ಬಲಿಯಾಗಲಿದ್ದಾರೋ ಎಂಬ ಆತಂಕ ಉಂಟಾಗುತ್ತಿದೆ.